ಆದರ್ಶ ಆಸ್ಪತ್ರೆ: ಮೊದಲ ಬಾರಿ ಮಿದುಳಿನ ಬೈಪಾಸ್ ಶಸ್ತ್ರಚಿಕಿತ್ಸೆ
Team Udayavani, May 10, 2017, 11:18 AM IST
ಉಡುಪಿ: ಮಿದುಳಿನ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೊತ್ತಮೊದಲ ಬಾರಿಗೆ ಮಾಡಲಾಯಿತು. ಹಿರಿಯ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಪ್ರೊ| ಎ. ರಾಜಾ, ಡಾ| ಜಸ್‌ಪ್ರೀತ್ ಸಿಂಗ್ ಹಾಗೂ ನ್ಯೂರೋ ಅನಸ್ತೇಶಿಯ ತಜ್ಞ ಡಾ| ಸಂಜಯ್ ಉಡುಪ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು.
ಕುಂದಾಪುರದ ಗಿರಿಜಾ ಗಾಣಿಗ ಅವರು ದೇಹದ ಬಲಭಾಗದ ಬಲಹೀನತೆ ಹಾಗೂ ಮಾತನಾಡಲು ಕಷ್ಟಪಡುತ್ತಿದ್ದರು. ಅವರನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕುತ್ತಿಗೆಯ ಎಡಭಾಗದ ರಕ್ತನಾಳದಲ್ಲಿ ಅಡೆತಡೆ ಇರುವುದು ಕಂಡು ಬಂತು. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲು ನಿರ್ಧರಿಸಿ ಸುದೀರ್ಘ 6 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕುತ್ತಿಗೆ ಮತ್ತು ತಲೆಯಿಂದ ಬರುವ ರಕ್ತನಾಳಗಳನ್ನು ಮಿದುಳಿನ ಒಂದು ಭಾಗಕ್ಕೆ ಜೋಡಿಸಿ ಅಡೆತಡೆ ಇರುವ ರಕ್ತನಾಳವನ್ನು ಬೈಪಾಸ್ ಮಾಡಲಾಯಿತು.
ಒಂದು ವಾರದಲ್ಲಿ ರೋಗಿ ಚೇತರಿಸಿಕೊಂಡಿದ್ದು, ಮಾತನಾಡಲು ಮತ್ತು ನಡೆದಾಡಲು ಶಕ್ತರಾಗಿದ್ದಾರೆ. ಈ ಶಸ್ತ್ರಚಿಕಿತ್ಸೆ ಬಗ್ಗೆ ಆಸ್ಪತ್ರೆ ನರರೋಗ ಶಸ್ತ್ರಚಿಕಿತ್ಸಾ ತಜ್ಞರು ಫಿನ್‌ಲಾಡ್ ಮತ್ತು ಯುರೋಪ್‌ನಲ್ಲಿ ತರಬೇತಿ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.