ಕಾಪು ತಾಲೂಕು ಆಡಳಿತಕ್ಕೆ ಕೃತಕ ನೆರೆಯದ್ದೇ ಚಿಂತೆ
Team Udayavani, Jun 16, 2019, 5:02 AM IST
ಕಾಪು: ಮುಂಗಾರು ಈಗಾಗಲೇ ಕಾಲಿಟ್ಟಿದೆ. ಕಳೆದ ವರ್ಷದ ಕಹಿ ಘಟನೆಗಳಿಂದಾಗಿ ತಾಲೂಕು ಆಡಳಿತ ಮೊದಲೇ ಎಚ್ಚೆತ್ತುಕೊಂಡಿದ್ದರೂ ಈ ಬಾರಿಯೂ ಕೃತಕ ನೆರೆಯ ಚಿಂತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ, ಪುರಸಭೆ, ಸ್ಥಳೀಯ ಪಂಚಾಯತ್‌ಗಳಿಗೆ ಸೂಕ್ತ ಸೂಚನೆ ನೀಡಿದ್ದಾರೆ.
ಪ್ರಕೃತಿ ವಿಕೋಪ ನಿರ್ವಹಣೆ ತಂಡ
ಇಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ತಂಡ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಪಂಚಾಯತ್ ವ್ಯಾಪ್ತಿಯ ಈಜುಗಾರರು, ದೋಣಿ, ಜೆಸಿಬಿ ಮಾಲಕರು, ಟಿಪ್ಪರ್, ಕ್ರೇನ್ಸ್, ಸರಕು ಸಾಗಾಟದ ವಾಹನಗಳ ಮಾಹಿತಿಯನ್ನು ಸಂಗ್ರಹಿಸಿ, ತುರ್ತು ಸಂದರ್ಭ ಅವರ ಸೇವೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಗ್ನಿಶಾಮಕ ಘಟಕ, ಗೃಹರಕ್ಷಕದಳ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಮೆಸ್ಕಾಂ ಸಿಬಂದಿ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಂಡಿದೆ.
ಗಂಜಿ ಕೇಂದ್ರ, ಬೋಟ್ ಸಹಿತ ವಿವಿಧ ಸೌಲಭ್ಯಗಳ ಜೋಡಣೆ
ಕಾಪು ತಾಲೂಕಿನ ಕಳೆದ ವರ್ಷದ ನೆರೆಬಾಧಿತ 7-8 ಕಡೆಗಳಲ್ಲಿ ಗಂಜಿ ಕೇಂದ್ರ ತೆರೆಯಲು ತಾಲೂಕು ಸ್ಥಳ ಗೊತ್ತುಪಡಿಸಿದೆ. ಕಾಪುವಿಗೆ ಪ್ರತ್ಯೇಕವಾಗಿ 2 ಅಗ್ನಿಶಾಮಕ ಬೋಟ್‌ಗಳನ್ನು ಗೊತ್ತುಪಡಿಸಲಾಗಿದ್ದು, 6 ಯಾಂತ್ರಿಕ ಗರಗಸ ಅರಣ್ಯ ಇಲಾಖೆಗೆ ಒದಗಿಸಲಾಗಿದೆ. 8 ಮಂದಿ ಗೃಹರಕ್ಷಕ ದಳ ಸಿಬಂದಿ ಸೇವೆಗೆ ಲಭ್ಯವಿರಲಿ ದ್ದಾರೆ. ಈಜುಗಾರರನ್ನೂ ನಿಯೋಜಿಸಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಕೃತಕ ನೆರೆ ಭೀತಿ
ಹೆದ್ದಾರಿ ಅಸಮರ್ಪಕ ಕಾಮಗಾರಿ, ವಸತಿ ಸಮುಚ್ಚಯ ನಿರ್ಮಾಣ ವೇಳೆ ಚರಂಡಿ ಮಾಡದ್ದರಿಂದ ಕಳೆದ ಬಾರಿ ಸಮಸ್ಯೆಯಾಗಿತ್ತು. ಆದ್ದರಿಂದ ಈ ಬಾರಿ ಪುರಸಭೆ ವ್ಯಾಪ್ತಿಯ ಕೆಲವೆಡೆ ವಿವಿಧ ಅನುದಾನ ಬಳಸಿ 20 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಮೋರಿ ರಚಿಸಲಾಗಿದೆ. ಈ ಬಾರಿ ಕೂಡಾ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಇಲ್ಲದಿರುವುದು, ಹೆದ್ದಾರಿ ಬದಿಯ ಚರಂಡಿಗಳಿಗೆ ಸ್ಲ್ಯಾಬ್ ಇಲ್ಲದೇ ಇರುವುದು, ಕಾಪು ಮಾರ್ಕೆಟ್ ಬಳಿ ಯಲ್ಲಿ ಚರಂಡಿ ನಿರ್ಮಾಣವಾಗದೇ ಇರುವುದರಿಂದ ಕೃತಕ ನೆರೆಯ ಭೀತಿ ಎದುರಾಗಿದೆ.
ಮೆಸ್ಕಾಂನಿಂದಲೂ ಸಿದ್ಧತೆ
ಭಾರೀ ಗಾಳಿ – ಮಳೆಯಿಂದಾಗಿ ಕಳೆದ ವರ್ಷ ಮೆಸ್ಕಾಂಗೆ 1.20 ಕೋ. ರೂ. ನಷ್ಟ ಉಂಟಾಗಿತ್ತು. ಕಳೆದ ವರ್ಷ ಸಂಭವಿಸಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡಿರುವ ಮೆಸ್ಕಾಂ ಈ ಬಾರಿ ಮಳೆಗೆ ಮೊದಲೇ ಅಪಾಯಕಾರಿಯಾಗಿದ್ದ ಮರಗಳನ್ನು, ಗೆಲ್ಲುಗಳನ್ನು ತೆರವುಗೊಳಿಸಿದೆ. ಅದರೊಂದಿಗೆ ಹಳೆಯ ಕಂಬಗಳನ್ನು ಮತ್ತು ವಯರ್‌ಗಳನ್ನೂ ಬದಲಾಯಿಸಿದೆ. ಮೆಸ್ಕಾಂ ವತಿಯಿಂದ 24 ತಾಸು ಕಾರ್ಯ ನಿರ್ವಹಿಸುವ ಸಹಾಯವಾಣಿ ಒದಗಿಸಿದ್ದು, ತುರ್ತು ಆವಶ್ಯಕತೆಯಿದ್ದಾಗ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬ ಬದಲಾವಣೆಗೂ ಪೂರಕವಾಗುವ ಯೋಜನೆ ರೂಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.