![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 4, 2021, 6:53 AM IST
ಉಡುಪಿ: ಮಳೆಗಾಲದ ಋತುವಿಗೆ ಕೊಂಕಣ ರೈಲ್ವೇ ಸರ್ವಸನ್ನದ್ಧವಾಗಿದೆ. ಕೊಲಾಡ್‌ನಿಂದ ತೋಕೂರು ವರೆಗಿನ 740 ಕಿ.ಮೀ. ದೂರದ ಮಾರ್ಗದಲ್ಲಿ ಎಲ್ಲ ಸುರಕ್ಷಾ ಕ್ರಮಗಳನ್ನೂ ಅಳವಡಿಸಲಾಗಿದೆ. ಮಳೆ ನೀರು ಹರಿಯುವ ತೋಡನ್ನು ಸರಿಪಡಿಸಲಾಗಿದ್ದು ಮಣ್ಣು ಜರಿತವಾಗುವ ಕಡೆ ಗಮನಹರಿಸಿ ಕಾಮಗಾರಿ ನಡೆಸಲಾಗಿದೆ.
ರೈಲುಗಳ ಸುಗಮ ಸಂಚಾರಕ್ಕಾಗಿ ಮಳೆಗಾಲದಲ್ಲಿ 681 ಸಿಬಂದಿ ಗಸ್ತು ನಡೆಸಲಿದ್ದು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ 24 ಗಂಟೆಯೂ ಗಸ್ತು ತಿರುಗಲಿದ್ದಾರೆ. ಇಂತಹ ಕಡೆ ವೇಗ ನಿಯಂತ್ರಣವನ್ನು ಕಾಯ್ದು ಕೊಳ್ಳಲಾಗುವುದು. ಯಾವುದೇ ತುರ್ತು ಸಂದರ್ಭಗಳಲ್ಲಿ ನಿಭಾಯಿಸುವ ತಂಡಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕಾಮಗಾರಿ ನಡೆಸಿದ ಪರಿಣಾಮ ಬಂಡೆಗಳು ಉರುಳಿ ರೈಲು ಸೇವೆಗೆ ಧಕ್ಕೆಯಾದ ನಿದರ್ಶನಗಳಿಲ್ಲ.
ಅತಿಯಾದ ಮಳೆ ಸುರಿಯುವ ಸಂದರ್ಭ 40 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ. ರತ್ನಾಗಿರಿ ಮತ್ತು ವೆರ್ನಾದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ತುರ್ತು ವೈದ್ಯಕೀಯ ನೆರವನ್ನು ಒಳಗೊಂಡ ಎಆರ್‌ಎಂವಿ (ಆಕ್ಸಿಡೆಂಟ್ ರಿಲೀಫ್ ಮೆಡಿಕಲ್ ವ್ಯಾನ್) ಸಿದ್ಧವಾಗಿದೆ. ವೆರ್ನಾದಲ್ಲಿ ಎಆರ್‌ಟಿಯನ್ನೂ (ಆಕ್ಸಿಡೆಂಟ್ ರಿಲೀಫ್ ಟ್ರೈನ್) ಇರಿಸಲಾಗಿದೆ.
ಎಲ್ಲ ಸುರಕ್ಷಾ ಶ್ರೇಣಿಯ ಸಿಬಂದಿ ನಿಯಂತ್ರಣ ಕಚೇರಿ/ನಿಲ್ದಾಣವನ್ನು ತುರ್ತು ಸಂದರ್ಭ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಮೊಬೈಲ್ ದೂರವಾಣಿಯನ್ನು ಕೊಡಲಾಗಿದೆ. ಲೋಕೋ ಪೈಲಟ್ ಮತ್ತು ಗಾರ್ಡ್‌ಗಳಿಗೆ ವಾಕಿ ಟಾಕಿ ಒದಗಿಸಲಾಗಿದೆ.
ಮಡಗಾಂವ್, ಚಿಪ್ಳೂಣ್, ರತ್ನಾಗಿರಿ, ವಿಲ್ವಾಡೆ, ಕನಕವಾಲಿ, ಮಾಂಗಾಂವ್, ಕಾರವಾರ, ಭಟ್ಕಳ, ಉಡುಪಿಯಲ್ಲಿ ಮಳೆ ಮಾಪನಯಂತ್ರವನ್ನು ಅಳವಡಿಸ ಲಾಗಿದೆ. ಕಾಳಿ ನದಿ (ಮಾಂಗಾಂವ್ – ವೀರ್ ನಡುವೆ), ಸಾವಿತ್ರಿ ನದಿ (ವೀರ್ ಸಾಪೆ ವಮಾನೆ ನಡುವೆ), ವಶಿಷ್ಟಿ ನದಿ (ಚಿಪ್ಳೂಣ್- ಕಮಾತೆ ನಡುವೆ) ಪ್ರವಾಹ ಎಚ್ಚರಿಕೆ ವ್ಯವಸ್ಥೆ ರೂಪಿಸಲಾಗಿದೆ. ಗಾಳಿಯ ಪ್ರಮಾಣ ಅರಿಯಲೂ 4 ಕಡೆ ಅನೆಮೊಮೀಟರ್ ಅಳವಡಿಸ ಲಾಗಿದೆ.
24×7 ನಿಯಂತ್ರಣ ಕೊಠಡಿ ಬೇಲಾಪುರ, ರತ್ನಾಗಿರಿ, ಮಡಗಾಂವ್‌ನಲ್ಲಿ 24×7 ಸಮಯದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಜೂ. 10ರಿಂದ ಅ. 31ರ ವರೆಗೆ ಮಳೆಗಾಲದ ವೇಳಾಪಟ್ಟಿಯಂತೆ ರೈಲುಗಳನ್ನು ಓಡಿಸಲಾಗುವುದು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.