ದೇಶದ ಭವಿಷ್ಯ ಶಾಲೆಯಲ್ಲಿ ರೂಪುಗೊಳ್ಳುತ್ತದೆ: ಸಾವಿತ್ರಿ ಮನೋಹರ್
ಜಿ.ಎಂ. ವಿದ್ಯಾನಿಕೇತನ್: ಫ್ರೆಶರ್ ಡೇ
Team Udayavani, Jul 2, 2019, 5:24 AM IST
ಬ್ರಹ್ಮಾವರ: ದೇಶದ ಭವಿಷ್ಯ ಶಾಲೆಯಲ್ಲಿ ರೂಪುಗೊಳ್ಳುತ್ತದೆ. ಮಕ್ಕಳು ಸ್ವಾವಲಂಬನೆ, ಆತ್ಮವಿಶ್ವಾಸ, ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು. ಸೋಮಾರಿತನ, ಮೊಬೈಲ್, ನಿರ್ಲಕ್ಷ್ಯತೆಯನ್ನು ತ್ಯಜಿಸಬೇಕು ಎಂದು ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ತರಬೇತಿ ಆಯುಕ್ತೆ, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್ ಹೇಳಿದರು.
ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಫ್ರೆಶರ್ ಡೇ ಅತಿಥಿಯಾಗಿ ಅವರು ಮಾತನಾಡಿದರು.
ಇನ್ನೋರ್ವ ಅತಿಥಿಯಾಗಿ ಶಾಲೆಯ ಹಳೆಯ ವಿದ್ಯಾರ್ಥಿನಿ, ಭಟ್ಕಳ ಅಂಜುಮಾನ್ ಕಾಲೇಜಿನ ಉಪನ್ಯಾಸಕಿ ಮದೀಹಾ ಅವರು ಮಾತನಾಡಿ, ಇಂದು ನಾನು ನಿಮ್ಮೆಲ್ಲರ ಎದುರು ಧೈರ್ಯವಾಗಿ ಮಾತನಾಡಲು, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೆ ಉತ್ತೀರ್ಣಳಾಗಲು ಮೂಲ ಕಾರಣವೇ ಜಿ.ಎಂ.ನಲ್ಲಿ ಪಡೆದ ಶಿಕ್ಷಣ. ಪ್ರತಿಯೊಂದು ಯಶಸ್ಸಿನಲ್ಲೂ ನಾನು ಸಂಸ್ಥೆಯನ್ನು ಸ್ಮರಿಸುತ್ತೇನೆಂದರು.
ಶಾಲಾ ಪ್ರಾಂಶುಪಾಲ ಬ್ರಹ್ಮಾಚಾರಿ ಕೆ.ಎನ್. ಹೊಸದಾಗಿ ಸಂಸ್ಥೆಗೆ ಸೇರಿಕೊಂಡ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಇಂದು ನಮ್ಮ ಕನಸೆಲ್ಲಾ ನನಸಾಗುತ್ತಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿ ಅವರ ಅನುಭವಗಳನ್ನು ಹಂಚಿಕೊಳ್ಳುವಾಗ ಜೀವನ ಸಾರ್ಥಕತೆಯ ಅನುಭವ ನೀಡುತ್ತದೆ. ಜಿ.ಎಂ. ಎಲ್ಲಾ ರೀತಿಯ ವೇದಿಕೆ, ಅವಕಾಶಗಳನ್ನು ಒದಗಿಸಿಕೊಡುತ್ತದೆ. ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕೆಂದರು.
ಹೊಸದಾಗಿ ಸೇರ್ವಡೆಗೊಂಡ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದದವರ ನೃತ್ಯ, ಗಾಯನ, ಕಿರುಪ್ರಹಸನ, ಸಂಗೀತವಾದ್ಯ ಪರಿಕರಗಳ ನಾದನ, ಯಕ್ಷ ನರ್ತನ, ವಿವಿಧ ಧರ್ಮಗಳ ಸಮ್ಮಿಲನದ ಫ್ಯಾಶನ್ ಶೋ ಮನೋರಂಜನೆಯ ಜೊತೆಗೆ ಹೊಸ ಪ್ರತಿಭೆಗಳ ಮುಕ್ತ ಪರಿಚಯಕ್ಕೆ ಕಾರಣವಾಯಿತು. ಅದೃಷ್ಟ ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಚೀಟಿ ಮೂಲಕ ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.