ನಶಿಸುತ್ತಿರುವ ಜನಪದ ಕಲೆಗಳ ಉಳಿವಿಗೆ ಸರಕಾರ ಪಣ
ರಾಜ್ಯವ್ಯಾಪಿ ಕನ್ನಡ ಸಂಸ್ಕೃತಿ-ಮೂಲ ಸಂಸ್ಕೃತಿ ಅಭಿಯಾನ
Team Udayavani, Jan 4, 2023, 6:35 AM IST
ಕಾರ್ಕಳ: ರಾಜ್ಯದ ಅಪರೂಪದ, ಬೆಳಕಿಗೆ ಬಾರದಿರುವ, ನಶಿಸುತ್ತಿರುವ ಕಲೆಗಳಿಗೆ ಪ್ರೋತ್ಸಾಹ ಕೊಡುವ ಹಾಗೂ ಕಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಯುವ ಸಮೂಹವನ್ನು ಆಕರ್ಷಿಸುವ ನಿಟ್ಟಿನಲ್ಲಿ 2 ತಿಂಗಳ ಕಾಲ “ಕನ್ನಡ ಸಂಸ್ಕೃತಿ-ಮೂಲ ಸಂಸ್ಕೃತಿ’ ಹೆಸರಿನ ವಿನೂತನ ಅಭಿಯಾನವನ್ನು ರಾಜ್ಯವ್ಯಾಪಿ ನಡೆಸಲು ಸರಕಾರ ನಿರ್ಧರಿಸಿದೆ.
ಅಭಿಯಾನವನ್ನು ಆರಂಭಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ. ಸರಕಾರದಿಂದ ಒಪ್ಪಿಗೆ ದೊರೆತ ಕೂಡಲೇ ಚಾಲನೆ ಸಿಗಲಿದೆ. ಜನವರಿಯಲ್ಲೇ ಆರಂಭಿಸುವ ಚಿಂತನೆ ಇದೆ.
ಯಾವೆಲ್ಲ ಕಲಾಪ್ರಕಾರಗಳಿವೆ
ಲಾವಣಿ ಹಾಡು, ಗರತಿ ಹಾಡು, ಕೋಲಾಟದ ಪದಗಳು, ನಲ್ಲಹರಕೆಗಳು, ದೇವರಗುಡ್ಡದ ಪದಗಳು, ಯಕ್ಷಗಾನ ಬಯಲಾಟ, ತೊಗಲು ಗೊಂಬೆಯಾಟ, ಹುಲಿವೇಷ, ಸುಗ್ಗಿಯ ಕುಣಿತ, ತಾಳವಾದ್ಯ, ಬೀಸು ಕಂಸಾಳೆ, ಕಮಸಾಲಿ, ಉಮ್ಮತಲ್, ಪೂಜಾ ಕುಣಿತ, ಕೃಷ್ಣ ಪಾರಿಜಾತ, ಜಗ್ಗಲಿಕೆ ಕುಣಿತ, ಚೌಡಿಕೆ ಮೇಳ, ಸೋಮನ ಕುಣಿತ, ಗೊರವರ ಕುಣಿತ, ವೀರಗಾಸೆ, ಯಕ್ಷಗಾನ, ಭೂತಾರಾಧನೆ, ನಾಗಮಂಡಲ ಸೇರಿದಂತೆ 60ಕ್ಕೂ ಅಧಿಕ ಕಲಾ ಪ್ರಕಾರಗಳು ಕಾಣಬರುತ್ತಿದ್ದು, ಇನ್ನು ಅನೇಕ ಕಲಾಪ್ರಕಾರಗಳು ಸಮಾಜದ ಮುಖ್ಯವಾಹಿನಿಗೆ, ಬಾರದೆ ತೆರೆಮರೆಯಲ್ಲೆ ಇವೆ.
ಅಭಿಯಾನ ಹೇಗೆ?
ಅಭಿಯಾನದ ಯಶಸ್ಸಿಗೆ ಜಿಲ್ಲೆ, ವಿಭಾಗ ಮಟ್ಟದಲ್ಲಿ ಅಧಿಕಾರಿಗಳು, ವಿದ್ವಾಂಸರು, ಅನುಭವಿ ಕಲಾವಿದರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಆರಂಭದಲ್ಲಿ ಕಲಾ ಪ್ರಕಾರಗಳನ್ನು ಗುರುತಿಸಲಾಗುತ್ತದೆ. ಶಿಬಿರ, ತರಬೇತಿ ನೀಡಿ, ಪ್ರದರ್ಶನಗೊಳಿಸುವುದು. ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿ ನಡೆಸಿ ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುತ್ತದೆ.
ಸರಕಾರದ ಬಳಿ ಕಲೆಗಳ ಸಮಗ್ರ ದಾಖಲೆ ಇಲ್ಲ
ಊರು ಕೇರಿ, ಹಾದಿ ಬೀದಿ ಬದಲಾದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗಿನ ಜನಜೀವನದಲ್ಲಿ ಭಾಷೆ. ಪರಂಪರೆ, ಕಲೆ, ಸಂಸ್ಕೃತಿಯಲ್ಲಿ ಸಾಕಷ್ಟು ಭಿನ್ನತೆ ಕಂಡುಬರುತ್ತದೆ. ಇಂದಿನ ಆಧುನಿಕ ಯುಗ, ಯಂತ್ರ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲ ವಿಷಯಗಳಲ್ಲಿ ಪ್ರಗತಿ ಸಾಧಿಸುತ್ತಲೇ ಮೂಲ ಸಂಸ್ಕೃತಿಯನ್ನು ಅಳಿವಿನಂಚಿಗೆ ತಳ್ಳಿ ಮರೆತು ಬಿಡುತ್ತಿದ್ದೇವೆ ಎನ್ನುವ ದೂರುಗಳು ಜನಪದ ಕಲಾವಿದರಲ್ಲಿದೆ. ನಾಡಿನ ನೆಲ -ಜಲದಲ್ಲಿ ಈ ಜಾನಪದದ ಗ್ರಂಥವಿದ್ದು, ಈ ಬಗ್ಗೆ ಅಧ್ಯಯನ ಮಾದರಿಯಲ್ಲಾಗಲಿ, ಸಮಗ್ರ ಮಾಹಿತಿಯಲ್ಲಾಗಲಿ ಸರಕಾರದ ಬಳಿ ಇಲ್ಲ.
ನಶಿಸುತ್ತಿರುವ ಕಲೆಗಳನ್ನು ಪುನರುಜ್ಜೀವನಗೊಳಿಸುವ ಯತ್ನವಿದು. ಆಚಾರ-ಪದ್ಧತಿಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತವೆ. ಹೊಸ ಯುವಕರು ಅನುಸರಿಸುತ್ತಿಲ್ಲ. ಅವರಿಗೆ ಗೊತ್ತಿಲ್ಲ. ಇವೆಲ್ಲವನ್ನೂ ತಿಳಿಸಲು ಅಭಿಯಾನ. ಪ್ರದೇಶವಾರು ಆಧುನಿಕತೆಗೆ ಸ್ಪರ್ಶ ಕೊಟ್ಟು ನಡೆಸಲು ತೀರ್ಮಾನಿಸಲಾಗಿದೆ.
– ವಿ. ಸುನಿಲ್ ಕುಮಾರ್, ಇಂಧನ, ಕನ್ನಡ, ಸಂಸ್ಕೃತಿ ಸಚಿವ
ನಿರ್ದಿಷ್ಟವಾಗಿ ಇಂತಿಷ್ಟೇ ಪ್ರಕಾರಗಳು ಇವೆ ಎಂದು ಹೇಳಲಾಗದು. ಸುಮಾರು 50ರಿಂದ 60 ಕಲೆಗಳು ಎಂದು ಗುರುತಿಸಲಾಗಿದೆ. ಜಿಲ್ಲೆಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಪ್ರಸ್ತಾವಕ್ಕೆ ಅಂಕಿತ ಬಿದ್ದ ತತ್‌ಕ್ಷಣ ಚಾಲನೆ ನೀಡಲಿದ್ದೇವೆ. ದಿನ ಅಂತಿಮವಾಗಿಲ್ಲ.
– ಬಲವಂತ ಪಾಟೀಲ್, ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.