ಬೆಳೆ ಪರಿಹಾರ ಸಹಾಯಧನ ಹೆಕ್ಟೇರ್‌ಗೆ 10,000 ರೂ. ಏರಿಕೆ


Team Udayavani, Nov 2, 2019, 4:49 AM IST

nov-53

ಸಾಂದರ್ಭಿಕ ಚಿತ್ರ

ಆಗಸ್ಟ್‌ , ಸೆಪ್ಟಂಬರ್‌ನಲ್ಲಿ ಅತಿವೃಷ್ಟಿ ಬೆಳೆಹಾನಿ ಪ್ರಕರಣಗಳಿಗೆ ಮಾತ್ರ ಅನ್ವಯ
ರಾಜ್ಯದಲ್ಲಿ 23 ಜಿಲ್ಲೆಗಳ 103 ತಾಲೂಕುಗಳಲ್ಲಿ ಭಾರೀ ಹಾನಿ

ಉಡುಪಿ: ರಾಜ್ಯ ಸರಕಾರ ತೋಟಗಾರಿಕೆ ಮತ್ತು ಕೃಷಿ ಪ್ರವಾಹ ಬೆಳೆ ಹಾನಿ ಸಂಬಂಧಿಸಿ ಎಸ್‌ಡಿಆರ್‌ಎಫ್ ಪರಿಹಾರ ಮಾರ್ಗಸೂಚಿ ಪರಿಷ್ಕರಿಸಿದ್ದು, ಪ್ರತಿ ಹೆಕ್ಟೆರಿಗೆ ಹೆಚ್ಚುವರಿ ಪರಿಹಾರ ಸಹಾಯಧನವನ್ನು (ಇನ್‌ಪುಟ್‌ ಸಬ್ಸಿಡಿಯನ್ನು ) 10,000 ರೂ.ಏರಿಕೆ ಮಾಡಿದೆ.

ಮಾರ್ಗ ಸೂಚಿ ಪರಿಷ್ಕೃತ
ರಾಜ್ಯ ಸರಕಾರ ಆಗಸ್ಟ್‌ನಲ್ಲಿ ಉಂಟಾದ ಅತಿವೃಷ್ಟಿ ಬೆಳೆಹಾನಿ ಪ್ರಕರಣಗಳಿಗೆ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಮಾರ್ಗ ಸೂಚಿಯಲ್ಲಿ ಸೂಚಿಸಿದ ಇನ್‌ಪುಟ್‌ ಸಬ್ಸಿಡಿ ಪಾವತಿಸಲು ನಿಗದಿಪಡಿಸಿರುವ ದರಗಳನ್ನು ಪರಿಷ್ಕರಿಸಿದೆ. ಅದರ ಅನ್ವಯ ದರವನ್ನು ವಾರ್ಷಿಕ ತೋಟಗಾರಿಕೆ ಮತ್ತು ಕೃಷಿ ಬೆಳೆ, ನೀರಾವರಿ ಬೆಳೆ, ಬಹುವಾರ್ಷಿಕ ಬೆಳೆ ಮೂರು ವರ್ಗದಲ್ಲಿ ಪರಿಷ್ಕೃತಗೊಳಿಸಿದೆ. ಈ ವೆಚ್ಚವನ್ನು ಎಸ್‌ಡಿಆರ್‌ಎಫ್ ನಿಧಿಯಡಿ ರಾಜ್ಯ ಸರಕಾರವೇ ಹೆಚ್ಚುವರಿ ಅನುದಾನವನ್ನು ಭರಿಸಲಿದೆ.

23 ಜಿಲ್ಲೆಯಲ್ಲಿ ಬೆಳೆ ಹಾನಿ
2019ರ ಆಗಸ್ಟ್‌ನಿಂದ ರಾಜ್ಯದಲ್ಲಿ 23 ಜಿಲ್ಲೆಗಳ 103 ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಆಗಸ್ಟ್‌ ಅನಂತರ ಹಾನಿಗೆ ಸಂಬಂಧಿಸಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿಯಾಗಿ ತೋಟಗಾರಿಕೆ, ಕೃಷಿ ಹಾನಿ ಸಮೀಕ್ಷೆ ನಡೆಸಿ ವರದಿ ಸರಕಾರಕ್ಕೆ ಸಲ್ಲಿಸಿದೆ. ಕಂದಾಯ ಇಲಾಖೆ ಮೂಲಕ ಅರ್ಹ ರೈತರಿಗೆ ಹೆಚ್ಚುವರಿ ಪರಿಹಾರ ಮೊತ್ತ ಲಭಿಸಲಿದೆ.

ಎಷ್ಟು ಏರಿಕೆ?
ವಾರ್ಷಿಕ ತೋಟಗಾರಿಕೆ ಮತ್ತು ಕೃಷಿ ಬೆಳೆಗೆ ಸಂಬಂಧಿಸಿ ಈ ಹಿಂದೆಯಿದ್ದ ಪರಿಹಾರ 6,800 ರೂ., ಮೊತ್ತವನ್ನು 16,800 ರೂ.,ಗೆ ಏರಿಸಲಾಗಿದೆ. ನೀರಾವರಿ ಬೆಳೆಗೆ 13,500 ರೂ. ರಿಂದ 23,500 ರೂ.,ಗೆ ಏರಿಕೆ ಮಾಡಲಾಗಿದೆ. ಬಹುವಾರ್ಷಿಕ ಬೆಳೆಗಳಿಗೆ 18,000ರೂ. ನಿಂದ 28,000 ರೂ.,ಗೆ ಏರಿಕೆಯಾಗಿದೆ.

ಯಾವೆಲ್ಲ ಜಿಲ್ಲೆಗಳಿಗೆ ಲಾಭ?
ಬೆಳಗಾವಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಯಾದಗಿರಿ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ಕಲಬುರಗಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜ ನಗರ, ಮಂಡ್ಯ ಜಿಲ್ಲೆಯ 103 ತಾಲೂಕಿನ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.

ಉಡುಪಿಯಲ್ಲಿ ಎಷ್ಟು ಹಾನಿ ?
ಆಗಸ್ಟ್‌ ಹಾಗೂ ಸೆಪ್ಟಂಬರ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಹಾಗೂ ಕೃಷಿಯಲ್ಲಿ ಭತ್ತ ಬೆಳೆಗೆ ಹೆಚ್ಚು ಹಾನಿಯಾಗಿದೆ. ಉಡುಪಿಯಲ್ಲಿ ಆಗಸ್ಟ್‌ನಲ್ಲಿ 264.98 ಹೆಕ್ಟೆರ್‌ ಭತ್ತ ಬೆಳೆ ಹಾನಿಯಾಗಿದೆ. ಉಡುಪಿ 98.06 ಹೆಕ್ಟೆರ್‌, ಕಾರ್ಕಳ 27.81 ಹೆಕ್ಟೆರ್‌, ಕುಂದಾಪುರ 139.11 ಹೆಕ್ಟೆರ್‌ ಭತ್ತ ಬೆಳೆಗೆ ಹಾನಿ ಸಂಭವಿಸಿದೆ. 713 ಮಂದಿ ಭತ್ತ ಬೆಳೆಗಾರರು ಬೆಳೆಹಾನಿ ಸಂತ್ರಸ್ತರಿದ್ದಾರೆ. 24 ಹೆಕ್ಟೆರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 265 ಮಂದಿ ರೈತರು ತೋಟಗಾರಿಕೆ ಬೆಳೆಹಾನಿ ಸಂತ್ರಸ್ತರಿದ್ದಾªರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆಗಸ್ಟ್‌ ಹಾಗೂ ಸೆಪ್ಟಂಬರ್‌ನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಹಾಗೂ ಕೃಷಿಯಲ್ಲಿ ಭತ್ತ ಬೆಳೆಗೆ ಹೆಚ್ಚು ಹಾನಿಯಾಗಿದೆ. ಉಡುಪಿಯಲ್ಲಿ ಆಗಸ್ಟ್‌ನಲ್ಲಿ 264.98 ಹೆಕ್ಟೆರ್‌ ಭತ್ತ ಬೆಳೆ ಹಾನಿಯಾಗಿದೆ. ಉಡುಪಿ 98.06 ಹೆಕ್ಟೆರ್‌, ಕಾರ್ಕಳ 27.81 ಹೆಕ್ಟೆರ್‌, ಕುಂದಾಪುರ 139.11 ಹೆಕ್ಟೆರ್‌ ಭತ್ತ ಬೆಳೆಗೆ ಹಾನಿ ಸಂಭವಿಸಿದೆ. 713 ಮಂದಿ ಭತ್ತ ಬೆಳೆಗಾರರು ಬೆಳೆಹಾನಿ ಸಂತ್ರಸ್ತರಿದ್ದಾರೆ. 24 ಹೆಕ್ಟೆರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 265 ಮಂದಿ ರೈತರು ತೋಟಗಾರಿಕೆ ಬೆಳೆಹಾನಿ ಸಂತ್ರಸ್ತರಿದ್ದಾªರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ ಸಲ್ಲಿಸಿದೆ
ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟರ್‌ಗೆ 10,000 ರೂ. ಹೆಚ್ಚುವರಿ ಪರಿಹಾರ ಮೊತ್ತ ಸಿಗಲಿದೆ. ಈಗಾಗಲೇ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿಯಾಗಿ ತೋಟಗಾರಿಕೆ, ಕೃಷಿ ಹಾನಿ ಸಮೀಕ್ಷೆ ನಡೆಸಿ ವರದಿ ಸರಕಾರಕ್ಕೆ ಸಲ್ಲಿಸಿದೆ.
-ಜಿ. ಜಗದೀಶ್‌, ಜಿಲ್ಲಾಧಿಕಾರಿ ಉಡುಪಿ

ಟಾಪ್ ನ್ಯೂಸ್

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಕಾರ್ಕಳ ನಗರದಲ್ಲೂ ನೆಟ್‌ ಕಿರಿಕಿರಿ!

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

ಕಾರ್ಕಳ ನಗರದಲ್ಲೂ ನೆಟ್‌ ಕಿರಿಕಿರಿ!

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

7

Mulki: ರಾಷ್ಟ್ರೀಯ ಹೆದ್ದಾರಿ; ಶೀಘ್ರ ಸರ್ವಿಸ್‌ ರಸ್ತೆ ಕಾಮಗಾರಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.