ಒಂದೇ ಮಳೆಗಾಲದಲ್ಲಿ ಎರಡನೇ ಬಾರಿಗೆ ಕುಸಿದ ಮನೆ
Team Udayavani, Aug 11, 2019, 6:56 AM IST
ಕಾಪು : ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ -ಭಾರತ್‌ನಗರದ ಪಾಪಮ್ಮ ಎಂಬವರ ಮನೆ ಈ ಬಾರಿಯ ಮಳೆಗೆ ಎರಡನೇ ಬಾರಿ ಕುಸಿತಕ್ಕೊಳಗಾಗಿದ್ದು, ಸಂಪೂರ್ಣ ಹಾನಿಯುಂಟಾಗಿದೆ.
ಹಳೇ ಕಾಲದ ಮನೆಯ ಮಣ್ಣಿನ ಗೋಡೆ ಪ್ರಥಮ ಮಳೆಗೆ ಕುಸಿದಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಶುಕ್ರವಾರ ರಾತ್ರಿ ಮನೆ ಸಂಪೂರ್ಣ ಕುಸಿತಕ್ಕೊಳಗಾಗಿದ್ದು ಸುಮಾರು ಮೂರು ಲಕ್ಷ ರೂ. ಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ.
ಸಂಪೂರ್ಣ ಹಾನಿಗೀಡಾದ ಮನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ವಾಸವಿದ್ದಾರೆ. ತಾಯಿ ದೃಷ್ಟಿ ವೈಕಲ್ಯತೆ ಹೊಂದಿದ್ದು, ಒಬ್ಬ ಮಗ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ, ಪುರಸಭೆ ಸದಸ್ಯೆ ಗುಲಾಬಿ ಪಾಲನ್, ಗ್ರಾಮ ಕರಣಿಕ ಅರುಣ್ ಕುಮಾರ್ ಮೊದಲಾದವರು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.