ಟೋಲ್-ಪಿಡಬ್ಲ್ಯೂಡಿ ಪ್ರಧಾನ ಕಾರ್ಯದರ್ಶಿಗೆ ದೂರು
Team Udayavani, Feb 16, 2017, 3:35 AM IST
ಉಡುಪಿ: ಸಾಸ್ತಾನ ಮತ್ತು ಹೆಜಮಾಡಿ ಟೋಲ್‌ನಲ್ಲಿ ಬಲತ್ಕಾರವಾಗಿ ಟೋಲ್ ಪಡೆಯುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಲೋಕೊಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷೀನಾರಾಯಣ ಅವರನ್ನು ಭೇಟಿಯಾಗಿ ಚರ್ಚಿಸಿದರು. ಟೋಲ್ ಪಡೆಯಲು 144ನೇ ಸೆಕ್ಷನ್ ಜಾರಿಗೊಳಿಸಿ ಟೋಲ್ ಪಡೆಯುವ ಅಗತ್ಯವೇನಿತ್ತು? ಜಿಲ್ಲೆ ಬಂದ್ ಆಗುವ ಸ್ಥಿತಿ ನಿರ್ಮಾಣದತ್ತ ಜಿಲ್ಲಾಡಳಿತ ಕೈ ಹಾಕಿದೆ ಎಂದು ಶ್ರೀನಿವಾಸ ಪೂಜಾರಿ ವಿವರಿಸಿದರು.
ಅಪೂರ್ಣ ಕಾಮಗಾರಿಗೆ ಟೋಲ್ ಪಡೆಯುವುದನ್ನು ಜನರು ವಿರೋಧಿಸಿದಾಗ ಉಸ್ತುವಾರಿ ಮಂತ್ರಿ, ಶಾಸಕರು ಮತ್ತು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಹಿತ ಪ್ರಮುಖರ ಸಭೆ ಕರೆದು, ಕಾಮಗಾರಿಯ ಪೂರ್ಣತೆ ಬಗ್ಗೆ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಂಟಿ ತಪಾಸಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಫೆ. 8ರಂದು ವರದಿ ಸಲ್ಲಿಸಿದಾಗ ವರದಿಯಲ್ಲಿ ಕುಂದಾಪುರದಿಂದ ಹೆಜಮಾಡಿ ವರೆಗೆ 65 ಕಿ. ಮೀ. ಉದ್ದದ ರಸ್ತೆ ನಿರ್ಮಾಣವಾಗಬೇಕಾಗಿದ್ದು, ಅದರಲ್ಲಿ ಮುಖ್ಯವಾಗಿ ಕುಂದಾಪುರ ಮೇಲ್ಸೆತುವೆ ಹಾಗೂ 4 ಲೇನ್‌ರಸ್ತೆಯ 2.26 ಕಿ.ಮೀ. ಮತ್ತು ಉಡುಪಿ ಮತ್ತು ಕರಾವಳಿ ಜಂಕ್ಷನ್ ಬಳಿಯ 10 ಕಿ. ಮೀ. ರಸ್ತೆ, ಪಡುಬಿದ್ರಿ ಭಾಗದಲ್ಲಿ 3.2 ಕಿ. ಮೀ. ರಸ್ತೆ ಬಾಕಿಯಿದ್ದು ಒಟ್ಟು ಚತುಷ್ಪಥ ರಸ್ತೆಯಲ್ಲಿ 6.5 ಕಿ. ಮೀ. ಹೆಚ್ಚಿಗೆ ಕಾಮಗಾರಿ ಬಾಕಿ ಉಳಿದಿದೆ ಎಂದರು.
ಡಿಸಿ ಗುತ್ತಿಗೆದಾರರಿಗೆ ಮಣಿದರೇ?
ಸರ್ವಿಸ್ ರಸ್ತೆಯ ಪ್ರತಿ ಒಟ್ಟು 31 ಕಿ.ಮೀ. ರಸ್ತೆ ಅಗಲವಾಗಬೇಕಾಗಿದ್ದು, ಕೇವಲ 14 ಕಿ.ಮೀ. ರಸ್ತೆ ಮಾತ್ರ ಆಗಿದೆ. ಅಂದರೆ ಕೇವಲ ಶೇ. 50ರಷ್ಟು ಸರ್ವಿಸ್ ರಸ್ತೆಯಾಗಿದೆ. ಸೇತುವೆ ಪೈಕಿ 6 ಹೊಸ ಸೇತುವೆ ನಿರ್ಮಾಣವಾಗಬೇಕಿದ್ದು, ಈ ಪೈಕಿ 5 ಹಳೆಯ ಸೇತುವೆ ಉಳಿಸಿಕೊಂಡು ಕಾರ್ಯಾರಂಭ ಮಾಡಲಾಗಿದೆ. ಸಾಸ್ತಾನ ಟೋಲ್ ಗೇಟಿನ ಬಳಿ ಸರ್ವಿಸ್ ರಸ್ತೆಯನ್ನೂ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಅಪೂರ್ಣ ಕಾಮಗಾರಿ ವರದಿಯನ್ನು ಕೇಂದ್ರಕ್ಕೆ ಮತ್ತು ರಾಜ್ಯಕ್ಕೆ ವರದಿ ಸಲ್ಲಿಸುವ ಬದಲು ಜಿಲ್ಲಾಧಿಕಾರಿ ಗುತ್ತಿಗೆದಾರರಿಗೆ ಏಕೆ ಣಿದಿದ್ದಾರೆ ಎಂದು ಅರ್ಥ ವಾಗುತ್ತಿಲ್ಲ. ನಾನು ಈ ವಿಷಯವನ್ನು ಸದನದಲ್ಲಿ ಪ್ರಸ್ತಾವಿಸಿದ್ದೇನೆ. ಲೋಕೋಪಯೋಗಿ ಪ್ರ.ಕಾರ್ಯದರ್ಶಿ ತತ್‌ಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.