ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
ಬೊಕ್ಕಸಕ್ಕೆ ಭಾರ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಪ್ರಸ್ತಾವ ನನೆಗುದಿಯಲ್ಲಿ
Team Udayavani, Jan 7, 2025, 6:55 AM IST
ಉಡುಪಿ: ರಾಜ್ಯ ಬೊಕ್ಕಸಕ್ಕೆ “ಆರ್ಥಿಕ ಹೊರೆ’ ಎಂಬ ಟಿಪ್ಪಣಿ ರಾಜ್ಯದ ಹಿರಿಯ ಕಲಾವಿದರನ್ನೂ ಸಂಕಷ್ಟಕ್ಕೆ ಸಿಲುಕಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನ ಹೆಚ್ಚಳ ಮರು ಪ್ರಸ್ತಾವ ನಾಲ್ಕು ತಿಂಗಳುಗಳಿಂದ ಆರ್ಥಿಕ ಇಲಾಖೆಯಲ್ಲಿ ಧೂಳು ಹಿಡಿದಿದೆ.
ರಾಜ್ಯದಲ್ಲಿ ಪ್ರಸ್ತುತ 13,108 ಕಲಾವಿದರು ಮಾಶಾಸನ ಪಡೆಯುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಲಲಿತಕಲೆ ಸಹಿತ ವಿವಿಧ ಕಲಾ ಪ್ರಕಾರಗಳ ಹಿರಿಯ ಕಲಾವಿದರಿಗೆ 2 ಸಾವಿರ ರೂ. ನೀಡಲಾಗುತ್ತಿದ್ದು, ಹೆಚ್ಚಳವಾದರೆ 3 ಸಾವಿರ ರೂ. ದೊರೆಯಲಿದೆ. ಇವರೆಲ್ಲ ಇಳಿವಯಸ್ಸಿನವರಾಗಿದ್ದು, ಆರೋಗ್ಯ ಸಹಿತ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದು, ಮಾಸಾಶನ ಹೆಚ್ಚಳದಿಂದ ಅನುಕೂಲವಾಗಲಿದೆ.
ಈ ಜನವರಿಯೊಳಗೆ ಆದೇಶ ಹೊರಬಿದ್ದು ಹೆಚ್ಚಳ ಜಾರಿಯಾದೀತೆಂಬ ನಿರೀಕ್ಷೆಯಿತ್ತು. ಆದರೆ ಸಂಸ್ಕೃತಿ ಇಲಾಖೆಯ ಅಕ್ಟೋಬರ್‌ನಲ್ಲಿ ಕಳುಹಿಸಿದ್ದ ಮರು ಪ್ರಸ್ತಾವಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಈ ಮೊದಲು ಕಲಾವಿದರ ಬೇಡಿಕೆಗೆ ಮಣಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ 2024 ರ
ಆಗಸ್ಟ್‌ನಲ್ಲಿ ಹಲವು
ಸುತ್ತಿನ ಸಭೆ ನಡೆಸಿ, ಮಾಸಾಶನ ಹೆಚ್ಚಳಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯು ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಆದರೆ ಮಾಸಾಶನ ಹೆಚ್ಚಳ ಆರ್ಥಿಕ ಭಾರ ಎಂದು ಕಾರಣ ನೀಡಿ, ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿತ್ತು.
ಹಳೆಯ ಬೇಡಿಕೆ
2020ರಲ್ಲಿ ಕೋವಿಡ್ ಆವರಿಸಿದ್ದಾಗ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಸುಮಾರು ಎರಡೂವರೆ ವರ್ಷ ಅವಕಾಶಗಳಿಲ್ಲದೆ ಕಲಾವಿದರು ಸಂಕಷ್ಟಕ್ಕೆ ಸಿಲುಕಿ, ಅನ್ಯ ವೃತ್ತಿಯನ್ನು ಅವಲಂಬಿಸಿದ್ದರು. ಆ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಸರಕಾರ ಘೋಷಿಸಿದ್ದ 3 ಸಾವಿರ ರೂ. ನೆರವಿಗೆ 26 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಹಿರಿಯ ಕಲಾವಿದರ ಮಾಸಾಶನ ಹೆಚ್ಚಳಕ್ಕೂ ಆಗ್ರಹ ಕೇಳಿಬಂದಿತ್ತು. ಆಗ ಬಿಜೆಪಿ ಸರಕಾರ ಮಾಸಾಶನ ಹೆಚ್ಚಳದ ಭರವಸೆ ನೀಡಿದ್ದರೂ ಜಾರಿಗೊಳಿಸಿರಲಿಲ್ಲ.
ನಿಯಮ ಸರಳಗೊಳಿಸಲು ಆಗ್ರಹ
ಹಿರಿಯ ಕಲಾವಿದರು ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಶಾಸನಕ್ಕೆ ಅರ್ಜಿ ಸಲ್ಲಿಸಬೇಕು. ಅದು ಆಯಾ ಅಕಾಡೆಮಿಗಳಿಗೆ ಹೋಗಿ, ಸಂದರ್ಶನ ನಡೆದು, ಮತ್ತೆ ಪ್ರಧಾನ ಕಚೇರಿಗೆ ವಾಪಸು ಬಂದು ಸರಕಾರಕ್ಕೆ ಸಲ್ಲಿಕೆಯಾಗಲಿದೆ. ಬಳಿಕ ಎಫ್ಡಿಯಿಂದ ಮಂಜೂರಾಗಬೇಕು. ಈ ಇಡೀ ಪ್ರಕ್ರಿಯೆಗೆ 4 ವರ್ಷ ಹಿಡಿಯುವ ಸಾಧ್ಯತೆಯೂ ಇದೆ. ಇದರಿಂದ ಹಿರಿಯ ಕಲಾವಿದರಿಗೆ ಕಷ್ಟವಾಗುತ್ತಿದ್ದು, ನಿಯಮಗಳನ್ನು ಸರಳಗೊಳಿಸುವಂತೆ ಆಗ್ರಹಿಸಿದ್ದಾರೆ.
ಮರು ಪ್ರಸ್ತಾವ ಸಲ್ಲಿಕೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಈ ಹಿಂದೆಯೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ನಿರಾಕರಿಸಲ್ಪಟ್ಟಿದೆ. ಮತ್ತೆ ಹೆಚ್ಚುವರಿ ಅಗತ್ಯದ ಮಾಹಿತಿ ಉಲ್ಲೇಖೀಸಿ, ಕಡತವನ್ನು ಹಣಕಾಸು ಇಲಾಖೆಗೆ ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದು, ಒಪ್ಪಿಗೆಗಾಗಿ ಕಾಯುತ್ತಿದ್ದೇವೆ.
-ಡಾ| ಕೆ. ಧರಣಿದೇವಿ, ನಿರ್ದೇಶಕಿ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಬೆಂಗಳೂರು
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.