ಮಲ್ಪೆ ನಗರದ ಪ್ರಮುಖ ರಸ್ತೆಯಲ್ಲಿ ಚರಂಡಿ ಅವ್ಯವಸ್ಥೆ
ತೋಡು ಇಲ್ಲದೇ ರಸ್ತೆಯಲ್ಲೇ ಹರಿಯುತ್ತಿದೆ ಮಳೆ ನೀರು ; ಪ್ರತಿ ವರ್ಷದ ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ
Team Udayavani, Jun 4, 2019, 6:00 AM IST
ಮಲ್ಪೆ: ಮಳೆಗಾಲದ ಪ್ರಾರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿದೆಯಾದರೂ, ಮಲ್ಪೆ ಸೆಂಟ್ರಲ್ ವಾರ್ಡ್‌ಗೆ ಸೇರಿದ ನಗರದ ಪ್ರಮುಖ ರಸ್ತೆಯ ಚರಂಡಿಗಳನ್ನು ನೋಡಿದರೆ ಮಳೆಗಾಲಕ್ಕೆ ಸಿದ್ಧತೆಯೇ ಆಗಿಲ್ಲ ಎನ್ನುವುದು ಎದ್ದು ಕಾಣುತ್ತದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೆಂದ್ರವಾದ ಮಲ್ಪೆ ನಗರದ ಹೃದಯ ಭಾಗದಲ್ಲಿರುವ ರಸ್ತೆಯ ಎರಡೂ ಬದಿಯಲ್ಲಿ ನೀರು ಹರಿಯುಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿದೆ. ಈ ಭಾಗದಲ್ಲಿನ ತೋಡಿನ ಹೂಳು ಕಳೆದ ಹಲವಾರು ವರ್ಷಗಳಿಂದ ತೆಗೆಯದ ಕಾರಣ ಚರಂಡಿಯೇ ನಾಮಾವಶೇಷಗೊಂಡಿದೆ.
ರಸ್ತೆಯಲ್ಲೇ ಮಳೆ ನೀರು
ಮುಖ್ಯರಸ್ತೆಯಲ್ಲಿ ಅಂಗಡಿಗಳ ಮೆಟ್ಟಿಲುಗಳು ಚರಂಡಿಯನ್ನು ಮುಚ್ಚಿ ಕಟ್ಟಲಾಗಿದ್ದು, ಅಲ್ಲಲ್ಲಿ ತುಂಡು ತುಂಡು ಚರಂಡಿಗಳು ಮಾತ್ರ ಕಾಣುತ್ತಿವೆ. ಉಳಿದ ಕಡೆಯ ಚರಂಡಿಗಳು ಮಣ್ಣಿನಿಂದ ಮುಚ್ಚಿ ಹೋಗಿವೆ. ಹಾಗಾಗಿ ಪ್ರತಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿ, ಮಳೆ ನೀರು ರಸ್ತೆಯಲ್ಲೇ ಹರಿಯುವುದು ಸಾಮಾನ್ಯವಾಗಿದೆ.
ಚರಂಡಿಯಲ್ಲಿ ಕಸಕಡ್ಡಿ
ಇಲ್ಲಿನ ಬೇಬಿ ಮೈರನ್‌ಇಂಡಸ್ಟ್ರೀಸ್‌ನಿಂದ ಬಾಪುತೋಟ ಪ್ರದೇಶದ ಬಳಿಯ ರಸ್ತೆಯ ಚರಂಡಿ ನಿರ್ವಹಣೆ ಮಾಡಿಲ್ಲ. ಚರಂಡಿಯಲ್ಲಿ ಕಸಕಡ್ಡಿ ತ್ಯಾಜ್ಯಗಳು ತುಂಬಿಹೋಗಿದ್ದು, ನೀರು ಹರಿಯಲು ಸಮಸ್ಯೆ ಇದೆ. ಕಸವನ್ನು ಎರಡು ಮೂರು ಬಾರಿ ತೆರವುಗೊಳಿಸಲಾಗಿದರೂ, ಕೆಲವೇ ದಿನದಲ್ಲಿ ಮತ್ತೆ ಕಸಕಡ್ಡಿ
ತುಂಬಿಕೊಳ್ಳುತ್ತದೆ. ಈ ಭಾಗದಲ್ಲಿ ಹೊರಜಿಲ್ಲೆಯ ಮಂದಿ ಇದ್ದು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಇದು ಕೂಡ ಸಮಸ್ಯೆಗೆ ಕಾರಣವಾಗುತ್ತಿದೆ.
ಕೊಳಚೆ ನೀರೂ ತೋಡಿಗೆ
ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ (ಫಿಶರೀಸ್) ಮುಂಭಾಗದಲ್ಲಿರುವ ಚರಂಡಿಗೆ ಸಮೀಪದ ಸಂಕೀರ್ಣಗಳಿಂದ ಕೊಳಚೆ ನೀರು ಹರಿದು ಬಂದು ಹೂಳಿನೊಂದಿಗೆ ಕಸಕಡ್ಡಿಯಿಂದ ಚರಂಡಿ ಮುಚ್ಚಿ ಹೋಗಿದೆ. ಇದರಿಂದ ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಳ್ಳುತ್ತಿದೆ. ಕಳೆದ ವರ್ಷ ಶಾಲಾ ಕಾಲೇಜಿನ ಮಕ್ಕಳು ಈ ಕೊಳಚೆ ನೀರನ್ನೇ ತುಳಿದುಕೊಂಡು ಹೋಗಿ ಶಾಲಾ ಆವರಣಕ್ಕೆ ತೆರಳುವ ಪರಿಸ್ಥಿತಿ ಇತ್ತು. ಇಲ್ಲಿನ ಸಮಸ್ಯೆಯನ್ನು ಕೂಡ ಬಗೆಹರಿಸಬೇಕಾಗಿದೆ.
ರಸ್ತೆ ಅಗಲೀಕರಣ ಕೈ ಗೂಡದ ಯೋಜನೆ
ಹೂಳು ತುಂಬಿದ ಚರಂಡಿ, ಕೊಳಚೆ ಸಹಿತ ಮಳೆನೀರು, ಜತೆ ಸೊಳ್ಳೆಗಳ ಕಾಟದಿಂದಾಗಿ ಅಂಗಡಿ ಮುಂಗಟ್ಟು ಗಳ ಮಂದಿ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ಮಲ್ಪೆ ಆದಿವುಡುಪಿ ರಸ್ತೆ ಅಗಲೀಕರಣ ಯೋಜನೆ ಕೈ ಗೂಡದ ಹಿನ್ನೆಲೆಯಲ್ಲಿ ಇಲ್ಲಿ ಸುಸಜ್ಜಿತ ಚರಂಡಿ ನಿರ್ಮಾಣ ಮಾಡುವ ಯೋಜನೆಯೂ ಬಾಕಿಯಾಗಿದೆ. ಯುಬಿಎಂ ದೇವಾಲಯ, ಸಿಂಡಿಕೇಟ್ ಬ್ಯಾಂಕ್, ಮಸೀದಿ ಮುಂಭಾಗದ ರಸ್ತೆಯ ಬದಿಯ ತೋಡಿನಲ್ಲಿ ಗಿಡಗಂಟಿಗಳು ಬೆಳೆದು ನಿಂತು ನೀರು ಹರಿಯಲು ತಡೆಯೊಡ್ಡಿದೆ. ಕೊಪ್ಪಲತೋಟ ರೈಸ್ ಮಿಲ್ ಬಳಿ, ಹನುಮಾನ್‌ನಗರ ಭಜನಾ ಮಂದಿರ ಹಿಂಬದಿ ತೋಡಿನ ಹೂಳನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ.
ವಾರಕ್ಕೊಮ್ಮೆ ಬರುತ್ತಾರೆ
ಮಳೆಯ ಮುನ್ನಚ್ಚರಿಕೆಯ ಕ್ರಮವಾಗಿ ಸಿದ್ಧತೆ ಮಾಡಲಾಗುತ್ತಿದೆ. ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ ಎಂದು ವಾರಕ್ಕೆ ಒಂದು ದಿನ 4 ಮಂದಿಯನ್ನು ಕಳುಹಿಸುತ್ತಾರೆ. ಕೆಲವಡೆ ಮಾತ್ರ ಚರಂಡಿ ತುಂಬಿರುವ ಹೂಳನ್ನು ತೆರವುಗೊಳಿಸಲಾಗಿದೆ. ಇನ್ನು ಹÇವಾರು ಕಡೆಗಳಲ್ಲಿ ಬಾಕಿ ಇದೆ. ಕೆಲವರು ಸ್ವತ್ಛಗೊಳಿಸಿದ ಚರಂಡಿಗೆ ಮತ್ತೆ ಕಸಕಡ್ಡಿಯನ್ನು ಎಸೆದು ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ.
-ಎಡ್ಲಿನ್ ಕರ್ಕಡ,
ನಗರಸಭಾ ಸದಸ್ಯರು, ಮಲ್ಪೆ ಸೆಂಟ್ರಲ್
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.