ಸುವರ್ಣ ಗೋಪುರ ಸಮರ್ಪಣೆ ಸಂಭ್ರಮ ದಿನಗಣನೆ
ಬ್ರಹ್ಮರಥವನ್ನು ಎಳೆಯಲಿದ್ದಾರೆ 5,000 ಚಿಣ್ಣರು
Team Udayavani, May 20, 2019, 6:00 AM IST
ಉಡುಪಿ: ಹದಿನಾರು ವರ್ಷಗಳ ಬಳಿಕ ಇದೇ ಮೊದಲ ಬಾರಿ ಜಿಲ್ಲೆಯ ಚಿಣ್ಣರ ಸಂತರ್ಪಣೆ ಶಾಲೆಗಳ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ಜೂ. 3ರಂದು ಶ್ರೀಕೃಷ್ಣಮಠಕ್ಕೆ ಭೇಟಿ, ಅಂದು ಸಂಜೆ ರಥಬೀದಿಯಲ್ಲಿ ನಡೆಯಲಿರುವ ರಥೋತ್ಸದಲ್ಲಿ ಪಾಲ್ಗೊಂಡು ಬ್ರಹ್ಮರಥ ಎಳೆಯಲಿದ್ದಾರೆ.
5,000 ಚಿಣ್ಣರ ನಿರೀಕ್ಷೆ
ಪಲಿಮಾರು ಪರ್ಯಾಯ ಶ್ರೀಗಳ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣ ಮಠ ಸುವರ್ಣ ಗೋಪುರ ಸಮರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಇದೀಗ ಪೂರ್ವಭಾವಿಯಾಗಿ ನಡೆಯಲಿರುವ ರಥೋತ್ಸದಲ್ಲಿ ಚಿಣ್ಣರ ಸಂತರ್ಪಣೆಯ ಶಾಲೆಗಳ 5,000 ಚಿಣ್ಣರು ಬ್ರಹ್ಮರಥವನ್ನು ಎಳೆಯಲಿದ್ದಾರೆ. ಆ ಮೂಲಕ ಪಲಿಮಾರು ಶ್ರೀಗಳ ಪರ್ಯಾಯ ಅವಧಿಯಲ್ಲಿ ಏಕಕಾಲದಲ್ಲಿ 5 ಸಾವಿರ ವಿದ್ಯಾರ್ಥಿಗಳು ಒಟ್ಟಾಗಿ ರಥವನ್ನು ಎಳೆದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಪೂರ್ವಭಾವಿ ಸಭೆ
ಇದಕ್ಕಾಗಿ ಪರ್ಯಾಯ ಶ್ರೀ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಮೇ 18ರಂದು ಚಿಣ್ಣರ ಶಾಲೆಯ ಶಿಕ್ಷಕರ ಜತೆ ಪೂರ್ವಭಾವಿ ಸಭೆ ಸಹ ನಡೆಸಲಾಗಿದೆ.
120 ಚಿಣ್ಣರ ಶಾಲೆ
ಜಿಲ್ಲೆಯಲ್ಲಿ ಒಟ್ಟು 120 ಚಿಣ್ಣರ ಸಂತರ್ಪಣೆಯ ಶಾಲೆಗಳಲ್ಲಿ ಸುಮಾರು 15,000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ 4ರಿಂದ 7 ತರಗತಿಯ ವರೆಗಿನ ಕಾರ್ಯಕ್ರಮಕ್ಕೆ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಯಾಣ ಖರ್ಚು ಮಠದಿಂದ
ಚಿಣ್ಣರ ಶಾಲೆಯ ಮಕ್ಕಳನ್ನು ಆಯಾ ಶಾಲಾ ಪ್ರಾಧ್ಯಾಪಕರು ವಾಹನಗಳ ಮೂಲಕ ಕೃಷ್ಣ ಮಠಕ್ಕೆ ಕರೆ ತರಲಿದ್ದಾರೆ. ವಾಹನದ ವೆಚ್ಚವನ್ನು ಪಲಿಮಾರು ಮಠ ಭರಿಸಲಿದೆ. ಮಕ್ಕಳಿಗೆ ಮಧ್ಯಾಹ್ನ ಹಾಗೂ ಸಂಜೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗುವುದು.
ಕಾರ್ಯಕ್ರಮದ ವಿವರ
ಜೂ. 3ರಂದು ಅಪರಾಹ್ನ 3 ಗಂಟೆಗೆ ರಾಜಾಂಗಣದಲ್ಲಿ ಎಲ್ಲ ಶಾಲೆಗಳ ಮಕ್ಕಳು ಒಟ್ಟು ಸೇರಲಿದ್ದಾರೆ. ಅನಂತರ ಶ್ರೀ ಕೃಷ್ಣ ದೇವರ ದರ್ಶನ, 4ಕ್ಕೆ ರಥಬೀದಿಯಲ್ಲಿ ಮಕ್ಕಳು ಸೇರಲಿದ್ದಾರೆ. 4.30 ಪರ್ಯಾಯ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಅನಂತರ ಸಂಜೆ 5.30ಕ್ಕೆ ಚಿಣ್ಣರು ಬ್ರಹ್ಮ ರಥವನ್ನು ಎಳೆಯಲಿದ್ದಾರೆ.
ಶ್ರೀ ಕೃಷ್ಣಮಠದ ಸುವರ್ಣ ಗೋಪುರದ ಪೂರ್ವಭಾವಿಯಾಗಿ ಜೂ. 1 ರಂದು ಗರ್ಭಗುಡಿಯ ಸುವರ್ಣ ಲೇಪಿತ ಮೂರು ಕಲಶಗಳನ್ನು ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಮಠಕ್ಕೆ ತರಲಾಗುತ್ತದೆ. ಜೂ. 6ರಂದು ಸುವರ್ಣಗೋಪುರದ ಪ್ರತಿಷ್ಠಾಪನೆ ನಡೆಯಲಿದ್ದು, ಜೂ. 9ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ.
ಮಕ್ಕಳ ಕಲರವ
ಸುಮಾರು 4ರಿಂದ 5ಸಾವಿರ ಮಕ್ಕಳು ಬರುವ ನಿರೀಕ್ಷೆಯಿದೆ. ಈಗಾಗಲೆ 120 ಶಾಲೆಗಳ ಶಿಕ್ಷಕರು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ. ಪಲಿಮಾರು ಶ್ರೀಗಳ ಆಶಯದಂತೆ ಮಕ್ಕಳಿಂದ ಈ ಬಾರಿ ಬ್ರಹ್ಮರಥೋತ್ಸವ ನಡೆಸಲಿದ್ದೇವೆ.
-ಎಂ. ಶ್ರೀನಿವಾಸ್ ರಾವ್, ಚಿಣ್ಣರ ಸಂತರ್ಪಣೆ ಯೋಜನೆ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.