ಮಧ್ವರ ಕುರುಹು ಸಾರುವ ಪಾಜಕ
ಮಧ್ವಾಚಾರ್ಯರ ಜನ್ಮಸ್ಥಳ, ಬಾಲ್ಯದ ಬಗ್ಗೆ ಹೇಳುವ ಕುರುಹುಗಳು
Team Udayavani, Jan 8, 2020, 5:23 AM IST
ತೋರಿದ ಮಹಿಮೆಗಳನ್ನು ಅವರ ಜನ್ಮಸ್ಥಳ ಪಾಜಕದಲ್ಲಿ ನೋಡಬಹುದು. ಇಂತಹ ಸ್ಮಾರಕಗಳು ಅಧ್ಯಯನಶೀಲರಿಗೆ ಮಹತ್ವದ ಆಕರಗಳಾಗುತ್ತವೆ.
ಉಡುಪಿ: ಉಡುಪಿಯಿಂದ ಆಗ್ನೇಯ ದಿಕ್ಕಿಗೆ ನೇರ ಸಾಗಿದರೆ ಐದು ಕಿ.ಮೀ., ಬಸ್ ಮಾರ್ಗದಲ್ಲಿ ಸಾಗಿದರೆ 16 ಕಿ.ಮೀ. ದೂರದಲ್ಲಿ ಇದೆ. ಇದು ಮಧ್ವಾಚಾರ್ಯರ ಜನ್ಮಸ್ಥಳ. ಅವರ ತಂದೆ ಮಧ್ಯಗೇಹ ಭಟ್ಟರು ವಾಸವಿದ್ದ ಮನೆಯಲ್ಲಿ ಅವರ ಕುಲದೇವ ಅನಂತಪದ್ಮನಾಭ ಪೂಜಿತನಾಗುತ್ತಿದ್ದಾನೆ. ಮಧ್ಯಗೇಹ ಭಟ್ಟರು ಸೇವೆ ಸಲ್ಲಿಸಿದ ಉಡುಪಿಯ ಶ್ರೀಅನಂತೇಶ್ವರನ ಉತ್ಸವಮೂರ್ತಿ ಇದು ಎಂಬ ಪ್ರತೀತಿಯೂ ಇದೆ.
ಪಾಜಕ ಪರಿಸರದಲ್ಲಿ ಮಧ್ವಾಚಾರ್ಯರು ಬಿಟ್ಟು ಹೋದ ಹಲವು ಕುರುಹುಗಳು ಕಂಡುಬರುತ್ತವೆ. ಅನಂತಪದ್ಮನಾಭ ಪೂಜಾ ಮಂದಿರದ ಬಲ ಬದಿ ತುಳಸಿಕಟ್ಟೆ ಬಳಿ ದೊಡ್ಡ ಹಾಸುಗಲ್ಲು ಇದೆ. ಇದು ಮಧ್ವರು ವಾಸುದೇವನಾಗಿದ್ದಾಗ ಬಾಲಕನಿಗೆ ತಂದೆಯವರು ಅಕ್ಷರಾಭ್ಯಾಸ ಮಾಡಿಸಲು ಉಪಯೋಗಿಸಿದ ಶಿಲೆ. ಜ್ಞಾನಾಭಿವೃದ್ಧಿಗೆ ಪೂರಕ ಎಂಬ ಕಾರಣಕ್ಕಾಗಿ ಈ ಶಿಲೆಯ ಮೇಲೆ ಅಕ್ಷರಾಭ್ಯಾಸ ಮಾಡಿಸುವವರು ಇದ್ದಾರೆ.
ಹುಣಸೆ ಬೀಜ- ಮೋಕ್ಷದ ಬೀಜ
ಮಧ್ಯಗೇಹರು ಒಬ್ಬರಿಂದ ಸಾಲವಾಗಿ ಒಂದು ಎತ್ತನ್ನು ಕೊಂಡು ಆ ಸಾಲ ತೀರಿಸಲಾಗಲಿಲ್ಲ. ಆತ ಬಂದು ಮನೆ ಎದುರು ಧರಣಿ ನಡೆಸಿದ, ಒಳ ಹೋಗಬಿಡಲಿಲ್ಲ. ವಾಸುದೇವ ಊಟಕ್ಕೆ ಕರೆಯಲು ಹೋದಾಗ ಪರಿಸ್ಥಿತಿ ಗಮನಿಸಿದ. ಮನೆಯಲ್ಲಿದ್ದ ಹುಣಸೆ ಮರದ ಬೀಜಗಳನ್ನು ಧನದ ಮೊತ್ತಕ್ಕೆ ಎಣಿಸಿ ಎತ್ತಿನ ಮಾಲಕನಿಗೆ ಕೊಟ್ಟ. ಆತ ಮನೆಗೆ ಹೋದ. ಅನಂತರ ಒಂದು ದಿನ ಮಧ್ಯಗೇಹರು ಹಣ ಹೊಂದಿಸಿಕೊಂಡು ಕೊಡಲು ಹೋದಾಗ “ನಿಮ್ಮ ಮಗ ಅಂದೇ ಸಾಲವನ್ನು ತೀರಿಸಿದ’ ಎಂದು ಹಣ ಸ್ವೀಕರಿಸಲು ನಿರಾಕರಿಸಿದ. ಇದು ಮೋಕ್ಷದ ಬೀಜ ಎಂದು ಮಧ್ವವಿಜಯದಲ್ಲಿ ಉಲ್ಲೇಖವಿದೆ. ಇದನ್ನೇ ದಾಸವರೇಣ್ಯ ಶ್ರೀಜಗನ್ನಾಥದಾಸರು ಹೀಗೆ ಬಣ್ಣಿಸಿದ್ದಾರೆ: ಹುಣಸೆಬೀಜದಿ ಪಿತ ಋಣವ ತಿದ್ದಿದ ಪೂರ್ಣ ಗುಣವಂತ ಗುರುವೆ ದಯವಾಗೊ| ದಯವಾಗೊ ನೀನೆನ್ನ ಋಣ ಮೂರರಿಂದ ಗೆಲಿಸಯ್ಯ|| ತಂದೆ ಋಣ ತೀರಿಸಿದ ಈ ಹುಣಸೆ ಮರ ಮಂದಿರದ ಆವರಣದಲ್ಲಿದೆ. ಪ್ರಾಯಃ ಅದೇ ಮರವಲ್ಲದೆ ಇರಬಹುದು, ಅದರ ವಂಶವೃಕ್ಷ ಬೆಳೆದಿದೆ. ಈ ವೃಕ್ಷದ ದರ್ಶನ ಋಣ ಪರಿಹಾರಕ್ಕೆ ಉತ್ತಮ ಸಾಧನ ಎಂಬುದು ಜ್ಞಾನಿಗಳ ಅಭಿಮತ.
ಹಾಲು ಪಾತ್ರೆ ಮುಚ್ಚಲು ಹಾಸುಗಲ್ಲು
ಮಂದಿರದ ಆವರಣದಲ್ಲಿರುವ ವಾಸುದೇವತೀರ್ಥದ ದಕ್ಷಿಣದ ಬದಿ ನೆಲದ ಮಟ್ಟದಲ್ಲಿ ಎರಡು ವಿಶಾಲ ಹಾಸುಗಲ್ಲುಗಳಿವೆ. ತಾಯಿ ಒಮ್ಮೆ ಹಾಲು ಮೊಸರಿನ ಪಾತ್ರೆಗಳನ್ನು ಸ್ವಲ್ಪ ನೋಡಿಕೊಂಡಿರಲು ಹೇಳಿ ಹೋದರು. ಬಾಲಕ ವಾಸುದೇವ ಪಾತ್ರೆಗಳ ಮೇಲೆ ಹಾಸುಗಲ್ಲುಗಳನ್ನಿಟ್ಟು ಆಟವಾಡಲು ತೆರಳಿದ. ಇವೇ ಆ ಹಾಸುಗಲ್ಲುಗಳು.
ಆಲದ ಮರ
ವಾಸುದೇವ ಒಮ್ಮೆ ಕೋಲು ಹಿಡಿದು ಓಡಾಡುತ್ತಿದ್ದ. ತಂದೆ ಅದೇನು ಎಂದಾಗ ಭಕ್ತಿ ಮಾರ್ಗ ತೋರುವ ಸಿದ್ಧಾಂತವನ್ನು ಪ್ರಚಾರಕ್ಕೆ ತರುವೆನೆಂದ. ಈ ಕಾಲದಲ್ಲಿ ನಿನ್ನ ಕೈಯಲ್ಲಿರುವ ಒಣಕೋಲು ಚಿಗುರಿದಾಗ ಮಾತ್ರ ಎಂದು ತಂದೆ ಉತ್ತರಿಸಿದರು. ವಾಸುದೇವ ತತ್‌ಕ್ಷಣವೇ ಆ ಕೋಲನ್ನು ಮಣ್ಣಿನಲ್ಲಿ ಊರಿದ. ಕೋಲು ಚಿಗುರಿತು. ಕ್ರಮವಾಗಿ ಬೆಳೆಯಿತು. ದೊಡ್ಡ ಮರವಾಯಿತು. ವಾಸುದೇವ ತೀರ್ಥದ ಬಳಿ ಈ ವೃಕ್ಷವಿದೆ.
ಪಾದಚಿಹ್ನೆ
ತಾಯಿಯೊಮ್ಮೆ ವಾಸುದೇವನನ್ನು ಊಟಕ್ಕೆಂದು ಕರೆದರು. ಆತ ಕುಂಜಾರುಗಿರಿಯ ದುರ್ಗೆಯನ್ನು ಆರಾಧಿಸುತ್ತಿದ್ದ. ಅದಕ್ಕೂ ಮುನ್ನ ದೈತ್ಯರೂಪದಲ್ಲಿ ಬಂದ ವಿಷವುಳ್ಳ ಪ್ರಾಣಿಯನ್ನು ಕಾಲಹೆಬ್ಬೆರಳಿನಲ್ಲಿ ತುಳಿದು ಸಂಹರಿಸಿದ್ದ. ದೂರದಲ್ಲಿದ್ದ ತಾಯಿ ಕೂಗು ಕೇಳಿತು. ಅಲ್ಲಿಂದ ಒಂದೇ ನೆಗೆತಕ್ಕೆ ಮನೆ ಸಮೀಪದ ಬಂಡೆ ಮೇಲೆ ಜಿಗಿದ. ಅದರ ಪರಿಣಾಮ ಪುಟ್ಟ ಪಾದಗಳ ಗುರುತು ಬಂಡೆ ಮೇಲೆ ಮೂಡಿತು. ಇದೇ ಸ್ಥಳದಲ್ಲಿ ಶ್ರೀವಾದಿರಾಜರು ಮಧ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಇಂದಿಗೂ ಆ ಪಾದದ ಚಿಹ್ನೆ ನೋಡಬಹುದು. ದೈತ್ಯರೂಪಿ ವಿಷದ ಪ್ರಾಣಿಯನ್ನು ಕೊಂದ ಜಾಗದಲ್ಲಿ ಪಾದದ ಹೆಬ್ಬೆರಳಿನ ಗುರುತು ನೋಡಬಹುದು. ಇಲ್ಲಿ ಹನುಮ, ಭೀಮ, ಮಧ್ವರ ಪ್ರತೀಕವನ್ನು ಕೆತ್ತಿಸಿಡಲಾಗಿದೆ.
ವಾಸುದೇವ ಒಂದು ವರ್ಷದ ಬಾಲಕನಾಗಿದ್ದಾಗ ಒಮ್ಮೆ ಕಾಣದಾದ. ಅದು ಸಂಜೆ ವೇಳೆ. ತಾಯಿ ವಿಚಾರಿಸಿದಾಗ “ಬಾಲಕನೊಬ್ಬ ಎತ್ತಿನ ಬಾಲ ಹಿಡಿದುಕೊಂಡು ಹೋಗುತ್ತಿದ್ದ’ ಎಂದು ನೋಡಿದವರೊಬ್ಬರು ಹೇಳಿದರು. ಕೊನೆಗೆ ಮರಳಿ ಬಂದಾಗ ತಾಯಿಗೆ ಮಹದಾನಂದವಾಯಿತು. ಮಂದಿರದಿಂದ ಆಗ್ನೇಯ ದಿಕ್ಕಿನ ಬೆಟ್ಟದಲ್ಲಿ ಆಗ ಮೂಡಿದ ಪಾದ ಚಿಹ್ನೆಗಳಿವೆ. ಆದರೆ ಕೆಲವು ವರ್ಷಗಳ ಹಿಂದೆ ನಡೆದ ಗಣಿಗಾರಿಕೆಯಲ್ಲಿ ಇದರ ಕೆಲ ಭಾಗ ಹಾಳಾಗಿವೆ.
ಆಚಾರ್ಯತ್ರಯರ ಸಂಪರ್ಕದ ನಾಡು
ಆಚಾರ್ಯತ್ರಯರಲ್ಲಿ ಕರ್ನಾಟಕದಲ್ಲಿ ಜನಿಸಿದವರು ಮಧ್ವಾಚಾರ್ಯರು. ಇವರು ತುಳುನಾಡಿನಲ್ಲಿ ಜನಿಸಿದರು ಎನ್ನುವುದು ತುಳುನಾಡಿಗರಿಗೆ ಹೆಮ್ಮೆ. ಇನ್ನಿಬ್ಬರು ಆಚಾರ್ಯರಾದ ಶಂಕರಾಚಾರ್ಯರು ಕರ್ನಾಟಕದ ಶೃಂಗೇರಿಯಲ್ಲಿ ನಾಲ್ಕು ಪೀಠಗಳಲ್ಲಿ ಒಂದನ್ನು ಸ್ಥಾಪಿಸಿದರೆ, ರಾಮಾನುಜಾಚಾರ್ಯರು ಕರ್ನಾಟಕದ ಮೇಲುಕೋಟೆಗೆ ಬಲು ಹತ್ತಿರವಾಗಿದ್ದವರು. ಹೀಗೆ ಆಚಾರ್ಯತ್ರಯರ ಸಂಪರ್ಕ ಕರ್ನಾಟಕಕ್ಕಿದೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.