ರೈಲುಗಳಿಗೆ ಅತ್ಯಾಧುನಿಕ ಬೋಗಿ
Team Udayavani, May 3, 2019, 10:02 AM IST
ಉಡುಪಿ: ಕೊಂಕಣ ರೈಲ್ವೇಯ ಮಡ್ಗಾಂವ್ ಜಂಕ್ಷನ್-ಮುಂಬಯಿ ಸಿಎಸ್ಎಂಟಿ ನಡುವೆ ಓಡುವ ಮಾಂಡೊವಿ ಎಕ್ಸ್ಪ್ರೆಸ್ ಮತ್ತು ಕೊಂಕಣ್ ಕನ್ಯಾ ಎಕ್ಸ್ಪ್ರೆಸ್ ರೈಲು ಬೋಗಿಗಳನ್ನು ಅತ್ಯಾಧುನಿಕ ದರ್ಜೆಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಪ್ರಯಾಣಿಕರ ಹೆಚ್ಚಿನ ಸುರಕ್ಷೆ ಮತ್ತು ಅನುಕೂಲಕ್ಕಾಗಿ ಎಲ್ಎಚ್ಬಿ ವಿನ್ಯಾಸಕ್ಕೆ ಪರಿವರ್ತಿಸಲಾಗಿದೆ. ಕೋಚ್ ಹೊರಭಾಗದಲ್ಲಿ ಸ್ಟೈನ್ಲೆಸ್ ಸ್ಟೀಲ್ನ್ನು, ಒಳಾಂಗಣಕ್ಕೆ ಅಲ್ಯುಮೀನಿಯಂ ಬಳಸಲಾಗಿದೆ. ಇದು ಭಾರವನ್ನು ಕೂಡ ಕಡಿಮೆ ಮಾಡುತ್ತದೆ. ಎಲ್ಎಚ್ಬಿ ಕೋಚ್ಗಳು ಈ ಹಿಂದಿನ ಕೋಚ್ಗಳಗಿಂದ ಉದ್ದವೂ ಆಗಿರುತ್ತವೆ. ಇದರಿಂದಾಗಿ ಆಸನಗಳ ಸಾಮರ್ಥ್ಯ ಕೂಡ ಹೆಚ್ಚಾಗಲಿದೆ. ನಿರ್ವಹಣೆ ಕೂಡ ಸುಲಭವಾಗುತ್ತದೆ. ಪ್ರತಿ ಬೋಗಿ ಕೂಡ “ಅಡ್ವಾನ್ಸ್ಡ್ ನ್ಯೂಮೆಟಿಕ್ ಡಿಸ್ಕ್ ಬ್ರೇಕ್ ಸಿಸ್ಟಂ’ ಹೊಂದಿದ್ದು. ಅತ್ಯಂತ ವೇಗದಲ್ಲಿಯೂ ಪರಿಣಾಮಕಾರಿಯಾಗಿ ಬ್ರೇಕ್ ಹಿಡಿಯಲು ಇದರಿಂದ ಸಾಧ್ಯವಾಗಲಿದೆ. ಎಲ್ಇಡಿ ಲೈಟ್ಗಳನ್ನು ಬಳಕೆ ಮಾಡಲಾಗಿದೆ.
ಹೈಡ್ರಾಲಿಕ್ ಶಾಕ್ ಅಬ್ಸರ್ವರ್ ಮತ್ತು ಇಂಪ್ರೂವ್ಡ್ ಸಸ್ಪೆನ್ಶನ್ ಅಳವಡಿಸಿ ರುವುದರಿಂದ ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವ ದೊರೆಯಲಿದೆ. ಹವಾನಿಯಂತ್ರಿತ ವ್ಯವಸ್ಥೆ ಕೂಡ ಮೇಲ್ದರ್ಜೆಗೇರಿಸಲಾಗಿದೆ. ಮೈಕ್ರೋಪ್ರೊಸೆಸರ್ನಿಂದ ನಿಯಂತ್ರಿಸಲ್ಪಡಲಿದ್ದು ಬೇಸಗೆ ಮತ್ತು ಮಳೆಗಾಲದಲ್ಲಿ ಉತ್ತಮ ಅನುಭವ ನೀಡಲಿದೆ. ಸೆಂಟರ್ ಬಫರ್ ಕಪ್ಲಿಂಗ್ (ಸಿಬಿಸಿ) ವ್ಯವಸ್ಥೆ ಇದ್ದು ಇದು ಹೆಚ್ಚು ಸುರಕ್ಷತೆ ಒದಗಿಸಲಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.