ಶೀರೂರು ಮಠದ ಆಭರಣ ಸುರಕ್ಷಾ ಕೊಠಡಿಗೆ
Team Udayavani, Aug 2, 2018, 10:41 AM IST
ಉಡುಪಿ: ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿದ್ದ ಚಿನ್ನ, ಬೆಳ್ಳಿ ಸಾಮಗ್ರಿಗಳನ್ನು ಬುಧವಾರ ಉಡುಪಿ ಶೀರೂರು ಮಠಕ್ಕೆ ತಂದು ಇಡಲಾಯಿತು.
ಶೀರೂರು ಮಠದ ದ್ವಂದ್ವ ಮಠವಾದ ಶ್ರೀಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಹಿರಿಯಡಕ ಮತ್ತು ಬ್ರಹ್ಮಾವರದ ಪೊಲೀಸ್ ಅಧಿಕಾರಿಗಳು ಮಹಜರು ನಡೆಸಿ ಶೀರೂರಿನಿಂದ ಉಡುಪಿ ಶೀರೂರು ಮಠಕ್ಕೆ ತಂದು ಸುರಕ್ಷಾ ಕೊಠಡಿಯಲ್ಲಿರಿಸಿದರು. ಸಂಜೆ 4 ಗಂಟೆಗೆ ಮಹಜರು, ಪಟ್ಟಿ ಮಾಡುವ ಕೆಲಸ ಆರಂಭಗೊಂಡಿತು. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಈ ಕೆಲಸಕ್ಕೆ ತಗಲಿತು.
“ದೈನಂದಿನ ಸಾಮಗ್ರಿಗಳನ್ನು ಮಠದವರು ಕೇಳಿದ್ದು, ಕೊಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಜು. 19ರಂದು ಸ್ವಾಮೀಜಿ ನಿಧನ ಹೊಂದಿದ ಬಳಿಕ ಎಲ್ಲ ಸಾಮಗ್ರಿಗಳು ಶೀರೂರಿನಲ್ಲಿತ್ತು. ಮಠವೂ ಪೊಲೀಸರ ಸುಪರ್ದಿಯಲ್ಲಿತ್ತು. ಶೀರೂರು ಮಠ ಗ್ರಾಮಾಂತರದಲ್ಲಿರುವುದರಿಂದ ಅಲ್ಲಿ ಏನೇನು ಇದೆ ಎಂದು ತಿಳಿಯದ ಕಾರಣ ಬುಧವಾರ ಎಲ್ಲವನ್ನು ಪಟ್ಟಿ ಮಾಡಿ ಉಡುಪಿ ಶೀರೂರು ಮಠಕ್ಕೆ ಸುರಕ್ಷೆ ದೃಷ್ಟಿಯಿಂದ ತಂದಿರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ