ಹೊದ್ರಾಳಿ-ಅಮಾವಾಸ್ಯೆ ಕಡು ರಸ್ತೆ ದುರವಸ್ಥೆ
Team Udayavani, Oct 22, 2019, 5:49 AM IST
ಕೋಟೇಶ್ವರ: ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಹೊದ್ರಾಳಿ-ಅಮಾವಾಸ್ಯೆ ಕಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಈ ಮಾರ್ಗದಲ್ಲಿ ಪಾದಚಾರಿಗಳು ಸಾಗುವುದು ಸಹ ಕಷ್ಟ ಸಾಧ್ಯವಾದ ಪರಿಸ್ಥಿತಿಗೆ ಈವರೆಗೂ ಮುಕ್ತಿ ದೊರಕಿಲ್ಲ.
ಅನಾದಿ ಕಾಲದಿಂದಲೂ ಅಮಾವಾಸ್ಯೆ ಕಡು ಮಾರ್ಗವೆಂದೇ ಗುರುತಿಸಿಕೊಂಡಿರುವ ಈ ಮುಖ್ಯ ರಸ್ತೆಯು ಭಾರೀ ಹೊಂಡಗಳಿಂದ ಕೂಡಿದ್ದು, ಕಳೆದ 1 ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮತ್ತಷ್ಟು ಹಾಳಾಗಿದೆ. ಕಳೆದ 15 ದಿನಗಳ ಹಿಂದೆ ರಸ್ತೆಯ ದುಸ್ಥಿತಿ ಬಗ್ಗೆ ಉದಯವಾಣಿ ಸಚಿತ್ರ ವಿಶೇಷ ವರದಿ ಪ್ರಕಟಿಸಿದ್ದರೂ ಇಲಾಖೆ ಸಹಿತ ಜನ ಪ್ರತಿನಿಗಳು ಸ್ಪಂದಿಸದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲೋಕೋಪಯೋಗಿ ಹಾಗೂ ಮೀನುಗಾರಿಕಾ ಇಲಾಖೆ ಅನುದಾನದ ಕೊರತೆಯ ಬಗ್ಗೆ ಬೊಟ್ಟು ಮಾಡಿದರೆ ಬೀಜಾಡಿ ಗ್ರಾ.ಪಂ. ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿದ್ದು ಲಕ್ಷಾಂತರ ರೂ. ಅನುದಾನ ಒದಗಿಸುವುದು ಕಷ್ಟ ಸಾಧ್ಯ ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ.
ರಸ್ತೆಯ ಮುಂದಿನ ಗತಿ ಏನು? :
ಕೊಡಿ ಹಬ್ಬ ಸಮೀಪಿಸುತ್ತಿರುವಂತೆ ಅಮಾವಾಸ್ಯೆ ಕಡುವಿಗೆ ಕೋಟೀಲಿಂಗೇಶ್ವರನ ಉತ್ಸವ ಮೂರ್ತಿಯೊಡನೆ ಸಾಗಲು ಈ ಮಾರ್ಗ ಬಳಸುವುದು ಪರಂಪರೆಯ ಪದ್ಧತಿಯಾಗಿದೆ. ಆದರೆ ಸಂಪೂರ್ಣವಾಗಿ ಬಸವಳಿದ ಹೊದ್ರಾಳಿ ರಸ್ತೆಯಲ್ಲಿ ದೇವರ ಮೂರ್ತಿಯೊಡನೆ ಸಾಗುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಎದುರಾಗಿರುವುದು ರಸ್ತೆಯ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.