ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕೆ ರೈಲ್ವೇ ದ್ವಿಪಥ ಅಡ್ಡಿ


Team Udayavani, Mar 21, 2017, 12:42 PM IST

road.jpg

ಉಡುಪಿ: ಕಲ್ಸಂಕ-ಮಣಿಪಾಲ ರಸ್ತೆ ಚತುಷ್ಪಥವಾಗಿ ಪರಿವರ್ತನೆಗೊಂಡರೂ ಇಂದ್ರಾಳಿಯ ಕೊಂಕಣ್‌ ರೈಲ್ವೇಯ ಮೇಲ್ಸೇತುವೆ ಮಾತ್ರ ದ್ವಿಪಥದಲ್ಲಿಯೇ ಮುಂದುವರಿದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಅನುಭವಕ್ಕೆ ಅಡ್ಡಿ ಉಂಟಾಗುತ್ತಿದೆ. ವೇಗವಾಗಿ ಬರುವ ವಾಹನಗಳಿಗೆ ಹಠಾತ್ತನೆ ಅಗಲ ಕಿರಿದಾಗುವ ರಸ್ತೆ ಅನೇಕ ಅಪಘಾತಗಳಿಗೆ ಆಹ್ವಾನ ಒಡ್ಡುತ್ತಿದೆ.

ಕೊಂಕಣ ರೈಲ್ವೇ ಆರಂಭವಾಗುವಾಗಲೇ ಅಂದರೆ 2 ದಶಕಗಳ ಹಿಂದಿನಿಂದಲೂ ಈ ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿರುವಾಗಲೇ ಅದನ್ನು ನಿರ್ಮಿಸಲು ರೈಲ್ವೇ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಡುವೆ ನಡೆದ ಕೇವಲ ಪತ್ರ ವ್ಯವಹಾರ ಇಂದು ಈ ಸ್ಥಿತಿಗೆ ಕಾರಣವಾಗಿದೆ.

2 ಕೋ. ರೂ. ನಿರ್ಮಾಣ

ಕಲ್ಸಂಕ-ಮಣಿಪಾಲ ಚತುಷ್ಪಥವಾಗು ವಾಗ ಈ ಗುದ್ದಾಟ ತಾರಕಕ್ಕೇರಿತ್ತು. ಕೊಂಕಣ ರೈಲ್ವೇ ಇಲಾಖೆಗೆ ಸುಮಾರು 2 ಕೋ. ರೂ. ನೀಡಿದಲ್ಲಿ ಸೇತುವೆ ಅಗಲಗೊಳಿಸುವ ಬಗ್ಗೆ ಚಿಂತನೆ ನಡೆದಿತ್ತು. ಅದಕ್ಕಾಗಿ ಅಂದು ದಿ| ಡಾ| ವಿ.ಎಸ್‌. ಆಚಾರ್ಯ ಹರಸಾಹಸ ಪಟ್ಟರೂ ಇದಕ್ಕೆ ಮುಕ್ತಿ ದೊರಕಲಿಲ್ಲ. 

ಇದೀಗ ರಾಷ್ಟ್ರೀಯ ಹೆದ್ದಾರಿ ಅಗಲ ಕಿರಿದಾಗುವ ಬಾಟಲ್‌ನೆಕ್‌ ಸಮಸ್ಯೆ ನಿವಾರಿಸಲು ರಾಜ್ಯ ಹೆದ್ದಾರಿ ಇಲಾಖೆಯವರು ಹೊಸ ಹೊಸ ಯೋಜನೆ ನೀಡಿದರೂ ಅವೆಲ್ಲವೂ ಶಿಥಿಲಗೊಂಡವು. ಎರಡು ವರ್ಷಗಳ ಹಿಂದೆ ಈ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರುತ್ತಿದ್ದಂತೆ ರಾಜ್ಯ ಸರಕಾರದ ಮೇಲಿದ್ದ ಹೊಣೆಗಾರಿಕೆ ಕೇಂದ್ರ ಸರಕಾರದ ಹೆಗಲೇರಿತು.

ಡಿಪಿಆರ್‌ ಆಗಿದೆ
635 ಕೋ. ರೂ. ಮಲ್ಪೆ-ಮೊಳಕಾಲ್ಮೂರು ರಾ. ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್‌ ಆಗಿದೆ. ಆದರೆ ಇಷ್ಟು ಬೃಹತ್‌ ಮೊತ್ತದ ಕಾಮಗಾರಿಗೆ ಒಂದೇ ಬಾರಿಗೆ ಅನುದಾನ ನೀಡುವುದು ಕಷ್ಟಕರ. ಹಾಗೆ ಮಾಡಿದರೂ ಅದಕ್ಕೆ ಟೋಲ್‌ ಸಂಗ್ರಹವಾದಂತಹ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೂರು ಕೋ. ರೂ.ಗಳ 5 ತುಂಡು ಯೋಜನೆಗಳಿಗೆ ಕೇಂದ್ರ ಹಣ ನೀಡಲು ಚಿಂತಿಸಿದೆ. ಈ ಎಲ್ಲ ಯೋಜನೆಗಳು ಮೇಳೈಸಿದರೆ ಮಾತ್ರ ಪ್ರಸ್ತುತ ಇಂದ್ರಾಳಿ ಸೇತುವೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 

ಎರಡು ರಸೆ‌¤ಗಳು ಬಲಿ
ಕೊಂಕಣ ರೈಲ್ವೇಯ ದ್ವಿಪಥ ಕಾಮಗಾರಿ ಆರಂಭವಾದರೆ ಸೇತುವೆ ಏರಿಸುವ ಕಾರ್ಯ ಆರಂಭವಾಗುತ್ತದೆ. ರೈಲ್ವೇ ಹಳಿಯಿಂದ ಕನಿಷ್ಠ ಮೂರು ಮೀಟರ್‌ ಎತ್ತರಕ್ಕೆ ಏರಿಸಬೇಕಾಗುವ ಸ್ಥಿತಿ ಬರುತ್ತದೆ. ಹೀಗಾದಾಗ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಕ್ಕಿರುವ ರಸ್ತೆ ಮತ್ತು ಯಕ್ಷಗಾನ ಕೇಂದ್ರಕ್ಕೆ ತೆರಳುವ ರಸ್ತೆಗಳಿಗಿಂತ ರಾ.ಹೆ. ಒಂದು ಮೀಟರ್‌ ಎತ್ತರಕ್ಕೆ ಹಾದು ಹೋಗುತ್ತದೆ. ಅದರ ಮೇಲೆ ರಾ.ಹೆ. ನಿರ್ಮಾಣವಾದರೆ ಅದು ಪುನಃ 1ಮೀಟರ್‌
ಎತ್ತರಕ್ಕೇರುತ್ತದೆ. ಹಾಗಾಗಿ ಈ ಎರಡು ರಸ್ತೆಗಳು ಅಸ್ತಿಣ್ತೀ ಕಳೆದುಕೊಳ್ಳುತ್ತವೆ ಎಂದು ರಾ.ಹೆ. ನಿರ್ಮಾಣದ ತಂತ್ರಜ್ಞರಾದ ಫೀಡ್‌ಬ್ಯಾಕ್‌ ವೆಂಚ್ಯುರ್ ತಂಡ ಅಭಿ ಪ್ರಾಯಪಟ್ಟಿದೆ.

ಉಳಿದ ಸೇತುವೆಗಳ ಗತಿ ಏನು?
ರೈಲುಗಳು ಹಾದುಹೋಗಲು ಮೇಲ್ಸೇತುವೆ ನಿರ್ಮಿಸುವಾಗ ನೆಲೆಮಟ್ಟದಿಂದ 3 ಮೀಟರ್‌ ಇಡುವುದು ವಾಡಿಕೆ. ಆದರೆ ಇಂದ್ರಾಳಿ ಸೇತುವೆ ಮಾತ್ರ ತಗ್ಗಲು ಕಾರಣವೇನು ಎಂಬುದಕ್ಕೆ ಉತ್ತರಗಳಿಲ್ಲ. ಇದೇ ರೀತಿ ದ್ವಿಪಥದ ಕಾಮಗಾರಿ ಆರಂಭವಾದರೆ ಇನ್ನುಳಿದ ಮೇಲ್ಸೇತುವೆಗಳ ಪರಿಸ್ಥಿತಿ ಬಗ್ಗೆ ಪರಿಣತರಿಂದ ಚಿಂತನೆ ನಡೆಯಬೇಕಾಗಿದೆ.

ಸೇತುವೆಗಳ ನಿರ್ಮಾಣಕ್ಕೂ ಮುನ್ನ ಪರಿಸ್ಥಿತಿ ಅಧ್ಯಯನ ಮಾಡಬೇಕಾಗುತ್ತದೆ. ಇಷ್ಟೇ ಎತ್ತರದಲ್ಲಿ ಇಷ್ಟೇ ಅಗಲದಲ್ಲಿ ನಿರ್ಮಿಸಬೇಕೆಂಬ ಯಾವ ನಿಯಮಗಳೂ ಇಲ್ಲ. ಆದರೆ ದೂರದೃಷ್ಟಿ ವಿಚಾರದಲ್ಲಿ ಈ ಅಂಶ ಅವಲೋಕಿಸಬೇಕಾಗುತ್ತದೆ ಎಂದು ಕೊಂಕಣ ರೈಲ್ವೇ ಅಸಿಸ್ಟೆಂಟ್‌ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ಇದೀಗ ರೈಲ್ವೇ ದ್ವಿಪಥ
2 ದಶಕಗಳ ಬಳಿಕ ಇದೀಗ ಕೊಂಕಣ ರೈಲ್ವೇ ದ್ವಿಪಥವಾಗಿ ಪರಿವರ್ತಿಸುವ ಯೋಜನೆ ಹಮ್ಮಿಕೊಂಡಿದೆ. ಇದರಿಂದ ಇಂದ್ರಾಳಿ ಮೇಲ್ಸೇತುವೆ ಕನಿಷ್ಠ ಒಂದು ಮೀಟರ್‌ ಎತ್ತರಕ್ಕೆ ಏರಿಸಬೇಕಾಗುತ್ತದೆ. ಹೀಗೆ ಏರಿಸಿದಾಗ ಹೊಸ ಎತ್ತರಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗು ತ್ತದೆ.ಅನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಹಳೆ ಸೇತುವೆ ಒಡೆದು ಹೊಸ ಎತ್ತರಕ್ಕೆ ನಿರ್ಮಿಸ ಬೇಕಾಗುತ್ತದೆ ಎಂದು ನ್ಯಾಶನಲ್‌ ಹೈವೇ ಎಂಜಿನಿಯರ್‌ ಮಂಜುನಾಥ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.