ಇನ್ನೂ ಉದ್ಘಾಟನೆ‌ ಭಾಗ್ಯ ಲಭಿಸದ ಆರೋಗ್ಯ ಕೇಂದ್ರದ ಉಪಕೇಂದ್ರ


Team Udayavani, Jul 19, 2019, 5:00 AM IST

18VNR-PIC-01A

ವಿದ್ಯಾನಗರ:ಕೋಟ್ಯಂತರ ಮೊತ್ತ ವ್ಯಯಿಸಿ ನಿರ್ಮಿಸಿದ ಕಾಮಗಾರಿಗಳ ಪ್ರಯೋಜನವು ಅಧಿಕೃತರ ಹಾಗೂ ಜನಪ್ರತಿನಿಧಿಗಳ ಅನಾಸ್ಥೆಯಿಂದ ಸಾಮಾನ್ಯ ಜನರ ಪಾಲಿಗೆ ಇಲ್ಲದಂತಾಗಿದೆ. ಆರೋಗ್ಯವಂತ, ವಿದ್ಯಾವಂತ ಸಮಾಜಕ್ಕಾಗಿ ಮಾಡಬೇಕಾದ ಕೆಲಸಗಳಲ್ಲೇ ತೋರುವ ಬೇಜವಾಬ್ದಾರಿತನದ ಮೂಲಕ ಜನರ ಹಕ್ಕನ್ನು ಕಿತ್ತುಕೊಳ್ಳುವವರಿಗೆ ಜನರೇ ಉತ್ತರಿಸಲಾರಂಭಿಸಿದ್ದಾರೆ ಎಂಬುವುದಕ್ಕೆ ಕುಂಬ್ಡಾಜೆ ಪಂಚಾಯತ್‌ನಲ್ಲಾದ ಬೆಳವಣಿಗೆಯೇ ಸಾಕ್ಷಿ.

ಕುಂಬ್ಡಾಜೆಯಲ್ಲಿ ಆರೋಗ್ಯ ಸಂರಕ್ಷಣೆಗಾಗಿ ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡಗಳ ಉದ್ಘಾಟನೆ ವಿಳಂಬಗೊಂಡ ಬಗ್ಗೆ ವಿಜಿಲೆನ್ಸ್‌ ತನಿಖೆ ಆರಂಭಗೊಂಡಿದ್ದು ಪಂಚಾಯತ್‌ನ ನಾನಾ ಕಡೆ ಸರಕಾರದ ನಿಧಿ ಬಳಸಿ ನಿರ್ಮಿಸಿದ ಕಟ್ಟಡ ಉದ್ಘಾಟನೆಗೊಳ್ಳದ ಬಗ್ಗೆ ವಿಜಿಲೆನ್ಸ್‌ ತನಿಖೆ ಆರಂಭಿಸಿದೆ. ವಿಜಿಲೆನ್ಸ್‌ ಡಿವೈಎಸ್‌ಪಿ ಕೆ. ದಾಮೋದರನ್‌, ಸಿ.ಐ. ಮಧುಸೂದನನ್‌ ನೇತೃತ್ವದ ತಂಡ ಕುಂಬ್ಡಾಜೆ ಗ್ರಾ.ಪಂ.ಗೆ ಆಗಮಿಸಿ ಕಡತಗಳನ್ನು ಹಾಗೂ ಉದ್ಘಾಟನೆಗೊಳ್ಳದ ಕಟ್ಟಡಗಳನ್ನು ಪರಿಶೀಲಿಸಿದ್ದಾರೆ.

ಕಾಮಗಾರಿ ಪೂರ್ಣಗೊಂಡಿದೆ
ಕುಂಬ್ಡಾಜೆ ಪಂ. ವ್ಯಾಪ್ತಿಯ ಗಾಡಿಗುಡ್ಡೆ, ಬೆಳಿಂಜ, ಅಗಲ್ಪಾಡಿಗಳಲ್ಲಿ ತಲಾ 16 ಲಕ್ಷ ರೂ. ಎಂಡೋಸಲ್ಫಾನ್‌ ನಿಧಿ ಬಳಸಿ ಆರೋಗ್ಯ ಉಪಕೇಂದ್ರ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಕಾಮಗಾರಿ ಪೂರ್ತಿಗೊಂಡು ಮೂರು ವರ್ಷಗಳಾಗಿವೆ. ಮಾರ್ಪನಡ್ಕದಲ್ಲಿ ಒಂದು ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಆರೋಗ್ಯ ಕೇಂದ್ರ ಕಟ್ಟಡ, ಕರುವಲ್ತಡ್ಕದಲ್ಲಿ 2.50 ಕೋಟಿ ವೆಚ್ಚದಲ್ಲಿ ಬಡ್ಸ್‌ ಸ್ಕೂಲ್‌ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ.

ಆನ್‌ಲೆ„ನ್‌ ಉದ್ಘಾಟನೆ
ಕೇರಳ ಸರಕಾರ ಸಾವಿರ ದಿನಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಸಾವಿರ ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಆನ್‌ಲೆ„ನ್‌ ಮೂಲಕ ಪ್ರಾಥಮಿಕ ಕೇಂದ್ರವನ್ನು ಮಾತ್ರ ಉದ್ಘಾಟನೆಮಾಡಲಾಗಿದೆ.ವಿಜಿಲೆನ್ಸ್‌ಗೆ ದೂರು
ಕಟ್ಟಡಗಳನ್ನು ಕಾರ್ಯಾಚರಿಸುವಂತೆ ಮಾಡಿ ಜನರ ಸಮಸ್ಯೆಗೆ ಸ್ಪಂ ದಿಸುವಂತೆ ಕೋರಿ ಬಿಜೆಪಿ ನೇತೃತ್ವದಲ್ಲಿ ಇತ್ತೀಚೆಗೆ ಕುಂಬ್ಡಾಜೆ ಪಂ. ಕಚೇರಿಗೆ ಮಾರ್ಚ್‌ ನಡೆದಿತ್ತು. ಈ ಹಿಂದೆ ಆಂದೋಲನ ಯಾತ್ರೆಯನ್ನೂ ನಡೆಸಲಾಗಿತ್ತು. ಅಲ್ಲದೆ ಪಕ್ಷವು ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಸಚಿವ, ವಿಜಿಲೆನ್ಸ್‌ಗೆ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸಿದ ವಿಜಿಲೆನ್ಸ್‌ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದೀಗ ಆರೋಗ್ಯ ಉಪಕೇಂದ್ರಗಳ ಬಗ್ಗೆ ತನಿಖೆ ಆರಂಭವಾಗಿದೆ. ಮಾರ್ಪನಡ್ಕದಲ್ಲಿರುವ ಆರೋಗ್ಯ ಕೇಂದ್ರ ಕರುವಲ್ತಡ್ಕದಲ್ಲಿರುವ ಬಡ್ಸ್‌ ಸ್ಕೂಲ್‌ ಕಟ್ಟಡಗಳ ಬಗ್ಗೆಯೂ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಮುಂದಿನ ದಿನಗಳಲ್ಲಿ ಮತ್ತೆ ಆಗಮಿಸುವುದಾಗಿ ವಿಜಿಲೆನ್ಸ್‌ ಡಿವೈಎಸ್‌ಪಿ ಹೇಳಿದ್ದಾರೆ.
ನಿರ್ಮಾಣಗೊಂಡ ಕಟ್ಟಡ ಪಂ.ಗೆ ಹಸ್ತಾಂತರಿಸದಿರುವುದೇ ಉದ್ಘಾಟನೆ ವಿಳಂಬಕ್ಕೆ ಕಾರಣವೆಂದು ಪಂಚಾಯತ್‌ ಕಾರ್ಯದರ್ಶಿ ಹೇಳುತ್ತಾರೆ. ಆದರೆ ಈ ಕಟ್ಟಡಗಳ ಹಸ್ತಾಂತರ ತಿಂಗಳುಗಳ ಮೊದಲೇ ನಡೆದಿದೆ ಎಂದು ವಿಜಿಲೆನ್ಸ್‌ ಅಧಿಕಾರಿಗಳು ಹೇಳಿದ್ದಾರೆ.

ಅನಾಥವಾದ ಬಡ್ಸ್‌ ಶಾಲೆ
ಎಂಡೋ ಬಾಧಿತ ರೋಗಿಗಳಿರುವ ಪ್ರದೇಶಗಳಲ್ಲಿ ಒಂದಾದ ಕುಂಬ್ಡಾಜೆ ಪಂಚಾಯತ್‌ನ ಕುರುವಲ್ತಡ್ಕದಲ್ಲಿ 2.5ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾದ ಬಡ್ಸ್‌ ಶಾಲೆಯ ಕೆಲಸ ಪೂರ್ತಿಯಾಗಿ ವರುಷ ಮೂರು ಕಳೆದರೂ ಯಾವುದೇ ರೀತಿಯ ಪ್ರಯೋಜನ ಫಲಾನುಭವಿಗಳಿಗೆ ಲಭಿಸಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ಆರಂಭದಲ್ಲಿ ಮೂರು ಮಂದಿ ಶಿಕ್ಷಕಿ ಯರನ್ನು ನೇಮಿಸಲಾಗಿದೆ. ಆದರೆ ಪಂಚಾಯತ್‌ ಸರಿಯಾದ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಈ ಕಟ್ಟಡವೂ ಉಪಯೋಗ ಶೂನ್ಯವಾಗಿದ್ದು ಪೊದೆಗಳಿಂದಾವೃತವಾಗಿ ನಾಶದಂಚಿನಲ್ಲಿದೆ.

ಆಗಸ್ಟ್‌ ಕೊನೆಯಲ್ಲಿ ಸಿದ್ಧ
ಎಂಡೋ ಸಂತ್ರಸ್ತ ಮಕ್ಕಳ ಸರ್ವೆ ಆರಂಭಿಸಿದ್ದು ಈಗಾಗಲೇ 30 ಮಕ್ಕಳ ಪಟ್ಟಿ ತಯಾರಿಸಲಾಗಿದೆ. ಆಸನದ ವ್ಯವಸ್ಥೆಯನ್ನು ಸೋಶ್ಯಲ್‌ ಸೆಕ್ಯೂರಿಟಿ ಮಿಶನ್‌ ವಹಿಸಿದ್ದು ಕೆಲವು ಪೀಠೊಪಕರಣಗಳು ತಲುಪಲು ಬಾಕಿ ಇದೆ. ಆದಷ್ಟು ಬೇಗ ಬಡ್ಸ್‌ ಶಾಲೆ ತೆರೆದು ಕಾರ್ಯಾಚರಿಸಲಿದೆ. ಕುಟುಂಬ ಆರೋಗ್ಯ ಕೇಂದ್ರದಲ್ಲಿ ವಯರಿಂಗ್‌ ಕೆಲಸ ನಡೆಯುತ್ತಿದ್ದು ಆಗಸ್ಟ್‌ ಕೊನೆಯಲ್ಲಿ ಜನಸೇವೆಗೆ ಸಿದ್ಧವಾಗಲಿದೆ.
-ಫಾತಿಮತ್‌ಝುಹರಾ, ಅಧ್ಯಕ್ಷೆ, ಕುಂಬ್ಡಾಜೆ ಗ್ರಾಮ ಪಂಚಾಯತ್‌

 ಧರಣಿ ಸತ್ಯಾಗ್ರಹ
ಕೋಟಿಗಳನ್ನು ಖರ್ಚು ಮಾಡಿ ಕಟ್ಟಡಗಳನ್ನು ನಿರ್ಮಿಸಿ ಅವುಗಳ ಪ್ರಯೋಜನವನ್ನು ಜನರಿಗೆ ತಲುಪಿಸುವಲ್ಲಿ ಪಂಚಾಯತು ಹಿಂದೇಟು ಹಾಕುತ್ತಿರುವುದು ವಿಷಾದನೀಯ. ನಬಾರ್ಡ್‌ ಎಂಡೋಸಲ್ಫಾನ್‌ ಬಾಧಿತರಿಗಾಗಿ ನೀಡುವ ಮೊತ್ತವನ್ನುಪಯೋಗಿಸಿ ಕಟ್ಟಡ ನಿರ್ಮಿಸಲು ಪಂಚಾಯತು ತೋರುವ ಆಸಕ್ತಿ ಅದನ್ನು ಸೂಕ್ತ ರೀತಿಯಲ್ಲಿ ಅರ್ಹರಿಗೆ ಒದಗಿಸುವಲ್ಲಿ ತೋರುವುದಿಲ್ಲ. 10ಕೋಟಿ 40ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ಕುಟುಂಬ ಆರೋಗ್ಯ ಕೇಂದ್ರದ ಕೆಲಸ ಪೂರ್ತಿಯಾಗಿದೆ. ಮಾತ್ರವಲ್ಲದೆ ಮಳೆಗಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ಸೌಲಭ್ಯಗಳಿರುವ ಆಸ್ಪತ್ರೆಯ ಅಗತ್ಯವಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಯುವಮೋರ್ಚಾ ನೇತೃತ್ವದಲ್ಲಿ ಅನಿಶ್ಚಿತ ಕಾಲ ಧರಣಿ ಸತ್ಯಾಗ್ರಹ ಕೈಗೊಳ್ಳಲು ತಿರ್ಮಾನಿಸಲಾಗಿದೆ.
– ರಾಜೇಶ್‌ ಶೆಟ್ಟಿ ಕುಂಬಾxಜೆ
ಅಧ್ಯಕ್ಷರು, ಬಿಜೆಪಿ ಸಮಿತಿ ಕುಂಬ್ಡಾಜೆ ಪಂಚಾಯತ್

ಟಾಪ್ ನ್ಯೂಸ್

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-padubidri

Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ

8

Udupi: ಕಲ್ಸಂಕ ಜಂಕ್ಷನ್‌; ಹಗಲು-ರಾತ್ರಿ ಟ್ರಾಫಿಕ್‌ ಕಿರಿಕಿರಿ

7(2

Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!

3

Karkala: ಬೀದಿ ವ್ಯಾಪಾರಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿ

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.