“ದುರಾಸೆಯಿಂದಾಗಿಯೇ ಮೀನುಗಳಿಲ್ಲದ ದಿನಗಳು ಎದುರಾಗಿವೆ’

ಉದಯವಾಣಿ ಸುವರ್ಣ ಸಂಭ್ರಮ; ಮಕ್ಕಳ ದಿನ "ಜೀವನಕಥನ'

Team Udayavani, Nov 14, 2019, 5:03 AM IST

1311kdlm4ph-(6)

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ
ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

ಕುಂದಾಪುರ: ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ತಂದೆಗೆ ಆರೋಗ್ಯ ಇರಲಿಲ್ಲ. ವಿದ್ಯೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಶಾಲೆ ಮೊಟಕುಗೊಳಿಸಿ 39 ವರ್ಷಗಳ ಹಿಂದೆ ಮೀನು ಗಾರಿಕೆಯಲ್ಲಿ ತೊಡಗಿಕೊಂಡೆ. ಆಗ ಯಾಂತ್ರೀಕೃತ ದೋಣಿಗಳಿರಲಿಲ್ಲ, ಮೊಬೈಲ್‌ ಇರಲಿಲ್ಲ, ಆಧುನಿಕ ಸೌಕರ್ಯಗಳು ಇಲ್ಲದ ಆ ದಿನಗಳಲ್ಲಿ ಸಮುದ್ರಕ್ಕೆ ತೆರಳಿದವರು ಮರಳಿ ಬಂದರೆ ಬಂದರು, ಇಲ್ಲದಿದ್ದರೆ ಮನೆಗೊಬ್ಬ ಸದಸ್ಯ ಕಡಿಮೆಯಾದಂತೆಯೇ. ಆದರೆ ಈಗ ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದಂತಿರುವ ಸ್ಥಿತಿಗೆ ಬಂದು ದುರಾಸೆ ಯಿಂದಾಗಿ ಮೀನಿಲ್ಲದ ದಿನಗಳನ್ನು ಕಳೆಯುತ್ತಿದ್ದೇವೆ ಎಂದು ಹೇಳಿ ಕ್ಷಣಕಾಲ ಭಾವುಕರಾದರು ಗಂಗೊಳ್ಳಿಯ ಮೀನುಗಾರ ಜಿ. ರಾಮಪ್ಪ ಖಾರ್ವಿ.

ಅವರು ಬುಧವಾರ ಇಲ್ಲಿನ ಸರಕಾರಿ ಜೂನಿಯರ್‌ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ “ಉದಯವಾಣಿ’ಯು ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಸಾಧಕರ ಜತೆಗೆ “ಜೀವನ ಕಥನ’ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಜೀವನಾನುಭವ ಹೇಳಿಕೊಂಡರು.

ಅತಿಯಾಗಿ ವಿಷವಾದ ಸೌಕರ್ಯ
ಯಾಂತ್ರಿಕ ದೋಣಿಗಳು ಕಾಲಿಟ್ಟವು. ಎಂಜಿನ್‌ ಬೋಟ್‌ಗಳು ಬಂದವು. ಆಧುನಿಕ ಸಲಕರಣೆ ಗಳಾದವು. ಮೀನು ಎಲ್ಲಿದೆ ಎಂದು ಖಚಿತವಾಗಿ ತಿಳಿಯುವಂತೆ ಉಪಗ್ರಹಾಧಾರಿತ ಆ್ಯಪ್‌ ಬಂದಿತು. ಆಸೆ ದುರಾಸೆ ಆಗಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುವ ಪರಿಸ್ಥಿತಿ ಬಂದಿದೆ. ಮಿತಿಗಿಂತ ಹೆಚ್ಚು ಮೀನು ಹಿಡಿದ ಕಾರಣ ಮೀನಿಲ್ಲ ಎಂದು ಪರಿತಪಿಸುವಂತಾಗಿದೆ. ಹಿರಿಯರು ಹೇಳಿಕೊಟ್ಟ ಮೂಲವಿದ್ಯೆ ಅಳವಡಿಸಿ ಕೊಳ್ಳುತ್ತಿದ್ದರೆ ನಮ್ಮ ಮೊಮ್ಮಕ್ಕಳ ಕಾಲಕ್ಕೂ ಮೀನು ಕಡಿಮೆಯಾಗುತ್ತಿರಲಿಲ್ಲ. ಲೈಟ್‌ಫಿಶಿಂಗ್‌, ಬುಲ್‌ ಟ್ರಾಲ್‌ಬೋಟ್‌ ಮೊದಲಾದವುಗಳಿಂದ ಅಗತ್ಯಕ್ಕೂ ಹೆಚ್ಚು ಮೀನು ಹಿಡಿಯಲಾಗುತ್ತಿದೆ ಎಂದರು.

ಕರಾವಳಿಯಲ್ಲಷ್ಟೇ ಸಿಗುತ್ತಿದ್ದ ಮೀನು ಈಗ ಗುಜರಾತ್‌, ಮಹಾರಾಷ್ಟ್ರ ಕಡೆಗೆ ಹೋದರೂ ದೊರೆ ಯುತ್ತಿಲ್ಲ. ಸಮುದ್ರಕ್ಕೆ ಹೋದ ಬೋಟುಗಳು ಖಾಲಿ ಮರಳುತ್ತಿವೆ. 4 ತಿಂಗಳಿ ನಿಂದ ಮೀನುಗಾರಿಕೆಯನ್ನೇ ನಂಬಿದವರು ಕಷ್ಟ ದಲ್ಲಿದ್ದೇವೆ. ಸರಕಾರದ್ದೂ ತಪ್ಪಿದೆ. ಕಾನೂನು ಅನುಷ್ಠಾನ ಸರಿಯಾಗಿಲ್ಲ ಎಂದರು.

ವಿಚಾರಮಂಥನ
ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಕಾಮತ್‌ ಮಾತನಾಡಿ, ಕುತೂಹಲಕರ ಪ್ರಶ್ನೆಗಳು ಮಕ್ಕಳಲ್ಲಿ ಸಹಜ. ಬೆಳೆಯುತ್ತ ಹೋದಂತೆ ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಪ್ರಶ್ನಿಸುವ ಮನೋಭಾವಕ್ಕೆ ಸಂಕೋಚದ ಪೊರೆ ಆವರಿಸಿ ಕೊಳ್ಳುತ್ತದೆ. ಪ್ರಶ್ನೆಗಳ ಮೂಲಕವೇ ವಿಚಾರ ಮಂಥನವಾಗಬೇಕು ಎಂದರು.
ಉಪಪ್ರಾಂಶುಪಾಲ ಮೋಹನ ರಾವ್‌ ಎಂ.ಜೆ. ಅಧ್ಯಕ್ಷತೆ ವಹಿಸಿ, ಮಕ್ಕಳ ಆಸಕ್ತಿಯನ್ನು ಬೆಳೆಸುವ ಕುತೂ ಹಲ ತಣಿಸುವ ವಿಶಿಷ್ಟ ಕಾರ್ಯಕ್ರಮ “ಉದಯವಾಣಿ’ ಸಹಯೋಗದಲ್ಲಿ ನಡೆದಿದೆ ಎಂದರು.

ವಿದ್ಯಾರ್ಥಿನಿಯರಾದ ಭೂಮಿಕಾ ಮತ್ತು ಬಳಗ ದವರು ಪ್ರಾರ್ಥಿಸಿ, ಶಿಕ್ಷಕ ಶಂಕರನಾರಾಯಣ ಮಿತ್ತಂತಾಯ ಸ್ವಾಗತಿಸಿದರು. ಮಾರುಕಟ್ಟೆ ವಿಭಾಗದ ಹಿರಿಯ ಪ್ರತಿನಿಧಿ ಕೃಷ್ಣಮೂರ್ತಿ, ವರದಿಗಾರರಾದ ಡಾ| ಸುಧಾಕರ ನಂಬಿಯಾರ್‌, ದಯಾನಂದ ಬಳ್ಕೂರು, ಲೋಕೇಶ್‌ ಆಚಾರ್ಯ ತೆಕ್ಕಟ್ಟೆ ಸಹಕರಿಸಿದರು. ಪ್ರಸರಣ ವಿಭಾಗದ ವಿಶ್ವನಾಥ್‌ ಬೆಳ್ವೆ ವಂದಿಸಿದರು. ಉಪ ಮುಖ್ಯ ವರದಿಗಾರ ಲಕ್ಷ್ಮೀ ಮಚ್ಚಿನ ನಿರ್ವಹಿಸಿದರು.

ಪ್ರಶ್ನೆಗಳ ಸರಮಾಲೆ
ಬೋರ್ಡ್‌ ಹೈಸ್ಕೂಲಿನ ಶಮಿತಾ, ಸುರಕ್ಷಾ, ದೀಕ್ಷಾ, ವೃಕ್ಷಾ, ಸಿದ್ದಿಕ್‌, ವೀಣಾ, ಸ್ನೇಹಾ ಖಾರ್ವಿ, ಶಶಿಕಾಂತ್‌, ಸಿಂಧು ಹೆಗ್ಡೆ, ನಿಸರ್ಗ, ಶೋಭಿತಾ, ಬಿ.ಆರ್‌. ರಾಯರ ಹಿಂದೂ ಶಾಲೆಯ ಉತ್ತಮ ಶೇಟ್‌, ಪ್ರಮೋದ್‌, ಗಣೇಶ್‌, ನಂದನ್‌ ಕುಮಾರ್‌, ಪ್ರಶಾಂತ್‌, ಎಚ್‌.ಎಂ.ಎಂ. ಆಂಗ್ಲಮಾಧ್ಯಮ ಶಾಲೆ ಕುಂದಾಪುರದ ಹಿತೇಶ್‌, ಲಂಕೇಶ್‌, ಅಕ್ಷಯ್‌, ವಿ.ಕೆ.ಆರ್‌. ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರದ ಸತ್ಯೇಂದ್ರ, ವೈಭವ್‌, ಅನುಶ್ರೀ, ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆ ಯ ಚಿರಾಗ್‌, ಶ್ರೇಯಸ್‌ ಪ್ರಶ್ನೆಗಳನ್ನು ಕೇಳಿದರು.

ಭಾಗವಹಿಸಿದ್ದ ಶಾಲೆಗಳು
ಬಿ.ಆರ್‌. ರಾಯರ ಹಿಂದೂ ಶಾಲೆ, ಕುಂದಾಪುರ, ಎಚ್‌.ಎಂ.ಎಂ.ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ವಿ.ಕೆ.ಆರ್‌. ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ಬೋರ್ಡ್‌ ಹೈಸ್ಕೂಲ್‌, ಕುಂದಾಪುರ, ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ಹೊಸತಿರುವು
ಮಕ್ಕಳ ದಿನ ಆಚರಣೆಗೆ ಉದಯವಾಣಿ ಹೊಸತಿರುವು ನೀಡಿದೆ. ಸರಕಾರದ ಮಾರ್ಗಸೂಚಿಯಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆಯಿದೆ.
-ಅಶೋಕ್‌ ಕಾಮತ್‌, ಬಿಇಒ, ಕುಂದಾಪುರ

ರಾಮಪ್ಪ ಅವರೊಂದಿಗೆ ಸಂವಾದ

ಪ್ರ: ಮೀನು ಹಿಡಿದ ಬಳಿಕ ಎಷ್ಟು ದಿನ ಕೆಡದ ಹಾಗೆ ಇಡಬಹುದು?
-ಪ್ರಶಾಂತ್‌, (ಬಿ.ಆರ್‌. ರಾಯರ ಹಿಂದೂ ಶಾಲೆ, ಕುಂದಾಪುರ)
ಉ: ಮಂಜುಗಡ್ಡೆಯಲ್ಲಿ ಎರಡು ದಿನ, ಫ್ರಿಡ್ಜ್ನಲ್ಲಿ ಇನ್ನೊಂದಷ್ಟು ದಿನ, ರಾಸಾಯನಿಕ ಬಳಸಿ ಹೆಚ್ಚುದಿನ ಇಡಬಹುದು. ಆಹಾರವಾದ ಕಾರಣ ರಾಸಾಯನಿಕ ಬಳಸಬಾರದು.

ಪ್ರ: ಮೀನು ಎಲ್ಲಿ ಇದೆ ಎಂದು ಹೇಗೆ ತಿಳಿಯುತ್ತದೆ?
-ಲಂಕೇಶ್‌, (ಎಚ್‌.ಎಂ.ಎಂ. ಆಂಗ್ಲಮಾಧ್ಯಮ ಶಾಲೆ, ಕುಂದಾಪುರ)
ಉ: ಈಗ ಆಧುನಿಕ ಸಲಕರಣೆಗಳಿವೆ. ಬೋಟ್‌ನ ಅಡಿಯಲ್ಲಿ ಕೆಮರಾ ಇರಿಸಲಾಗುತ್ತದೆ. ಆಳಸಮುದ್ರದಲ್ಲಿ ಮೀನು ಇರುವುದೂ ಸೇರಿದಂತೆ ನಿರ್ದಿಷ್ಟ ಪ್ರದೇಶದಲ್ಲಿ ಮೀನು ಇದೆ, ಎಷ್ಟಿದೆ, ಯಾವ ಜಾತಿಯದ್ದು ಇದೆ ಎಂದು ಉಪಗ್ರಹ ತಿಳಿಸುವ ಸರಕಾರದ ಆ್ಯಪ್‌ ಬಂದಿದೆ.

ಪ್ರ: ತಿಮಿಂಗಿಲ, ಡಾಲ್ಫಿನ್‌ ದಾಳಿ ಮಾಡಿದರೆ ಏನು ಮಾಡುವಿರಿ?
-ಸತ್ಯೇಂದ್ರ (ವಿ.ಕೆ.ಆರ್‌. ಆಂಗ್ಲಮಾಧ್ಯಮ ಶಾಲೆ, ಕುಂದಾಪುರ)
ಉ: ಹಿಂದಿನ ಕಾಲದಲ್ಲಿ ತಿಮಿಂಗಿಲವನ್ನು ದೇವರ ಮೀನು ಬಂತು ಕೈ ಮುಗಿ ಎಂದು ಹೇಳುತ್ತಿದ್ದರು. ಯಾವ ನಂಬಿಕೆಯೋ; ಅದು ಹೋಗುತ್ತಿತ್ತು. ಅದು ಅಲೆಗಳನ್ನು ಎಬ್ಬಿಸಿಕೊಂಡು ಬರುವಾಗ ಒಂದು ರೀತಿಯ ಶಬ್ದದಲ್ಲೇ ತಿಮಿಂಗಿಲದ ಇರವು ತಿಳಿಯುತ್ತದೆ. ಈಗ ಸ್ಪೀಡ್‌ ಬೋಟ್‌ಗಳಿಂದಾಗಿ ಅವುಗಳಿಂದ ತಪ್ಪಿಸಿಕೊಳ್ಳಬಹುದು. ಡಾಲ್ಫಿನ್‌ ಹಿಡಿಯಬಾರದೆಂಬ ಕಾನೂನು ಇದೆ.

ಪ್ರ: ಈ ವರ್ಷ ಮೀನು ಕಡಿಮೆ ಯಾಕೆ?
-ವೃಕ್ಷಾ (ಬೋರ್ಡ್‌ ಹೈಸ್ಕೂಲ್‌, ಕುಂದಾಪುರ)
ಉ: ದುರಾಸೆಯ ಫ‌ಲ. ಮಿತಿಗಿಂತ ಹೆಚ್ಚು ಮೀನುಗಾರಿಕೆ ಮಾಡಿದ್ದರ ಪರಿಣಾಮ. ಜತೆಗೆ ಚಂಡಮಾರುತದಂತಹ ಪ್ರಕೃತಿ ವಿಕೋಪ.

ಪ್ರ: ಮೀನುಗಾರಿಕೆಯಲ್ಲಿ ನಷ್ಟವಾದರೆ ಸರಕಾರದಿಂದ ಪರಿಹಾರ ಇದೆಯೇ?
-ಶ್ರೇಯಸ್‌ (ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆ)
ಉ: ಕೃಷಿಕರಿಗೆ ನೀಡಿದಂತೆ ಮೀನುಗಾರರಿಗೆ ಯಾವುದೇ ಪರಿಹಾರ ಇಲ್ಲ.

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Kundapura: ಬಸ್‌ನಲ್ಲೇ ಹೃದಯಾಘಾತ; ಸಮಯಪ್ರಜ್ಞೆ ಮೆರೆದ ಬಸ್‌ ಚಾಲಕ, ಸಾರ್ವಜನಿಕರ ಮೆಚ್ಚುಗೆ

4

Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ

3(1

Belman: ಹಿಂದೂಗಳ ಮನೆಯಲ್ಲಿ ಗೋದಲಿ ಸಂಭ್ರಮ!

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.