ಅರೆವೈದ್ಯಕೀಯ ಕ್ಷೇತ್ರದ ಪ್ರಾಮುಖ್ಯ: ಕಾರ್ಯಾಗಾರ

Team Udayavani, Feb 4, 2020, 5:35 AM IST

03022020ASTRO01

ಉಡುಪಿ: ಆರೋಗ್ಯ ಸೇವಾ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದು ಮತ್ತಷ್ಟು ವೇಗವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ವೈದ್ಯಕೀಯ ಕ್ಷೇತ್ರಕ್ಕೆ ತಂತ್ರಜ್ಞರು ಹಾಗೂ ರೋಗಪತ್ತೆ ತಜ್ಞರ ಬೇಡಿಕೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಸಹಾಯಕರು, ಶುಶ್ರೂಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸಿಎಸ್‌ಐ ಲೊಂಬಾರ್ಡ್‌ ನರ್ಸಿಂಗ್‌ ಆಸ್ಪತ್ರೆಯ ಔಷಧ ವಿಭಾಗದ ಮುಖ್ಯಸ್ಥ ಡಾ| ಆರ್‌.ಶ್ರೀಪತಿ ಹೇಳಿದರು.

ಲೊಂಬಾರ್ಡ್‌ ನರ್ಸಿಂಗ್‌ ಕಾಲೇ ಜಿನಲ್ಲಿ ಸೋಮವಾರ ನಡೆದ ಆರೋಗ್ಯ ಕಾಳಜಿಯಲ್ಲಿ ಅರೆವೈದ್ಯಕೀಯ ಕ್ಷೇತ್ರದ ಪ್ರಾಮುಖ್ಯ ಕಾರ್ಯಾಗಾರದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಆಸ್ಪತ್ರೆಗಳಲ್ಲಿ ರೋಗಿಗೆ ಚಿಕಿತ್ಸೆ ಆರಂಭಿಸುವ ಮೊದಲು ಆತನಿಗೆ ಬಾಧಿಸುವ ಕಾಯಿಲೆಯನ್ನು ಪತ್ತೆ ಹಚ್ಚಬೇಕು. ಎಲ್ಲ ತಪಾಸಣೆಗಳ ವರದಿ ಯನ್ನು ಪರಿಶೀಲಿಸಿದ ಅನಂತರವೇ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಈ ಎಲ್ಲ ಪರೀಕ್ಷೆಗಳನ್ನು ಮಾಡಲು ಅರೆವೈದ್ಯಕೀಯ ವಿದ್ಯಾರ್ಥಿಗಳೂ ಅಪಾರ ಶ್ರಮ ವಹಿಸುತ್ತಾರೆ. ಪರೀಕ್ಷೆಯಲ್ಲಿ ಸ್ವಲ್ಪ ಏರುಪೇರಾದರೂ ಅದು ರೋಗಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರ ಮೇಲೂ ಅತೀ ಹೆಚ್ಚಿನ ಜವಾಬ್ದಾರಿಯಿದೆ ಎಂದು ಅವರು ಹೇಳಿದರು.

ಲೊಂಬಾರ್ಡ್‌ ನರ್ಸಿಂಗ್‌ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಸುಶೀಲ್‌ ಜತ್ತನ್ನ ಅಧ್ಯಕ್ಷತೆ ವಹಿಸಿದ್ದರು. ಅಮೃತ್‌ ಲ್ಯಾಬೊ ರೇಟರಿಯ ನಿರ್ದೇಶಕ ಎ.ಆರ್‌.ಕಿಣಿ ಹಾಗೂ ಲೊಂಬಾರ್ಡ್‌ ನರ್ಸಿಂಗ್‌ ಆಸ್ಪತ್ರೆಯ ಲ್ಯಾಬೊರೇಟರಿ ಮುಖ್ಯಸ್ಥೆ ಮಾರ್ಥ ಸುಮಂಗಲಾ ಅವರನ್ನು ಸಮ್ಮಾನಿಸ ಲಾಯಿತು. ಪ್ರಾಂಶುಪಾಲೆ ಡಾ| ಲೀಲಾ ಮಣಿಕೋತ್‌, ಡಾ| ಗಣೇಶ್‌ ಕಾಮತ್‌ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ| ಬಿ.ಎನ್‌.ಪೆರಲಾಯ ಸ್ವಾಗತಿಸಿದರು. ಝುಲ್ಫಾ ವಂದಿಸಿ, ಮನೀಷಾ ಜೆ.ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

B Nagendra reacts to Janardhana Reddy’s statement

Bellary: ರೆಡ್ಡಿ ಸಂಡೂರಲ್ಲಿ ಅರಮನೆ ಕಟ್ಟಿದರೂ ಗೆಲುವು ಕಾಂಗ್ರೆಸ್ ಪಕ್ಷದ್ದೇ: ನಾಗೇಂದ್ರ

6-katapady

Katapady: ಟ್ಯಾಂಕರ್‌, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Haryana: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ… ಪ್ರಧಾನಿ ಭಾಗಿ

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-katapady

Katapady: ಟ್ಯಾಂಕರ್‌, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ

courts

Udupi: ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಖುಲಾಸೆ

Udupi: ಗೀತಾರ್ಥ ಚಿಂತನೆ-66: ಮಕ್ಕಳ ಮೇಲೆ ತಂದೆತಾಯಿಯ ಮನೋಧರ್ಮ

Udupi: ಗೀತಾರ್ಥ ಚಿಂತನೆ-66: ಮಕ್ಕಳ ಮೇಲೆ ತಂದೆತಾಯಿಯ ಮನೋಧರ್ಮ

sand 1

Padubidri: ಟಿಪ್ಪರ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶ

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

7

Mangaluru: ನಿತ್ಯ ಟ್ರಾಫಿಕ್‌ ಜಾಮ್‌ ಗೋಳು; ವಾಹನ ಸವಾರರ ಪರದಾಟ

Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ

Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ

6(1)

Kinnigoli: ಮೂರು ಕಾವೇರಿ ಜಂಕ್ಷನ್‌ನಲ್ಲೇ ಬೃಹತ್‌ ಟ್ಯಾಂಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.