ಇನ್ನೂ ಒಂದು ವರ್ಷ ಜಿಲ್ಲೆಗೆ ಜಿಟಿಟಿಸಿ ಕೋರ್ಸ್‌ ಭಾಗ್ಯವಿಲ್ಲ

ಅಲ್ಪಾವಧಿ ಕೋರ್ಸ್‌ ಶೀಘ್ರ ಆರಂಭ ಸಾಧ್ಯತೆ

Team Udayavani, May 11, 2019, 6:00 AM IST

UPPOOR-GTDC-PIC

ಉಪ್ಪೂರಿನಲ್ಲಿ ನಿರ್ಮಾಣಗೊಂಡ ಜಿಟಿಟಿಸಿ ಕಟ್ಟಡ.

ಉಡುಪಿ: ಎರಡು ವರ್ಷದ ಹಿಂದೆ ಉಪ್ಪೂರು ಸರಕಾರಿ ಪ್ರೌಢ ಶಾಲಾ ಪಕ್ಕದಲ್ಲಿ ಆರಂಭಗೊಂಡ ಜಿಟಿಟಿಸಿ (ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ಕಟ್ಟಡ ಈಗ ಪೂರ್ಣಗೊಂಡಿದ್ದರೂ ಈ ಶೈಕ್ಷಣಿಕ ವರ್ಷದಲ್ಲಿ ಪೂರ್ಣಪ್ರಮಾಣದ ಕೋರ್ಸ್‌ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಆದರೆ ಕಿರು ಅವಧಿಯ ಕೋರ್ಸ್‌ಗಳು ಆರಂಭಗೊಳ್ಳುವ ಸಾಧ್ಯತೆಗಳಿವೆ. ದೀರ್ಘ‌ ಅವಧಿಯ ಕೋರ್ಸ್‌ಗಳು 2020ರ ಜೂನ್‌ನಲ್ಲಿ ಆರಂಭಗೊಳ್ಳಲಿದೆ.

ಸುಮಾರು 10 ಕೋ.ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನಾಲ್ಕು ಎಕ್ರೆ ಸ್ಥಳದಲ್ಲಿ ನಿರ್ಮಿಸಲಾಗಿದ್ದು ಸಿವಿಲ್‌ ಕಾಮಗಾರಿಗಳು ನಡೆದಿವೆ. 65,000 ಚದರಡಿಯ ಆಡಳಿತ ವಿಭಾಗ ಮತ್ತು 25,000 ಚದರಡಿಯ ಕಾರ್ಯಾಗಾರ ವಿಭಾಗದ ಕಟ್ಟಡ ನಿರ್ಮಾಣಗೊಂಡಿದೆ. ಕೇಂದ್ರದ ಒಟ್ಟು ಯೋಜನೆ 43 ಕೋ.ರೂ. ಮೊತ್ತದ್ದು. ಇದರಲ್ಲಿ ತರಗತಿ ಕೋಣೆ, ಕಂಪ್ಯೂಟರ್‌, ಗ್ರಂಥಾಲಯ, ಯಂತ್ರೋಪಕರಣಗಳು ಸೇರಿವೆ.

ಎಐಟಿಸಿಇ ಅನುಮೋದನೆ ಅಗತ್ಯ
ಜಿಟಿಟಿಸಿ ಪೂರ್ಣಪ್ರಮಾಣದ ಕೋರ್ಸ್‌ ಆರಂಭಿಸಲು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅನುಮೋದನೆ ಬೇಕಾಗಿದೆ. ಇದಕ್ಕೆ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಈ ವರ್ಷ ಕೋರ್ಸ್‌ ಆರಂಭಿಸಬಹುದಾಗಿತ್ತು. ಕಟ್ಟಡದ ಪೂರ್ಣ ಕೆಲಸ ಆಗಬೇಕಾಗಿರುವುದು, ಜತೆಗೆ ಚುನಾವಣ ನೀತಿ ಸಂಹಿತೆ ಬಂದ ಕಾರಣ ಜನವರಿಯಲ್ಲಿ ಅರ್ಜಿ ಸಲ್ಲಿಸಲಾಗಲಿಲ್ಲ.

ಈಗ ಕಟ್ಟಡ ಮುಗಿದಿದೆಯಾದರೂ ಯಂತ್ರೋಪಕರಣಗಳ ಅಳವಡಿಕೆ ಆಗಬೇಕಾಗಿದೆ. ಒಂದೆರಡು ತಿಂಗಳಲ್ಲಿ ಅಳವಡಿಸುವ ಸಾಧ್ಯತೆ ಇದೆ. ಅನಂತರ ಕೌಶಲ ಕರ್ನಾಟಕ, ದೀನದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಂತಹ ಅಲ್ಪಕಾಲೀನ ಕೋರ್ಸ್‌ಗಳನ್ನು ಆರಂಭಿಸಲು ಅವಕಾಶಗಳಿವೆ. ಇದರಲ್ಲಿ ಟೂಲ್‌ ರೂಮ್‌ ಮೆಶಿನಿಸ್ಟ್‌, ಪೋಸ್ಟ್‌ ಡಿಪ್ಲೊಮಾ ಇನ್‌ ಟೂಲ್‌ ಡಿಸೈನ್‌, ಸಿಎನ್‌ಸಿ ಟೆಕ್ನಾಲಜಿಸ್ಟ್‌, ಕ್ಯಾಡ್‌ ಕ್ಯಾಮ್‌ ಸ್ಪೆಶಲಿಸ್ಟ್‌, ಟರ್ನರ್‌, ಮಿಲ್ಲರ್‌, ಸಿಎನ್‌ಸಿ ಟರ್ನಿಂಗ್‌ ಮೆಶಿನ್‌ ಆಪರೇಟರ್‌, ಸಿಎನ್‌ಸಿ ಮಿಲ್ಲಿಂಗ್‌ ಮೆಶಿನ್‌ ಆಪರೇಟರ್‌, ಡೊಮೆಸ್ಟಿಕ್‌ ಡಾಟಾ ಎಂಟ್ರಿ ಆಪರೇಟರ್‌ನಂತಹ ಅಲ್ಪಕಾಲದ ಕೋರ್ಸ್‌ಗಳನ್ನು ಆರಂಭಿಸಬಹುದಾಗಿದೆ. ಇವೆಲ್ಲ ಐಟಿಐ, ಡಿಪ್ಲೊಮಾ ಪದವೀಧರರಿಗೆ ಹೆಚ್ಚುವರಿಯಾದ ವೃತ್ತಿಪರತೆ ಕೊಡುವ ಸರ್ಟಿಫಿಕೇಟ್‌ ಕೋರ್ಸ್‌ಗಳಾಗಿವೆ.

ಪ್ರಾಯೋಗಿಕ ತರಬೇತಿ
ಜಿಟಿಟಿಸಿ ವಿಶೇಷವೆಂದರೆ ಇದರಲ್ಲಿ ಥಿಯರಿ ತರಗತಿಗಿಂತ ಪ್ರಾಯೋಗಿಕ ತರಗತಿಗಳೇ ಜಾಸ್ತಿ. ಕೈಗಾರಿಕೆಗಳಿಗೆ ಬೇಕಾದ ಕೌಶಲಗಳನ್ನು ಕಲಿಸಿಕೊಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವುದು ಖಾತ್ರಿ. ಉಪ್ಪೂರಿನಲ್ಲಿ ಈ ವರ್ಷ ದೀರ್ಘ‌ ಕಾಲದ ಕೋರ್ಸ್‌ ಗಳು ಆರಂಭಗೊಳ್ಳದಿದ್ದರೂ ಎಸೆಸೆಲ್ಸಿ ಮುಗಿಸಿದವರು ಮಂಗಳೂರು, ಶಿವಮೊಗ್ಗ, ದಾಂಡೇಲಿ ಮೊದಲಾದ 23 ಕೇಂದ್ರಗಳಿಗೆ ಅರ್ಜಿ ಸಲ್ಲಿಸಬಹುದು. ಜನರಲ್‌ ಮೆರಿಟ್‌ ಶೇ.50, ಗ್ರಾಮೀಣ ಪ್ರದೇಶದವರು, ಮಹಿಳೆಯರು, ಪರಿಶಿಷ್ಟರು, ಅಲ್ಪಸಂಖ್ಯಾಕರಿಗೆ ಶೇ.50 ಮೀಸಲಾತಿ ಇದೆ. ಹೆಚ್ಚಿನ ಮಾಹಿತಿಗಾಗಿ www.karnataka.gov.in/gttc ವೆಬ್‌ಸೈಟ್‌ ಸಂಪರ್ಕಿಸಬಹುದು.

ಉಪ್ಪೂರಿನಲ್ಲಿ ಮುಂದಿನ ವರ್ಷ ಡಿಪ್ಲೊಮಾ ಇನ್‌ ಮೆಕೆಟ್ರಾನಿಕ್ಸ್‌, ಡಿಪ್ಲೊಮಾ ಇನ್‌ ಟೂಲ್‌ ಆ್ಯಂಡ್‌ ಡೈ ಮೇಕಿಂಗ್‌, ಡಿಪ್ಲೊಮಾ ಇನ್‌ ಪ್ರಿಶಿಶನ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಈ ಮೂರು ಕೋರ್ಸುಗಳು ಆರಂಭಗೊಳ್ಳಲಿದೆ. ಉಡುಪಿ (ಉಪ್ಪೂರು), ಗೋಕಾಕ್‌, ಕೊಪ್ಪಳ, ಯಾದಗಿರಿ, ಚಿತ್ರದುರ್ಗದಲ್ಲಿ ಕಟ್ಟಡಗಳು ನಿರ್ಮಾಣದ ಹಂತಗಳಲ್ಲಿದ್ದು ಮುಂದಿನ ವರ್ಷಕ್ಕೆ ಜಿಟಿಟಿಸಿ ಸಂಖ್ಯೆ 28ಕ್ಕೆ ಏರಲಿದೆ.

2020ರಲ್ಲಿ ದೀರ್ಘ‌ಕಾಲಿಕ ಕೋರ್ಸ್‌ ಯಂತ್ರೋಪಕರಣಗಳ ಸ್ಥಾಪನೆ ಅನಂತರ ಅಲ್ಪಕಾಲದ ಕೋರ್ಸ್‌ ಗಳನ್ನು ಆರಂಭಿಸಬಹುದು. 2020ರಲ್ಲಿ ದೀರ್ಘ‌ಕಾಲೀನ ಕೋರ್ಸ್‌ ಗಳು ಆರಂಭವಾಗಲಿದೆ.
-ಮಂಜುನಾಥ ನಾಯಕ್‌,
ಉಪ್ಪೂರು ಜಿಟಿಟಿಸಿ ಕೇಂದ್ರದ ಸಮನ್ವಯಕಾರರು.

ಒಂದೆರಡು ದಿನಗಳಲ್ಲಿ ಹಸ್ತಾಂತರ
ಜಿಟಿಟಿಸಿ ಕಟ್ಟಡವನ್ನು ಪೂರ್ಣಗೊಳಿಸಲಾಗಿದ್ದು ಒಂದೆರಡು ದಿನಗಳಲ್ಲಿ ಹಸ್ತಾಂತರಿಸಲಿದ್ದೇವೆ.
ಕೃಷ್ಣರಾಜ್‌, ಗುತ್ತಿಗೆದಾರರು.

ಟಾಪ್ ನ್ಯೂಸ್

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

5(1

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.