ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Team Udayavani, Jan 5, 2025, 6:34 AM IST
ಉಡುಪಿ: ಎಪ್ಪತ್ತು ವರ್ಷಗಳ ಆಳ್ವಿಕೆಯಲ್ಲಿ ಭಾರತ ಮಾತೆಯ ಶಿರ ತುಂಡಾದಂತಾಗಿತ್ತು. ಈಗ ಸನಾತನ ಕೇಂದ್ರ ಸರಕಾರ ಭಾರತ ಮಾತೆಯ ತಲೆಯನ್ನು ಉಳಿಸಿದೆ ಮತ್ತು ಕಿರೀಟವನ್ನು ತೊಡಿಸಿದೆ ಎಂದು ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಶ್ರೀ ಅದಮಾರು ಮಠ ಶ್ರೀಕೃಷ್ಣ ಸೇವಾ ಬಳಗದಿಂದ ಶನಿವಾರ ಪೂರ್ಣ ಪ್ರಜ್ಞ ಕಾಲೇಜಿನ ಅಡಿಟೋರಿಯಂನಲ್ಲಿ ಜರಗಿದ ವಿಶ್ವಾರ್ಪಣಮ್ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಅದಮಾರು ಮಠಾಧೀಶರದಿಂದ ಗುರುವಂದನೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.
ಸನಾತನ ಧರ್ಮವನ್ನು, ದೇಶ ವನ್ನು ಎತ್ತಿ ಹಿಡಿಯುವ ಕಾರ್ಯ ಆಗಬೇಕು. ತ್ಯಾಗ, ಅಹಿಂಸೆ, ಔದಾರ್ಯದಲ್ಲಿ ನಾವು ಕೊಟ್ಟದ್ದೆ ಜಾಸ್ತಿ. ನಮ್ಮಿಂದ ಕಬಳಿಸಿದ ಭೂಮಿಯನ್ನು ಪುನಃ ಪಡೆಯುವ ಕಾರ್ಯ ಈಗಿನ ಸರಕಾರದಿಂದ ಆಗುತ್ತಿದೆ ಎಂದರು.
ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನು ಗ್ರಹಿಸಿ, ಮಕ್ಕಳಲ್ಲಿ ಪ್ರಶ್ನಿಸುವ ಗುಣ ಬೆಳೆಸ ಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಶ್ರೀ ಅದಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ನರಹರಿತೀರ್ಥ ಯಕ್ಷಗಾನ ಪ್ರಶಸ್ತಿಯನ್ನು ಕುಮಟಾದ ಶ್ರೀಧರ ಮಹಾಬಲೇಶ್ವರ ಷಡಕ್ಷರಿ ಅವರಿಗೆ ಶ್ರೀಪಾದರು ನೀಡಿ ಅನುಗ್ರಹಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್, ಉದ್ಯಮಿ ಗಳಾದ ಡಾ| ವಿನಿತ್ ಆನಂದ್ ಭದ್ರಾವತಿ, ಮುರಳೀಧರ ಹತ್ವಾರ್ ಅವರನ್ನು ಗೌರವಿಸಲಾಯಿತು.
ಬೆಂಗಳೂರಿನ ಶೇಷಗಿರಿ ಕೆ.ಎನ್. ಅವರು ಪಲಿಮಾರು ಹಿರಿಯ ಯತಿಗಳ ಕುರಿತು ಮಾತನಾಡಿದರು. ಶಾಸಕ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು. ನಂದಿನಿ ಪುಣೆ ಅವರಿಂದ ಸಂಗೀತ ಕಾರ್ಯಕ್ರಮ ಜರಗಿತು.
ಶ್ರೀ ಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿ, ಪ್ರಸ್ತಾವಿಸಿದರು. ನಾಗರಾಜ ತಂತ್ರಿ ವಂದಿಸಿ, ಟ್ಯಾಪ್ಮಿ ಪ್ರಾಧ್ಯಾಪಕ ಡಾ| ನಂದನ್ ಪ್ರಭು ನಿರೂಪಿಸಿದರು.
“ನೋ ಮ್ಯಾರೇಜ್, ನೋ ಚಿಲ್ಡ್ರನ್’ ಸಂಸ್ಕೃತಿ ಬೇಡ: ಮೀನಾಕ್ಷಿ
“ಬಾಂಗ್ಲಾಪಾಠ’ ವಿಷಯದ ಕುರಿತು ಉಪನ್ಯಾಸ ನೀಡಿದ ಚಿಂತಕಿ ಡೆಹ್ರಾಡೂನ್‌ನ ಮೀನಾಕ್ಷಿ ಸೆಹರಾವತ್, ಸ್ವಾತಂತ್ರ್ಯ ಸಂದರ್ಭದಲ್ಲಿ “ಅಹಿಂಸಾ ಪರಮೋ ಧರ್ಮಃ’ ಎನ್ನುತ್ತಲೇ ಲಕ್ಷಾಂತರ ಹಿಂದುಗಳ ಮಾರಣಹೋಮ ನಡೆದಿದೆ. ಅನಂತರದಲ್ಲಿ ಹೀಗೆನ್ನುತ್ತ ನಮ್ಮ ಯುವ ಸಮುದಾಯವನ್ನು ನಪುಂಸಕರನ್ನಾಗಿಸುವ ಪ್ರಯತ್ನ ನಡೆದಿದೆ. ಧರ್ಮಾಚರಣೆ ಬಿಟ್ಟರೆ ಹೇಗೆಲ್ಲ ದಬ್ಟಾಳಿಕೆ, ದೌರ್ಜನ್ಯ ನಡೆಯಲಿದೆ ಎನ್ನುವುದಕ್ಕೆ ಬಾಂಗ್ಲಾದೇಶ ಜೀವಂತ ನಿದರ್ಶನ. ನಮ್ಮಲ್ಲಿ ಎಷ್ಟೇ ಹಣ, ಐಶ್ವರ್ಯ ಇದ್ದರೂ ಇಂತಹ ದಬ್ಟಾಳಿಕೆಯಿಂದ ಪಾರಾಗಲು ಸಾಧ್ಯವೇ ಇಲ್ಲ. ಹೀಗಾಗಿ ಧರ್ಮಾಚರಣೆ ಮುಖ್ಯ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜೀವನದಲ್ಲಿ ಪಾಲಿಸಬೇಕು. ಮನೆಗಳಲ್ಲಿ ನೋ ಚಿಲ್ಡ್ರನ್(ಮಕ್ಕಳು ಬೇಡ) ಎನ್ನುವ ಪರಿಕಲ್ಪನೆ ಬೆಳೆಯಲೇ ಬಾರದು. ಹಾಗೆಯೇ ನೋ ಮ್ಯಾರೇಜ್ (ಮದುವೆ ಬೇಡ) ಎನ್ನುವ ವಾದವೂ ಇರಬಾರದು. ಸನಾತನ ಸಂಸ್ಕೃತಿ ಉಳಿಸಿ ಬೆಳೆಸಲು ಇದೂ ಒಂದು ಭಾಗ. ಮನೆಯಲ್ಲಿ ತಾಯಿ ಮಗುವಿಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.