![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 27, 2020, 5:54 AM IST
ಮಲ್ಪೆ: ರಸ್ತೆ ಡಾಮರು ಮಾಡುವಂತೆ ಜನರ ಆಗ್ರಹಕ್ಕೆ ಕೆಲಸವೇನೋ ಆರಂಭ ಆಯ್ತು ಎಂದು ಸಂತಸ ಪಡುತ್ತಿರುವಂತೆ ಮತ್ತೆ ಅದೇ ರಸ್ತೆಯ ಬದಿಯ ಗುಂಡಿ ಅಗೆಯುವ ಕಾಮಗಾರಿಯೂ ಪ್ರಾರಂಭ ವಾಗಿದೆ. ಇದು ಆದಿ ಉಡುಪಿ – ಮೂಡುಬೆಟ್ಟು ರಸ್ತೆಯ ಪರಿಸ್ಥಿತಿ.
ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸಿನ ಮೇರೆಗೆ ಉಡುಪಿ ನಗರಸಭಾ ವ್ಯಾಪ್ತಿಯ ಮೂಡುಬೆಟ್ಟು ವಾರ್ಡಿನಲ್ಲಿ 45ಲಕ್ಷ ರೂ. ಅನುದಾನದಲ್ಲಿ ರಸ್ತೆಯ ಫೇವರ್ ಫಿನಿಶ್ ಕಾಮಗಾರಿ ಎರಡು ಮೂರು ದಿನದ ಹಿಂದೆ ಆರಂಭಗೊಂಡಿತ್ತು. ಮೂಡುಬೆಟ್ಟು ಜಂಕ್ಷನ್‌ನಿಂದ ಆದಿವುಡುಪಿಯವರೆಗೆ ಡಾಮರನ್ನು ಹಾಕಲಾಗಿತ್ತು. ನಾಗನಕಟ್ಟೆಯಿಂದ ಮೂಡುಬೆಟ್ಟು ಜಂಕ್ಷನ್‌ವರೆಗೆ ಮಾರನೇ ದಿನವೇ ಕುಡ್ಸೆಂಪ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಸುವುದಕ್ಕೆ ರಸ್ತೆಯ ಬದಿಯಲ್ಲಿ ಹೊಂಡ ತೆಗೆಯಲು ಆರಂಭಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಂಡ ತೆಗೆದ ಮರಳನ್ನು ಇನ್ನೂ ಡಾಮರು ವಾಸನೆ ಆರದ ರಸ್ತೆಯಲ್ಲಿ ಹಾಕಲಾಗಿದೆ. ರಸ್ತೆಯ ಕಾಮಗಾರಿಯ ಮೊದಲೇ ಪೈಪ್‌ಲೈನ್ ಕೆಲಸ ಮುಗಿಸಬೇಕಿತ್ತು. ಅಧಿಕಾರಿಗಳ ಸಮನ್ವಯತೆಯ ಕೊರತೆಯೇ ಇದಕ್ಕೆ ಕಾರಣ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪೇವರ್ ಫಿನಿಶ್ ಆಗಬೇಕಿದೆ
ರಸ್ತೆ ಬದಿ ಅಗೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದ ತತ್‌ಕ್ಷಣ ಗುತ್ತಿಗೆದಾರರನ್ನು ವಿಚಾರಿಸಲಾಗಿದೆ. ಪೈಪ್‌ಲೈನ್ ಅಳವಡಿಸಿದ ತತ್‌ಕ್ಷಣ ಹೊಂಡವನ್ನು ಮುಚ್ಚಿ ರಸ್ತೆಗೆ ಬಿದ್ದ ಮರಳನ್ನು ತೆರವುಗೊಳಿಸಿ ಸರಿಪಡಿಸಿಕೊಡಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಒಂದು ಹಂತದ ಡಾಮರೀಕರಣದ ಕೆಲಸ ಮಾತ್ರ ನಡೆದಿದೆ. ಪೇವರ್ ಫಿನಿಶ್ ಕೆಲಸ ಇನ್ನಷ್ಟೆ ಆಗಬೇಕಿದೆ.
-ಶ್ರೀಶ ಕೊಡವೂರು, ನಗರಸಭಾ ಸದಸ್ಯರು, ಮೂಡುಬೆಟ್ಟು ವಾರ್ಡ್
You seem to have an Ad Blocker on.
To continue reading, please turn it off or whitelist Udayavani.