ಉಡುಪಿ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಇ-ಶೌಚಾಲಯ
Team Udayavani, Dec 19, 2019, 4:28 AM IST
ಉಡುಪಿ: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ನೀಗಿಸಲು ಉಡುಪಿ ನಗರಸಭೆ ಮುಂದಾಗಿದ್ದು, ಅಲ್ಲಲ್ಲಿ ಇ-ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದೆ. ಬೆಂಗಳೂರಿನ ಎನ್.ಕೆ. ಮೆಟಲ್ ಶೀಟ್ ಸಂಸ್ಥೆಯು ಇದರ ನಿರ್ಮಾಣದ ಉಸ್ತುವಾರಿವನ್ನು ವಹಿಸಿದೆ.
ನಿರ್ಮಾಣದ ವೆಚ್ಚವನ್ನು ಪೌರಾಡಳಿತ ನಿರ್ದೇ ಶನಾಲಯ ಭರಿಸಲಿದೆ. ಈ ಶೌಚಾಲಯಗಳನ್ನು ಆಯಕಟ್ಟಿನ ಸ್ಥಳದಲ್ಲಿ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗುತ್ತಿದೆ. ನಗರಸಭೆ ಹಾಗೂ ಒಳಚರಂಡಿ ವಿಭಾಗದ ವತಿಯಿಂದ ಸರ್ವೆ ನಡೆಸಲಾಗಿದ್ದು, ಅದರ ಅನ್ವಯ ಇ-ಶೌಚಾಲಯ ನಿರ್ಮಾಣ ಮಾಡಲು ಜಾಗ ಆಯ್ಕೆ ಮಾಡಲಾಗಿದೆ.
ಬಯೋ ಡೈಜೆಸ್ಟರ್ ವ್ಯವಸ್ಥೆ
ಇ- ಶೌಚಾಲಯಗಳು “ಬಯೋ ಡೈಜೆಸ್ಟರ್’ ವ್ಯವಸ್ಥೆಯನ್ನು ಒಳಗೊಂಡಿದೆ. ಡೈಜೆಸ್ಟರ್ ವ್ಯವಸ್ಥೆಯಲ್ಲಿ ತ್ಯಾಜ್ಯ ತಂತಾನೇ ಜೈವಿಕವಾಗಿ ವಿಲೇವಾರಿಯಾಗಲಿದೆ. ಜನರ ಬಳಕೆ ಅನುಗುಣವಾಗಿ ಬಯೋ ಡೈಜೆಸ್ಟರ್ ಶೌಚದ ಗುಂಡಿ ನಿರ್ಮಿಸಲಾಗುತ್ತದೆ. ಅದಕ್ಕೆ ಇನಾ ಕ್ಯುಲಂ ಎಂಬ ಬ್ಯಾಕ್ಟೀರಿಯಾ ಸೇರಿಸಿದರೆ ಕಲ್ಮಷ ಶುದ್ಧೀಕರಿಸುವ ಕೆಲಸವನ್ನು ಇದು ಮಾಡುತ್ತದೆ. ಶೌಚಾಲಯದ ಸೇಫ್ಟಿ ಟ್ಯಾಂಕ್ ಒಳಗೆ ಇದನ್ನು ಸೇರಿಸುವುದರಿಂದ ಕಲ್ಮಷಗಳು ಶೇ. 100ರಷ್ಟು ಕರಗಿ, ಹಾಕಿದ ನೀರು ಮಾತ್ರ ಉಳಿಯುತ್ತದೆ. ಈ ನೀರು ವಾಸನೆಯಿಂದ ಕೂಡಿರುವುದಿಲ್ಲ. ಈ ಒಮ್ಮೆ ಬ್ಯಾಕ್ಟೀರಿಯಾ ಸೇರಿಸಿದ ಬಳಿಕ ನಿರಂತರ ಉಪಯೋಗವಿದ್ದರೆ ಮತ್ತೆ ಮತ್ತೆ ಬ್ಯಾಕ್ಟೀರಿಯಾ ಸೇರಿಸುವ ಅಗತ್ಯವಿಲ್ಲ. ಬ್ಯಾಕ್ಟೀರಿಯಾಗಳು ಶೌಚಾಲಯವನ್ನು ಬಳಸದಿದ್ದರೂ ನಾಲ್ಕು ತಿಂಗಳ ಕಾಲ ಉಳಿಯುತ್ತವೆ.
ಬಳಕೆ ಹೇಗೆ?
ಇ-ಶೌಚಾಲಯಗಳು ಹೊಸ ತಂತ್ರಜ್ಞಾನ ಹೊಂದಿದ್ದು, ಸ್ವಯಂ ಸ್ವತ್ಛತೆ ಮಾಡಿಕೊಳ್ಳಲಿವೆ. ಶೌಚಾಲಯದ ಹೊರ ಬಾಗಿಲಲ್ಲಿ ಹಸಿರು ಬಣ್ಣ ಇದ್ದರೆ ಅದು ಬಳಕೆಗೆ ಮುಕ್ತ ಎಂದರ್ಥ. ಕೆಂಪು ಬಣ್ಣ ಇದ್ದರೆ ಒಳಗೆ ಇನ್ನೊಬ್ಬರು ಇದ್ದಾರೆ ಎಂದರ್ಥ. ಬಳಕೆದಾರರು ನಿಗದಿತ ದರದ ನಾಣ್ಯ ಹಾಕಿದ ಅನಂತರ ಬಾಗಿಲು ತಾನೇ ತೆರೆದುಕೊಳ್ಳಲಿದೆ. ಬಾಗಿಲುಗಳು ಸೆನ್ಸರ್ ವ್ಯವಸ್ಥೆ ಹೊಂದಿದ್ದು, ಒಳಗಡೆ ಮತ್ತೂಬ್ಬರು ಇದ್ದರೆ ಹೊರಗಿನಿಂದ ನಾಣ್ಯ ಹಾಕಿದರೂ ತೆಗೆದುಕೊಳ್ಳುವುದಿಲ್ಲ. ಒಳಗೆ ವಿದ್ಯುತ್ ದೀಪ, ಪುಟ್ಟ ಫ್ಯಾನ್ ವ್ಯವಸ್ಥೆಯೂ ಇದೆ. ಬಳಕೆಯ ಅನಂತರ ನೀರು ಹರಿಯುತ್ತದೆ.
ಎಲ್ಲೆಲ್ಲಿ ಇ-ಶೌಚಾಲಯ?
ಉಡುಪಿ ಬೋರ್ಡ್ ಹೈಸ್ಕೂಲ್ ಪ್ರವೇಶ ದ್ವಾರ, ತಾಲೂಕು ಕಚೇರಿ, ನಗರಸಭೆ ಸಮೀಪದಲ್ಲಿ ಇ-ಶೌಚಾಲಯ ನಿರ್ಮಾಣವಾಗಲಿದೆ. ಒಂದು ಶೌಚಾಲಯಕ್ಕೆ 6.8 ಲ.ರೂ ವೆಚ್ಚ ತಗಲಲಿದೆ.
ಪರಿಸರಸ್ನೇಹಿ
ನಗರದಲ್ಲಿ ಮೂರು ಇ-ಶೌಚಾಲಯಗಳ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಈ ಶೌಚಾಲಯವು ಪರಿಸರಸ್ನೇಹಿ ಶೌಚಾಲಯವಾಗಿರಲಿದೆ.
-ಸ್ನೇಹಾ, ಪರಿಸರ ಎಂಜಿನಿಯರ್, ನಗರಸಭೆ
ಸ್ವಚ್ಛತೆ ಅಗತ್ಯ
ಪ್ರಸ್ತುತ ಇರುವ ಶೌಚಾಲಯದಲ್ಲಿ ಸ್ವತ್ಛತೆ ಕೊರತೆ ಇದೆ. ಇದೀಗ ನಗರಸಭೆ ಇ- ಶೌಚಾಲಯ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸೌಲಭ್ಯ ಜನರಿಗೆ ಶೀಘ್ರದಲ್ಲಿ ಬಳಕೆಗೆ ಸಿಗುವಂತಾಗಲಿ.
-ಮೀರಾ ನಾಯಕ್, ಉಡುಪಿ
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.