ಕಾಯಿಲೆ ಗುಣವಾಗದಿದ್ದರೂ ಮನೆ ಆಸೆ ನೀಗಿತು

ವಿಶಿಷ್ಟ ಅಂಗವೈಕಲ್ಯದಿಂದ ಬಳಲುತ್ತಿರುವ ಇಬ್ಬರು ಬಾಲಕರು; ದಾನಿಗಳಿಂದ ಮನೆ ಹಸ್ತಾಂತರ

Team Udayavani, Jul 6, 2019, 5:07 AM IST

0307UDSB8

ಉಡುಪಿ: ಅಪರೂಪದ ಅಂಗವೈಕಲ್ಯ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರನ್ನು ಹೊಂದಿದ, ಗುಡ್ಡದ ಮೇಲಿನ ಮನೆಯಲ್ಲಿ ಅಸಹಾಯಕ ಬದುಕು ಸಾಗಿಸುತ್ತಿದ್ದ ಸರಳೇಬೆಟ್ಟಿನ ಪ್ರಮೀಳಾ ಪೂಜಾರಿ ಅವರ ಕುಟುಂಬಕ್ಕೆ ದಾನಿಗಳು ಮನೆ ನಿರ್ಮಿಸಿಕೊಟ್ಟಿದ್ದಾರೆ.

ಇದು “ಉದಯವಾಣಿ’ಯ ವರದಿಗೆ ದಾನಿಗಳು ಸ್ಪಂದಿಸಿದ ಪರಿಣಾಮ. ಸರಳೇಬೆಟ್ಟಿನ ಗಣೇಶ್‌ ಭಾಗ್‌ನ ಗುಡ್ಡದಲ್ಲಿ ವಾಸಿಸುತ್ತಿದ್ದ ಪ್ರಮೀಳಾ ಪೂಜಾರಿ ಅವರ ಪುತ್ರರಾದ ಧನುಷ್‌(19) ಮತ್ತು ದರ್ಶನ್‌(16) ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಫಿ’ ಎಂಬ ಅಪರೂಪದ ಅಂಗವೈಕಲ್ಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಮನೆ ಎತ್ತರದಲ್ಲಿದ್ದುದರಿಂದ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗಲೂ ಕೈಯಲ್ಲೇ ಎತ್ತಿಕೊಂಡು ಗುಡ್ಡದಿಂದ ಕೆಳಕ್ಕೆ ತರಬೇಕಾಗಿತ್ತು. ಈ ಬಗ್ಗೆ 2018ರ ಆ.20ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ್ದ ಉಡುಪಿ ಪುತ್ತೂರಿನ ಉದ್ಯಮಿ ದಿನೇಶ್‌ ಪೂಜಾರಿ ಅವರು ತನ್ನ ಗೆಳೆಯರ ಜತೆ ಸೇರಿ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಸುಮಾರು 12 ಲ.ರೂ. ವೆಚ್ಚದಲ್ಲಿ ಹಿರಿಯಡಕ ಪಡ್ಡಂನಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ.

ಧನುಶ್‌ 10ನೇ ತರಗತಿಯ ಅನಂತರ 1 ವರ್ಷ ಡಿಪ್ಲೊಮಾ ಮಾಡಿ ಈಗ ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲೇ ಹಾಸಿಗೆ ಬಿಟ್ಟೇಳದ ಸ್ಥಿತಿಯಲ್ಲಿದ್ದಾನೆ. 5ನೇ ತರಗತಿವರೆಗೆ ಸಾಮಾನ್ಯರಂತೆಯೇ ಇದ್ದ ಈತ 6ನೇ ತರಗತಿ ಅನಂತರ ಸೊಂಟದ ಕೆಳಗಿನ ಸ್ವಾಧೀನ ಕಳೆದುಕೊಳ್ಳುತ್ತಾ ಬಂದ. 10ನೇ ತರಗತಿವರೆಗೆ ತಾಯಿ ಹಾಗೂ ರಿಕ್ಷಾ ಚಾಲಕರ ನೆರವಿನಿಂದ ವಿದ್ಯಾಭ್ಯಾಸ ಪಡೆದ. ಮಣಿಪಾಲದಲ್ಲಿ ಫ್ರೀಶಿಪ್‌ ಪಡೆದು ಡಿಪ್ಲೊಮಾ ಸೇರ್ಪಡೆಯಾದ. ಆದರೆ ಆರೋಗ್ಯ ಸ್ಥಿತಿ ಹದಗೆಡುತ್ತಾ ಹೋದ ಪರಿಣಾಮ ಅದನ್ನು ಮೊಟಕುಗೊಳಿಸಬೇಕಾಯಿತು. ಈಗ ಈತನಿಗೆ ಗಾಲಿ ಕುರ್ಚಿ, ತಾಯಿಯೇ ಆಧಾರ.

ದರ್ಶನ್‌ ಕೂಡ ಹುಟ್ಟುವಾಗ ಸಾಮಾನ್ಯರಂತೆಯೇ ಇದ್ದ. ಅಣ್ಣನಿಗೆ ಸಮಸ್ಯೆ ಇರುವುದರಿಂದ ಈತನಿಗೂ ಏನಾದರೂ ಇರಬಹುದೇ ಎಂದು ತಪಾಸಣೆ ನಡೆಸಲು ಹೋಗಿದ್ದ ತಾಯಿಗೆ ಆಶ್ಚರ್ಯ ಕಾದಿತ್ತು. ಅದೇ ರೀತಿಯ ಕಾಯಿಲೆ ದರ್ಶನ್‌ಗೂ ಇರುವುದು ಪತ್ತೆಯಾಯಿತು. ಆತ ಕೂಡ 5ನೇ ತರಗತಿಯಲ್ಲಿ ದೇಹದ ಬಲ ಕಳೆದು ಕೊಳ್ಳುತ್ತಾ ಬಂದ. 9ನೇ ತರಗತಿ ಪೂರ್ಣಗೊಳಿಸುವುದೂ ಅಸಾಧ್ಯವಾಯಿತು.

ರೆಡ್‌ಕ್ರಾಸ್‌ನವರು ವ್ಹೀಲ್‌ ಚೇರ್‌ ಕೊಟ್ಟಿದ್ದರೂ ಗುಡ್ಡದ ಮೇಲೆ ಮನೆ ಇದ್ದುದರಿಂದ, ರಸ್ತೆಯೂ ಇಲ್ಲದುದರಿಂದ ಅದನ್ನು ಬಳಸುವುದು ಕೂಡ ಅಸಾಧ್ಯವಾಗಿತ್ತು.

ಗುಡ್ಡದ ಮೇಲಿನ ಮನೆ ಬೇಡವೇ ಬೇಡ ಎಂದು ಮಕ್ಕಳಿಬ್ಬರೂ ಹಟ ಮಾಡುತ್ತಿದ್ದರು. ಪ್ರತಿ ಬಾರಿಯೂ ಗುಡ್ಡದಿಂದ ಎತ್ತಿಕೊಂಡು ಕೆಳಗಿಳಿಸುವುದನ್ನು ಕಂಡು ಮರುಗುತ್ತಿದ್ದರು.

ಹಸ್ತಾಂತರ ಕಾರ್ಯಕ್ರಮ
ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಡಾಣ ಜಿ.ಶಂಕರ್‌ ಅವರು ಜು.3ರಂದು ‘ಧನುಷ್‌ ದರ್ಶನ್‌ ನಿಲಯ’ವನ್ನು ಹಸ್ತಾಂತರಿಸಿದರು. ತನ್ನ ವತಿಯಿಂದ 1 ಲ.ರೂ. ಮೊತ್ತವನ್ನು ಕೂಡ ನೀಡಿದರು. ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿಯೂ ಭರವಸೆ ನೀಡಿದರು. ಹೊಟೇಲ್ ಉದ್ಯಮಿ ಭುವನೇಂದ್ರ ಕಿದಿಯೂರು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌, ದಾನಿಗಳಾದ ದಿನೇಶ್‌ ಪೂಜಾರಿ, ಯು. ವಿಶ್ವನಾಥ ಶೆಣೈ, ಶ್ರೀಪಾಲ್ ಸುರನ, ಕೃಷ್ಣಮೂರ್ತಿ ಭಟ್, ಉಮೇಶ್‌, ಶೇಖರ್‌, ಸಂತೋಷ್‌, ಸಂತೋಷ್‌ ವರ್ಮಾ, ಸುರೇಶ್‌, ಮಹೇಶ್‌, ಪ್ರಸಾದ್‌, ನಿವೃತ್ತ ಬ್ಯಾಂಕ್‌ ಉದ್ಯೋಗಿ ಬಾಬುರಾಯ ಶೆಣೈ, ವಾಸ್ತು ತಜ್ಞ ಯೋಗೀಶ್‌ ಚಂದ್ರಾಧರ ಮತ್ತು ಯಕ್ಷಗಾನ ಕಲಾರಂಗದ ಸದಸ್ಯರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ ಸ್ವಾಗತಿಸಿ ನಿರೂಪಿಸಿದರು.

ಉದಯವಾಣಿ ಕಣ್ತೆರೆಸಿತು
ಕಳೆದ ವರ್ಷ “ಉದಯವಾಣಿ’ಯಲ್ಲಿ ಪ್ರಕಟವಾಗಿದ್ದ “ಗುಡ್ಡದ ಮೇಲೆ ಕುಟುಂಬದ ಅಸಹಾಯಕ ಬದುಕು’ ವರದಿ ನೋಡಿ ನನ್ನ ಮನ ಕರಗಿತು. ಆ ಕೂಡಲೇ ಆ ಮನೆಗೆ ತೆರಳಿ ಸಹಾಯ ಮಾಡಲು ಮುಂದಾದೆ. ಆದರೆ ಅಲ್ಲಿನ ಸ್ಥಿತಿ ಕಂಡು ಕುಗ್ಗಿ ಹೋದೆ. ಬೇರೆ ಕಡೆ ಮನೆ ಮಾಡಿಕೊಡಬೇಕೆಂದು ನಿರ್ಧರಿಸಿ ಗೆಳೆಯರಲ್ಲಿ ಪ್ರಸ್ತಾಪಿಸಿದೆ. ಕೃಷ್ಣಮೂರ್ತಿ ಹಾಗೂ ಇತರರು ಸ್ಪಂದಿಸಿದರು. ಸುಮಾರು 12 ಲ.ರೂ. ವೆಚ್ಚದ 700 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿ ಹಸ್ತಾಂತರಿಸಿದ್ದೇವೆ.
– ದಿನೇಶ್‌ ಪೂಜಾರಿ, ದಾನಿ, ಪುತ್ತೂರು ಉಡುಪಿ

ಹೊಸ ಮನೆಯಿಂದ ನೆಮ್ಮದಿ
ಧನುಷ್‌ನ ಆರೋಗ್ಯದಲ್ಲಿ ಮತ್ತಷ್ಟು ತೊಂದರೆಗಳಾಗುತ್ತಿವೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹೋಗಿ ವಾಪಸ್ಸು ಬರುವಾಗ ಧನುಷ್‌ ಹಿಂದೆ ಗುಡ್ಡದ ಮೇಲೆ ಇದ್ದ ಮನೆಗೆ ಹೋಗುವುದು ಬೇಡ ಎಂದೇ ಹಟ ಹಿಡಿದಿದ್ದ. ಅವನ ಆಸೆ ಈಗ ಈಡೇರಿದೆ. ಹೊಸ ಮನೆಯಿಂದ ಒಂದಷ್ಟು ನೆಮ್ಮದಿ ಉಂಟಾಗಿದೆ.
-ಪ್ರಮೀಳಾ ಪೂಜಾರಿ
ಧನುಷ್‌, ದರ್ಶನ್‌ ತಾಯಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.