“ಸಾಹಿತ್ಯ ಸಮ್ಮೇಳನ ಹೊಸ ಸಾಹಿತಿಗಳ ಸೃಷ್ಟಿಗೆ ಕಾರಣವಾಗಲಿ’
Team Udayavani, Feb 25, 2017, 12:53 PM IST
ಬೈಂದೂರು: ಸಾಹಿತ್ಯ ಚಿಂತನೆ, ಮನೋರಂಜನೆ, ವೈಚಾರಿಕ ಮನೋಭಾವವನ್ನು ಹೆಚ್ಚಿಸುವುದರೊಂದಿಗೆ ಮಾನವನ ಹೃದಯಲ್ಲಿ ಬೇಕಾಗಿರುವ ಕರುಣೆ, ದಯೆಯನ್ನು ತುಂಬುತ್ತದೆ. ಆ ಮೂಲಕ ಕ್ಷೀಣಿಸುತ್ತಿರುವ ಭಾವನಾತ್ಮಕ ಸಂಬಂಧಗಳನ್ನು ಒಟ್ಟುಗೂಡಿಸಿಕೊಳ್ಳಿ ಎಂಬ ಮಾರ್ಮಿಕ ಧ್ವನಿ ಹೊರ ಹೊಮ್ಮಿಸುತ್ತದೆ. ಕನ್ನಡ ಅಭಿಮಾನ ಕನ್ನಡ ನಾಡಿನ ಸಂಸ್ಕೃತಿಯ ಜತೆಗೆ ಒಂದಾಗಬೇಕಿದೆ. ಸಾಹಿತಿ ಸಾಹಿತಿಯೇ ವಿನಃ ಆತನಿಗೆ ಜಾತಿ, ಧರ್ಮವಿಲ್ಲ ಎಂದು ಕರ್ನಾಟಕ ಜನಪದ ಸಿಂಡಿಕೇಟ್ ಸದಸ್ಯ ಡಾ| ಸೈಯ್ಯದ್ ಝಮೀರುಲ್ಲಾ ಶರೀಫ್ ಹೇಳಿದರು.
ಅವರು ಕಿರಿಮಂಜೇಶ್ವರ ಶ್ರೀ ಅಗಸೆöàಶ್ವರ ದೇವಸ್ಥಾನದ ಆವರಣದ ಉಳ್ಳೂರು ಮೂಕಜ್ಜಿ ವೇದಿಕೆಯಲ್ಲಿ ಜರಗಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ನೇತೃತ್ವದಲ್ಲಿ ಆಯೋಜನೆಗೊಂಡ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿಂಡಿಮ 2016ರ ಸಮಾರೋಪ ನುಡಿಗಳನ್ನಾಡಿದರು.
ಸಮ್ಮೇಳನಗಳು ಪ್ರತಿಯೊಬ್ಬರ ಮೇಲೂ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೊರಿಸಿ ಕಳುಹಿಸುತ್ತದೆ. ಸಾಹಿತ್ಯ ಸಮ್ಮೇಳನ ಹೊಸ ಸಾಹಿತಿಗಳ ಸೃಷ್ಟಿಗೆ ಕಾರಣವಾಗಬೇಕು. ಪ್ರತಿ ಸಾಹಿತಿಯೂ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಹೊಸಬರಿಗೆ ಅವಕಾಶ ನೀಡುವ ವಿಶಾಲ ಮನೋಭಾವ ನಮ್ಮದಾಗಬೇಕು. ಪ್ರಶಸ್ತಿ ಹಿಂದೆ ಬಿದ್ದಿರುವ ಸಾಹಿತಿಗಳು ಹೊಸ ಮೊಗ್ಗುಗಳನ್ನು ಅರಳಿಸುವ ಕೆಲಸ ಮಾಡುತ್ತಿಲ್ಲ ಎನ್ನುವುದು ಖೇದಕರ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಶಾಲೆ ಉಳಿದರೆ ಮಾತ್ರವೇ ಸಾಲದು. ಕನ್ನಡ ಭಾಷೆ ಉಳಿಸಬೇಕಾದರೇ ಮನೆಗಳಲ್ಲಿ, ಮನದಲ್ಲಿ ಕನ್ನಡ ಕಟ್ಟುವ ಕಾರ್ಯವನ್ನು ಮಾಡಬೇಕಿದೆ. ಕವಿ ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದದ ನೆನಪಿಗಾಗಿ ಅವರ ಹುಟ್ಟೂರಿನಲ್ಲಿಯೇ ಸಾಕ್ಷಿ ಕೇಂದ್ರವನ್ನು ಸ್ಥಾಪಿಸಲು ತಾಲೂಕು ಕಸಾಪ ಬದ್ಧವಾಗಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಸತೀಶ್ ಚಪ್ಪರಿಕೆ ಸಮಾರೋಪ ನುಡಿಗೆ ಪ್ರತಿಕ್ರಿಯಿಸಿ ಇಡಿ ಸಮ್ಮೇಳನ ತನಗೆ ಖುಷಿ ನೀಡಿದ್ದು, ಪ್ರಪಂಚದ ಎಲ್ಲಾ ಪ್ರಶಸ್ತಿಗಿಂತಲೂ ಮಿಗಿಲಾದದ್ದು ಗೌರವ ದೊರೆತ ಸಂತಸ ಸಿಕ್ಕಿದೆ. ಸಮ್ಮೇಳನಾಧ್ಯಕ್ಷನಾದ ಬಳಿಕ ಸಾಹಿತ್ಯದಲ್ಲಿ ಮತ್ತಷ್ಟು ಗಂಭೀರವಾಗಿ ತೊಡಗಿಸಿಕೊಳ್ಳುವ ಜವಾಬ್ದಾರಿ ಬಂದಿದೆ. ಹುಟ್ಟೂರಿನ ನಂಟು ಹೆಚ್ಚಿದೆ. ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಕನ್ನಡದ ಕಾರ್ಯಗಳಿಗೆ ಜತೆಯಾಗುವೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಎಸ್‌ಎನ್ ಹೆಬ್ಟಾರ್ ಸಮ್ಮಾನಿಸಿದರು. 15ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸತೀಶ್ ಚಪ್ಪರಿಕೆ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ರವರನ್ನು ಸಮ್ಮಾನಿಸಲಾಯಿತು. ಸಮ್ಮೇಳನಕ್ಕಾಗಿ ಶ್ರಮಿಸಿದದವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಶ್ಯಾಮಲಾ ಕುಂದರ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭೋಗ್, ದ್ರಾವಿಡ ಬ್ಯಾಹ್ಮಣ ಪರಿಷತ್ ಅಧ್ಯಕ್ಷ ಮಂಜುನಾಥ ಉಡುಪಿ, ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಕಾರಂತ ಕೊಡೇರಿ, ಕಿರಿಮಂಜೇಶ್ವರ ಜುಮ್ಮಾ ಮಸೀದಿಯ ಕೆ.ಎಂ. ಇರ್ಷಾದ್, ಕಸಪಾ ಜಿಲ್ಲಾ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕುಂದಾಪುರ ತಾಲೂಕು ಕಸಾಪ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್, ಬೈಂದೂರು ಹೋಬಳಿ ಅಧ್ಯಕ್ಷ ಗಣಪತಿ ಹೋಬಳಿದಾರ್, ವಂಡ್ಸೆ ಹೋಬಳಿ ಅಧ್ಯಕ್ಷ ಚಂದ್ರ ಕೆ. ಹೆಮ್ಮಾಡಿ, ಕೋಟೇಶ್ವರ ಘಟಕ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಗೋವಿಂದ ಎಂ. ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ರತನ್ ಬಿಜೂರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.