“ಯಕ್ಷಕಲೆ ಮೂಲಸ್ವರೂಪಕ್ಕೆ ಧಕ್ಕೆಯಗದಂತೆ ನೋಡಬೇಕು’
Team Udayavani, Jan 17, 2019, 1:30 AM IST
ತೆಕ್ಕಟ್ಟೆ: ಯಕ್ಷಗಾನ ಕಲೆಯಲ್ಲಿ ಎಷ್ಟೇ ಬದಲಾವಣೆ ತಂದರೂ ಒಳ್ಳೆಯದು ಮಾತ್ರ ಉಳಿದು ಕೊಳ್ಳುತ್ತದೆ. ಯಕ್ಷ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ಯಾಗದಂತೆ ನೋಡಿಕೊಳ್ಳಬೇಕಾಗಿದೆ. ಸರ್ವಮಾನ್ಯ ಯಕ್ಷಕಲೆಯನ್ನು ಜೀವಂತಗೊಳಿಸುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕಾಗಿದೆ ಎಂದು ಪ್ರಾಚಾರ್ಯ ಕೆ.ಪಿ. ಹೆಗ್ಡೆ ಹೇಳಿದರು
ಅವರು ಜ. 14ರಂದು ಛಾಯಾತ್ಮಜ ಗೆಳೆಯರ ಬಳಗ ಕೊಮೆ ಪ್ರಾಯೋಜನೆಯಲ್ಲಿ ಲೋಹಿತ್ ಬಳಗ ಕೊಮೆ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಯಶಸ್ವಿ ಕಲಾವೃಂದದ ಸಹಕಾರದೊಂದಿಗೆ ಕೊಮೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನ ದ್ರೌಪದಿ ಪ್ರತಾಪ ರಂಗದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಶಸ್ವಿ ಕಲಾವೃಂದದ ಮದ್ದಳೆ ಗುರುಗಳಾದ ಕೂಡ್ಲಿ ದೇವದಾಸ್ ರಾವ್ ಮಾತನಾಡಿ, ಸಂಪ್ರದಾಯದ ನಡೆಯನ್ನು ಕಲಾವಿದನು ಮೊದಲು ಅರಿತಿರಬೇಕು. ಆಗ ಮಾತ್ರ ಆರೋಗ್ಯಕರ ಆವಿಷ್ಕಾರ ಸಾಧ್ಯ. ಕೇವಲ ನೋಡಿಯೋ, ಅಲ್ಪಸ್ವಲ್ಪ ತಿಳಿದೋ ಮಾತನಾಡುವುದು ಸರಿಯಲ್ಲ. ಮೂಲ ಯಕ್ಷಗಾನವನ್ನು ಕರಗತ ಮಾಡಿಕೊಂಡು ಕಲಾಸ್ವಾಧನೆ ಮಾಡಿದರೆ ಪರಿಪಕ್ವ ಅಭಿಪ್ರಾಯಗಳು ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊçಕೂರು ಸೀತಾರಾಮ ಶೆಟ್ಟಿ, ಉದ್ಯಮಿ ಜಯಸುದರ್ಶನ, ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ವೆಂಕಟೇಶ ವೈದ್ಯ ಕೊಮೆ, ಯುವ ಮದ್ದಳೆಗಾರ ಲೋಹಿತ್ ಕೊಮೆ ಉಪಸ್ಥಿತರಿದ್ದರು.
ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ, ನಿರೂಪಿಸಿದರು. ಯಕ್ಷ ಛಾಯಾಚಿತ್ರಗ್ರಾಹಕ ಪ್ರಶಾಂತ ಮಲ್ಯಾಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.