ಕೊಡಿ ಹಬ್ಬಕ್ಕೆ ಅಣಿಯಾಗಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಕೋಟಿಲಿಂಗೇಶ್ವರ ದೇಗುಲ


Team Udayavani, Dec 11, 2019, 4:42 AM IST

ds-30

ಕೋಟೇಶ್ವರ: ಜಿಲ್ಲೆಯಲ್ಲೇ ಕೊಡಿ ಹಬ್ಬವೆಂದು ಹೆಸರು ಗಳಿಸಿರುವ ಇಲ್ಲಿನ ಜಾತ್ರೆಯಲ್ಲಿ ಕೊಡಿ ತಿಂಗಳ ಹುಣ್ಣಿಮೆಯ ದಿನ ರಥೋತ್ಸವ ನಡೆಯು ವುದು ವಿಶೇಷವಾಗಿದೆ. 14 ಅಸುಪಾಸಿನ ಗ್ರಾಮಗಳ ಭಕ್ತರು ಕೊಡಿ ಹಬ್ಬದಂದು ತೇರು ಎಳೆಯಲು ಇಲ್ಲಿಗೆ ಆಗಮಿಸುವ ಪರಂಪರೆ ಆನಾದಿಕಾಲದಿಂದಲೂ ನಡೆದು ಬಂದಿದೆ. ಕೊಡಿ ಹಬ್ಬದಂದು ಸಪ್ತ ಮಾತೃಕೆ ಯರು, ಸುಬ್ರಹ್ಮಣ್ಯ, ಜ್ಯೇಷ್ಠ ಲಕ್ಷ್ಮೀ, ಮಹಿಷಮರ್ದಿನಿ, ವೆಂಕಟರಮಣ, ನಂದಿ, ಪಾರ್ವತಿ ದೇವಿ, ತಾಂಡವೇಶ್ವರ ಈ ದೇವರಿಗೆ ವಿಶೇಷ ಪೂಜೆ ನಡೆಯು ತ್ತದೆ. ಶಂಕರಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆಗೊಂಡಿದ್ದು ಆದಿ ಗಣಪತಿ, ಶ್ರೀ ಮುಖ್ಯಪ್ರಾಣ, ಮಹಾವಿಷ್ಣು, ಗೋಪಾಲಕೃಷ್ಣ ಗುಡಿಯು ಭಕ್ತರ ದೈನಂದಿನ ಪ್ರಾರ್ಥನ ಕೇಂದ್ರವಾಗಿದೆ.

ವಿಶೇಷ ತಟ್ಟಿರಾಯ
ಇಲ್ಲಿನ 2 ತಟ್ಟಿರಾಯಗಳು ಜಿಲ್ಲೆಯಲ್ಲಿ ಹೆಸರುವಾಸಿಯಾಗಿವೆ. ಇವುಗಳನ್ನು ಗಜಕರ್ಣ, ಘಂಟಾಕರ್ಣ ಎಂದು ಕರೆಯ ಲಾಗುತ್ತಿದೆ. ಕೊಡಿ ಹಬ್ಬದ ರಥೋತ್ಸವ ಸಹಿತ ದೇಗುಲದ ವಿಶೇಷ ಕಾರ್ಯಕ್ರಮಗಳಲ್ಲಿ ತಟ್ಟಿರಾಯನ ಪಾತ್ರ ಮಹತ್ವವಾದುದು.

ಕೋಟೇಶ್ವರ ಪೇಟೆ ಜಗಮಗ
ಕೋಟಿಲಿಂಗೇಶ್ವರ ದೇಗುಲ ಸಹಿತ ತೆಂಕು ಪೇಟೆ ಹಾಗೂ ಬಡಗು ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ದೀಪಾಲಂಕಾರಗೊಳಿಸಲಾಗಿದ್ದು ಅಂಗಡಿ ಮುಂಗಟ್ಟುಗಳನ್ನು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ. ಕೊಡಿ ಹಬ್ಬದ ವೈಭವಕ್ಕೆ ಅಲಂಕೃತಗೊಂಡ ಪೇಟೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲದ ಕಟ್ಟುಪಾಡು ಗಳನ್ನು ಮೆಲುಕು ಹಾಕುವಂತಿದೆ.

ಮರೆಯಾಗುತ್ತಿದೆ ಪರಂಪರೆಯ ಕಟ್ಟುಪಾಡು
ಆನಾದಿ ಕಾಲದಿಂದಲೂ ಕೊಡಿ ಹಬ್ಬದ ಸಂದರ್ಭದಲ್ಲಿ ಇಲ್ಲಿನ ಜೋಗಿ ಸಮಾಜದ ಪ್ರಮುಖರು ಪಾರಂಪರಿಕವಾಗಿ ಮನೆ ಮನೆಗೆ ಅವರು ಆರಾ ಧಿಸುವ ದೇವರನ್ನು ಮುಂಡಾಸಿನ ನಡುವೆ ತಲೆಯಲ್ಲಿ ಹೊತ್ತುಕೊಂಡು ಪ್ರಸಾದವನ್ನು ಕೊಟ್ಟು ಕೊಡಿ ಹಬ್ಬಕ್ಕೆ ಆಮಂತ್ರಿಸುವ ಪದ್ಧªತಿ ಇತ್ತು. ಮನೆಯವರು ಅಕ್ಕಿ, ಧವಸ ಧಾನ್ಯ, ತೆಂಗಿನಕಾಯಿ ಕೊಟ್ಟು ಅವರನ್ನು ಗೌರವಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಇಂತಹ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದಲ್ಲಿ ಅದಕ್ಕೊಂದು ಹೊಸ ಚೈತನ್ಯ ತುಂಬಿದಂತಾಗುವುದು.

ವಾಹನ ನಿಲುಗಡೆಗೆ ಆಯ್ದ ಪ್ರದೇಶಗಳ ನಿಗದಿ
ಕೋಟೇಶ್ವರ: ಕೊಡಿಹಬ್ಬದ ಪ್ರಯುಕ್ತ ಜಾತ್ರೆಗೆ ಬರುವ ಭಕ್ತರಿಗೆ ಸುಗಮ ಸಂಚಾರಕ್ಕಾಗಿ ಆಯ್ದ ಕಡೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಹಾಲಾಡಿ ಕಡೆಯಿಂದ ಬರುವ ವಾಹನಗಳಿಗೆ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಮೈದಾನ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಗೇರಿ ಸೇತುವೆಯ ಹತ್ತಿರ ಹಾಗೂ ಅಂಶು ಡೆವಲಪರ್ಸ್‌ ಎದುರು ನಿಗದಿಪಡಿಸಲಾಗಿದೆ. ಉಡುಪಿ ಕಡೆಯಿಂದ ಬರುವ ವಾಹನ ಗಳಿಗೆ ಕಮಲಮ್ಮ ಕಲ್ಯಾಣ ಮಂಟಪದ ಬಳಿ, ಪದವಿಪೂರ್ವ ಕಾಲೇಜು ಹಿಂಭಾಗ, ರುದ್ರಭೂಮಿ ಬಳಿ ಇರುವ ರಾ.ಹೆದ್ದಾರಿಯ 2 ಬದಿ, ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ ಅಂಕದಕಟ್ಟೆಯ ಸಹನಾ ಗ್ರೂಪ್‌ ಆಫ್‌ ಹೊಟೇಲ್‌ನ ಖಾಲಿ ಜಾಗ ಹಾಗೂ ಆರ್ಯ ಹೊಟೇಲ್‌ ಪಕ್ಕದಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಕೋಟೇಶ್ವರ ಗ್ರಾ.ಪಂ. ಪ್ರಕಟನೆ ತಿಳಿಸಿದೆ.

-ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.