ಸೇತುವೆ ಕಾಮಗಾರಿ ವೇಳೆ ಸೂಚನಾ ಫಲಕ ಅಳವಡಿಕೆ ಬಗ್ಗೆ ನಿರ್ಲಕ್ಷ
Team Udayavani, Mar 15, 2019, 1:00 AM IST
ಕಟಪಾಡಿ: ಅಭಿವೃದ್ಧಿ ಕಾಮಗಾರಿಗಾಗಿ ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿನ ನಿತ್ಯಾನಂದ ಸಭಾಭವನದ ಬಳಿಯಲ್ಲಿನ ಹಳೆ ಸೇತುವೆ ಕೆಡವಿದ್ದು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಸಂಚಾರಿಗಳಿಗೆ ಗೊಂದಲ ಮೂಡಿಸುತ್ತಿದೆ.
ಮಂಗಳೂರು ಭಾಗದಿಂದ ರಾ.ಹೆ.ಯಿಂದ ನೇರವಾಗಿ ಕಲ್ಲಾಪು ಬಳಿ ಒಳ ಪ್ರವೇಶಿಸುವಲ್ಲಿ ಸೂಚನಾ ಫಲಕಗಳನ್ನು ಇರಿಸಿಲ್ಲ. ಕಟಪಾಡಿ ಒಳ ಭಾಗದಿಂದ ಸಂಚರಿಸುವ ವಾಹನಗಳಿಗೂ ಗೊಂದಲಕಾರಿಯಾಗಿದೆ. ಸೇತುವೆಯ ಹೊಂಡ, ಅವಶೇಷಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಬುಧವಾರ ರಾತ್ರಿ ಇಲ್ಲಿ ಸವಾರರೊಬ್ಬರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸೇತುವೆ ಕೆಡವಿದ್ದರೂ, ಬಹುದೂರದಿಂದಲೇ ಇದರ ಬಗ್ಗೆ ಮುನ್ನೆಚ್ಚರಿಕೆ ಹಾಕಿಲ್ಲ. ಸಂಚಾರ ನಿಷಿದ್ಧಗೊಳಿಸಿಲ್ಲ ಇದರಿಂದ ಅಪಾಯಕ್ಕೆರವಾಗುತ್ತಿದೆ ಎಂದು ಜನತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ದೂರಿದ್ದಾರೆ.
ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗುವಲ್ಲಿವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಲು ಆಗ್ರಹಿಸಲಾಗಿದೆ.
ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು
ತೆಂಗಿನ ಮರದ ತುಂಡುಗಳನ್ನು ಇಡಲಾಗಿತ್ತು. ಆದರೆ ಇವುಗಳನ್ನು ದಾರಿಹೋಕರು ತೆರವುಗೊಳಿಸಿದ್ದರು. ಅಪಾಯ ಸಂಭವಿಸಿದ್ದು ಗಮನಕ್ಕೆ ಬಂದಿದೆ. ಹೆಚ್ಚಿನ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗುತ್ತದೆ.
-ಸವಿತಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್ ಅಳವಡಿಕೆ
Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Udupi: ಶ್ರೀ ಪುತ್ತಿಗೆ ಮಠದ ವತಿಯಿಂದ ನಟ ರಜನೀಕಾಂತ್ ಆಮಂತ್ರಣ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.