ಕಾಂಗ್ರೆಸ್‌ನಿಂದ ನೈತಿಕತೆ ಪಾಠ ಕಲಿಯಬೇಕಿಲ್ಲ: ಬಿಜೆಪಿ
Team Udayavani, Apr 13, 2017, 3:57 PM IST
ಉಡುಪಿ: ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಸಚ್ಚಾರಿತ್ಯತೆವಂತರಾಗಿದ್ದು, ನಗರಸಭಾ ಸದಸ್ಯರಾಗಿ, 1 ವರ್ಷ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಜನ ಸೇವೆ ಮಾಡಿರುತ್ತಾರೆ. ಗುಂಡಿಬೈಲು ವಾರ್ಡಿನ ವಾಚನಾಲಯದ ಬಳಿ ಅಳವಡಿಸಿದ ಇಂಟರ್‌ಲಾಕ್ ಕಾಮಗಾರಿಯ ಇಂಜಿನಿಯರ್ ಗಣೇಶ್ ಆಗಿದ್ದು, ಉಮೇಶ್ ನಾಯಕ್ ಗುತ್ತಿಗೆದಾರರಾಗಿದ್ದರು. ಇದರ ಸಂಪೂರ್ಣ ವಿವರ ನಗರಸಭೆಯಲ್ಲಿದ್ದು, ಮಾಹಿತಿ ಹಕ್ಕಿನ ಮೂಲಕ ಪಡೆಯಬಹುದಾಗಿದೆ.
ಕೋಯಲ್ ಕಟ್ಟಡವು ನಗರಸಭಾ ಬೈಲಾ ಪ್ರಕಾರ ಇದ್ದು 2 ಮಹಡಿ ಹೊಂದಿರುತ್ತದೆ. ಅದರಲ್ಲಿ ಒಂದು ನೆಲ ಮಹಡಿಯಲ್ಲಿ ವಾಣಿಜ್ಯ ನಂಬರ್ ಹೊಂದಿದ್ದು, 1 ತಾತ್ಕಾಲಿಕ ನಂಬ್ರ ಹೊಂದಿರುತ್ತದೆ. ದೊಡ್ಡಣಗುಡ್ಡೆಯ ಮುಖ್ಯ ರಸ್ತೆಯ ಜುಮಾದಿಕಟ್ಟೆವರೆಗೆ 45 ಲ. ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮಾಡುವ ಯೋಜನೆಯಿತ್ತು. ಆದರೆ ಈಗ ಆ ರಸ್ತೆಯೇ ಇಲ್ಲ. ಕುದ್ರು ಕಲ್ಸಂಕ ಹತ್ತಿರದ ಬೈಲಿನಲ್ಲಿ ಸಾರ್ವಜನಿಕರ ವಿರೋಧದ ಮಧ್ಯೆ 1ಫ್ಲಾ$Âಟಿಗೆ ಯುಜಿಡಿ ಲೈನ್ ಅಳವಡಿಸಲು ಕಾರಣವೇನು?ಬಿಜೆಪಿ ಆಡಳಿತದಲ್ಲಿರುವಾಗ ಕೋಮು ಸೌಹಾರ್ದ ವೇದಿಕೆಯಡಿ ಪ್ರತೀ ವಾರ ಕ್ಷುಲ್ಲಕ ಕಾರಣ ಹಿಡಿದು ಪ್ರತಿಭಟನೆ ಮಾಡುತ್ತಿದ್ದವರು ಕಾಂಗ್ರೆಸ್ ಸರಕಾರ ಬಂದು ತಾನು ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಕೂಡಲೇ ಉಡುಪಿಯಲ್ಲಿ ಏಕಾಏಕಿ ಕೋಮು ಸೌಹಾರ್ದ ನೆಲೆಸಿತೇ? ಎಂದು ಬಿಜೆಪಿ ನಗರ ಪ್ರ. ಕಾರ್ಯದರ್ಶಿಗಳಾದ ಉಪೇಂದ್ರ ನಾಯಕ್, ಜಗದೀಶ ಆಚಾರ್, ನಗರ ಬಿಜೆಪಿಯ ದಿನಕರ ಶೆಟ್ಟಿ ಹೆರ್ಗ, ಟಿ. ಜಿ. ಹೆಗ್ಡೆ, ದಿನಕರ ಪೂಜಾರಿ, ಡಾ| ಎಂ. ಆರ್. ಪೈ, ಗೀತಾ ಶೆಟ್ಟಿ ಪ್ರಕಟನೆಯಲ್ಲಿ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.