ಹಿರಿಯಡಕ ಇಂದಿನಿಂದ ಬ್ರಹ್ಮಕಲಶೋತ್ಸವ ಸಡಗರ
Team Udayavani, Apr 16, 2018, 10:51 AM IST
ಹಿರಿಯಡಕ: ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇಗುಲದ ಸಮಗ್ರ ಜೀರ್ಣೋದ್ಧಾರ ಪೂರ್ಣಗೊಂಡಿದ್ದು, ಬ್ರಹ್ಮಕಲಶೋತ್ಸವ ಸಡಗರದಲ್ಲಿದೆ. ತುಳುನಾಡಿನ ಮಾತೃಮೂಲ ಸಂಸ್ಕೃತಿಯ ಎಲ್ಲ ಜಾತಿ ವರ್ಗಗಳ ಬಹುತೇಕ ಜನರಿಗೆ ಆದಿ-ಆಲಡೆ ಎಂದು ಗುರುತಿಸಲ್ಪಡುವ ಕ್ಷೇತ್ರದಲ್ಲಿ ಎ. 16ರಿಂದ ಎ. 25ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿ ನಟರಾಜ್ ಹೆಗ್ಡೆ ಹೇಳಿದರು.
ದೇವಸ್ಥಾನದ ವಠಾರದಲ್ಲಿ ರವಿವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು. ಎ. 16ರಂದು ಹೊರೆಕಾಣಿಕೆ, ಎ.20 ರಂದು ಪ್ರತಿಷ್ಠೆ, ಎ. 21ರಂದು ಮಹಾರುದ್ರ ಯಾಗ, ಎ. 22ರಂದು ಕಲಶಾಭಿಷೇಕ, ಎ. 23ರಂದು ಶತಚಂಡಿಕಾ ಯಾಗ ಜರಗಲಿದೆ.
ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭೆಯನ್ನು ಮಾತೆಯರಿಗಾಗಿ ಮೀಸಲಿಡಲಾಗಿದ್ದು, ಎ. 19ರ ಸಂಜೆ ನಡೆಯಲಿರುವ ಮಾತೃಸಂಗಮದ ಅಧ್ಯಕ್ಷತೆಯನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ವಹಿಸುವರು. ವಿಶೇಷ ಉಪನ್ಯಾಸಕರಾಗಿ ಬರಹಗಾರ್ತಿಡಾ| ಇಂದಿರಾ ಹೆಗ್ಡೆ ಭಾಗವಹಿಸಲಿ ದ್ದಾರೆ. ಸುಮಾರು 7,000 ಮಾತೆಯರು ಭಾಗ ವಹಿಸ ಲಿದ್ದಾರೆ. ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಎ. 20ರಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಧ್ಯಕ್ಷತೆ ಯಲ್ಲಿ “ಸಂತ ಸಂಗಮ’ ನಡೆಯಲಿದೆ. ವಿವಿಧ ಸಂಪ್ರದಾಯಗಳ ಸಾಧು ಸಂತರು ಭಾಗವಹಿಸಲಿ ದ್ದಾರೆ. ಎ. 21ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ಎನ್. ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ “ರಾಜಧರ್ಮ ಸಭೆ’ ನಡೆಯಲಿದೆ. ಎ. 22ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ಅಧ್ಯಕ್ಷತೆಯಲ್ಲಿ “ಸುಧರ್ಮ ಸಭೆ’ ಜರಗಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ,ಕಾರ್ಯಧ್ಯಕ್ಷ ಗೋವರ್ಧನದಾಸ ಹೆಗ್ಡೆ, ಕಾರ್ಯದರ್ಶಿ ಪರೀಕ ಅರಮನೆ ಸೋಮನಾಥ ಶೆಟ್ಟಿ ಮೊದಲಾದವರಿದ್ದರು.
ಸಾಂಸ್ಕೃತಿಕ ಕಲೋತ್ಸವ; ನಿರಂತರ ಊಟೋಪಚಾರ
ಬ್ರಹ್ಮಕಲಶೋತ್ಸವದ ಎಲ್ಲ ಹತ್ತು ದಿನಗಳಲ್ಲಿ ಬಹು ದೊಡ್ಡ ಸಾಂಸ್ಕೃತಿಕ ಕಲೋತ್ಸವ ಆಯೋಜಿಸಲಾಗಿದೆ. ಹೊರಾಂಗಣದ ಪ್ರಧಾನ ವೇದಿಕೆಯಲ್ಲಿ ಪ್ರತಿದಿನ ಸಭಾ ಕಾರ್ಯಕ್ರಮದ ಅನಂತರ ರಾಷ್ಟ್ರಮಟ್ಟದ ಕಲಾವಿದರಿಂದ ಸಂಗೀತ, ನೃತ್ಯ, ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ. ಹತ್ತು ದಿನಗಳಲ್ಲಿ ಬೆಳಗ್ಗಿನಿಂದ ಆರಂಭಿಸಿ ರಾತ್ರಿಯ ವರೆಗೆ ನಿರಂತರ ಉಪಾಹಾರ ಮತ್ತು ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.
- ನಟರಾಜ್ ಹೆಗ್ಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.