ಕೃಷಿ ಬೆಳೆಗೆ ಮಾರಕವಾದ ಅಂತರಗಂಗೆಯನ್ನು ಬೇರ್ಪಡಿಸಲು ಯುವಕರ ಶ್ರಮ
Team Udayavani, Jul 10, 2017, 4:00 AM IST
ಕೋಟ: ಅಂತರಗಂಗೆ ಎಂದು ಕರೆಯಲಾಗುವ ಒಂದು ವಿಧದ ಪಾಚಿ ಸಸ್ಯವು ಕೃಷಿ ಬೆಳೆಗೆ ಮಾರಕವಾಗಿದ್ದು, ಕೋಟದ ಗಿಳಿಯಾರು ಸುತ್ತ-ಮುತ್ತ ನೂರಾರು ಎಕ್ರೆ ಕೃಷಿ ಭೂಮಿ ಇದರಿಂದಾಗಿ ಹಾನಿಗೊಳಗಾಗುತ್ತಿದೆ.
ನೆರೆ ನೀರಿನ ಜತೆಗೆ ಗದ್ದೆಗಳಿಗೆ ಲಗ್ಗೆ ಇಟ್ಟು ಕೃಷಿ ಬೆಳೆಯನ್ನ ನಾಶ ಮಾಡುತ್ತದೆ. ಹಲವಾರು ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಸಿಗದೆ ಕೃಷಿಕರು ಕಂಗೆಟ್ಟಿದ್ದಾರೆ ಹಾಗೂ ಸ್ಥಳೀಯಾಡಳಿತ ಸೇರಿದಂತೆ ಹಲವು ಮಂದಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದಿರುವುದರಿಂದ ಇದೀಗ ಸ್ಥಳೀಯ ಯುವಕರು ಒಟ್ಟಾಗಿ ಶ್ರಮದಾನದ ಮೂಲಕ ಇದನ್ನು ಬೇರ್ಪಡಿಸಲು ಮುಂದಾಗಿದ್ದಾರೆ.
ಯುವಕರಿಂದ ಶ್ರಮದಾನ
ಗಿಳಿಯಾರು ಸೇತುವೆ ಸಮೀಪ ಹೊಳೆಯ ನೀರಿನಲ್ಲಿ ನಿಂತಿದ್ದ ಅಂತರಗಂಗೆಯನ್ನು ಸ್ಥಳೀಯ ಮುಖಂಡರಾದ, ಸಾಲಿಗ್ರಾಮ ಪ.ಪಂ. ಸದಸ್ಯ ಭೋಜ ಪೂಜಾರಿಯವರ ನೇತೃತ್ವದಲ್ಲಿ ವಾರದ ಎರಡು-ಮೂರು ದಿನ ಶ್ರಮದಾನದ ಮೂಲಕ ಇದನ್ನು ಬೇರ್ಪಡಿಸಲು ಯುವಕರ ತಂಡವೊಂದು ಶ್ರಮಿಸುತ್ತಿದೆ.
ಹಂಡಿಕೆರೆ ರಾಘವೇಂದ್ರ ಶೆಟ್ಟಿ, ರವೀಂದ್ರ ಗಿಳಿಯಾರು, ರವಿ ಗಿಳಿಯಾರು, ಬಾಬು ಮರಕಾಲ ಹಣ್ಸೆಬೆಟ್ಟು, ರಾಘವೇಂದ್ರ ಗಿಳಿಯಾರು, ಮಹೇಶ ಗಿಳಿಯಾರು, ಪ್ರದೀಪ್ ಶೆಟ್ಟಿ ಗುಲ್ವಾಡಿ, ಮುಂತಾದವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರಮದಾನದಲ್ಲಿ ತೊಡಗಿದ್ದಾರೆ.
ಒಟ್ಟಾರೆ ಕೃಷಿಕರ ತಲೆ ನೋವಿಗೆ ಕಾರಣವಾಗಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.