ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಸರಕಾರಿ ಬಾವಿ
Team Udayavani, Apr 29, 2019, 6:30 AM IST
ಕಟಪಾಡಿ: ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಪಿತ್ರೋಡಿ ಮುಡ್ಡಲಗುಡ್ಡೆ ಬ್ರಹ್ಮನಗರದಲ್ಲಿನ ಸರಕಾರಿ ಬಾವಿಯೊಂದು ಸಮರ್ಪಕ ನಿರ್ವಹಣೆ ಕಾಣದೆ ಸೊರಗಿದೆ.
ಬಾವಿಯ ಒಳಗಿನಿಂದಲೇ ಗಿಡಗಳು ಬೆಳೆದು ನಿಂತಿದೆ. ಹೂಳೆತ್ತದೆ, ಸಮರ್ಪಕ ನಿರ್ವಹಣೆ ಕಾಣದೆ ಬಾವಿಯ ನೀರು ಕಲುಶಿತಗೊಂಡಿದೆ. ಇದನ್ನೆಲ್ಲ ಸರಿಪಡಿಸಿದರೆ, ಸ್ಥಳೀಯರ ಕುಡಿಯುವ ನೀರಿನ ಬೇಡಿಕೆಗೆ ಪರಿಹಾರವಾಗಬಲ್ಲದು.
ನಳ್ಳಿ ನೀರು ಕಲುಶಿತ
ಈ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳು ಇದ್ದು ಈ ಮೊದಲು ಇದೇ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು. ಇದೀಗ ಪಂಚಾಯತ್ ನಳ್ಳಿ ನೀರಿನ ಸಂಪರ್ಕವನ್ನು ಈ ಭಾಗದ ಜನತೆಗೆ ನೀಡಿದೆ. ಆದರೆ ಅದರಲ್ಲಿ ಹೆಚ್ಚಾಗಿ ಹಳದಿಕೆಂಪು ಮಿಶ್ರಿತ ಬಣ್ಣದ ನೀರು ಬರುವುದರಿಂದ ಹೆಚ್ಚು ಉಪಯೋಗಿಸಲು ಅಸಾಧ್ಯವಾಗಿದೆ.
ವಿದ್ಯುತ್ ಕೈಕೊಟ್ಟು ನಳ್ಳಿ ನೀರು ಬರದೆ ಇರುವ, ಹೆಚ್ಚುವರಿ ನೀರಿನ ಬೇಡಿಕೆ ಇರುವ ತುರ್ತು ಸಂದರ್ಭಗಳಲ್ಲಿ ಇಲ್ಲಿನ ಕಾಲನಿ ನಿವಾಸಿಗಳಿಗೆ ಕುಡಿಯುವ ನೀರು ದೊರಕದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಗಿರೀಶ್ ಸುವರ್ಣ, ಕೋಟ್ 2: ಈ ಸಮಸ್ಯೆಯ ಬಗ್ಗೆ ಇದುವರೆಗೆ ಗಮನಕ್ಕೆ ಬಂದಿಲ್ಲ. ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಮೂರು ಬಾವಿಗಳನ್ನು ಹೂಳೆತ್ತುವ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಅದರ ಜತೆಗೆ ಮುಡ್ಡಲಗುಡ್ಡೆ ಕಾಲನಿಯ ಸರಕಾರಿ ಬಾವಿಯನ್ನು ಕೂಡ ನಿರ್ವಹಣೆ ಮಾಡಲಾಗುತ್ತದೆ. ಜನಪರ ಉಪಯೋಗಕ್ಕಾಗಿ ಸುಮಾರು 10 ದಿನಗಳೊಳಗಾಗಿ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಾಗುವುದು
-ರಮಾನಂದ ಪುರಾಣಿಕ್, ಪಿ.ಡಿ.ಒ., ಉದ್ಯಾವರ ಗ್ರಾ. ಪಂ.
ಈ ಸಮಸ್ಯೆಯ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಗಮನ ಹರಿಸುವಂತೆ ವಿನಂತಿಸಿ ಕೊಳ್ಳಲಾಗಿದೆ.
-ಗಿರೀಶ್ ಸುವರ್ಣ, ಸದಸ್ಯ, ಉದ್ಯಾವರ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.