ಇಳಿವಯಸ್ಸಿನ ಹೆದ್ದಾರಿ ಹೋರಾಟಗಾರ ಅಬ್ಟಾಸ್
Team Udayavani, Jul 29, 2017, 8:40 AM IST
ಬೈಂದೂರು: ಹಣ್ಣು ಹಣ್ಣಾದ ಗಡ್ಡ, ಮಂಜು ಮಂಜಾದ ಕಣ್ಣುಗಳು, ನಡುಗುವ ಕೈಕಾಲು, ಇಂತಹ ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಬೈಂದೂರಿನಲ್ಲಿ ಅರ್ಜಿ ಹಿಡಿದು ದಿನಂಪ್ರತಿ ವಿವಿಧ ಕಚೇರಿ ಅಲೆದಾಡುತ್ತಾರೆ. ಆದರೆ ಅವರ ವೈಯಕ್ತಿಕ ಕೆಲಸಕ್ಕಲ್ಲ. ಬದಲಾಗಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಸಾರ್ವಜನಿಕರಿಗಾಗುವ ತೊಂದರೆ ನಿವಾರಿಸಲು ಇಲಾಖೆ ಸ್ಫಂದಿಸಬೇಕು ಎನ್ನುವ ಕುರಿತಾಗಿ.
ಸಚಿವರಿಗೆ ಪತ್ರ
ಮೂಲತಃ ನಾವುಂದದವರಾಗಿರುವ ಅಬ್ಟಾಸ್ ಬೈಂದೂರಿನ ಯೋಜನಾ ನಗರದಲ್ಲಿ ವಾಸಿಸುತ್ತಿದ್ದಾರೆ.ಬೈಂದೂರು ವ್ಯಾಪ್ತಿಯಲ್ಲಿ ಚಿರಪರಿಚಿತರಾಗಿರುವ ಇವರು ಅಪ್ಪಟ ಸ್ವಾಭಿಮಾನದ ವ್ಯಕ್ತಿತ್ವ ಹೊಂದಿದ್ದಾರೆ.ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಕುಂದಾಪುರದಿಂದ ಗೋವಾದವರೆಗಿನ ಹೆದ್ದಾರಿ ಕಾಮಗಾರಿ ವೇಳೆ ಒತ್ತಿನೆಣೆ ರಾಘವೇಂದ್ರ ಮಠದ ರಸ್ತೆ ಕೊರೆದಿರುವುದರಿಂದ ಭಕ್ತರಿಗೆ ದೇವಸ್ಥಾನ ಬೇಟಿ ಮಾಡಬೇಕಾದರೆ ಸುತ್ತು ಬಳಸಿಬರಬೇಕಾಗಿದೆ.ಇದರ ಬಗ್ಗೆ ಧ್ವನಿ ಎತ್ತಿದವರಲ್ಲಿ ಅಬ್ಟಾಸ್ ಸಾಹೇಬರು ಕೂಡ ಒಬ್ಬರಾಗಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಸಚಿವರಿಗೆ ಪತ್ರ ಬರೆದು ಉತ್ತರವನ್ನು ಕೂಡ ಪಡೆದಿದ್ದಾರೆ.ಹೆದ್ದಾರಿ ಅವ್ಯವಸ್ಥೆಯಿಂದಾಗಿ ವಿವಿಧ ಕಡೆ ನಿತ್ಯ ಸಮಸ್ಯೆಯಾಗುತ್ತಿದೆ.ಇದನ್ನು ಸರಿಪಡಿಸಬೇಕು ಅಪಘಾತ ನಿಯಂತ್ರಣವಾಗಬೇಕು ಎಂದು ದಿನಂಪ್ರತಿ ಜನಪ್ರತಿನಿಧಿಗಳ ಮನೆಗೆ ಹಾಗೂ ಕಚೆೇರಿಗಳಿಗೆ ಅಲೆಯುವುದು ಇವರ ನಿತ್ಯ ಕಾಯಕವಾಗಿದೆ.
ಸ್ವಂತ ಹಣದಲ್ಲಿ ಸೂಚನಾ ಫಲಕ
ಬೈಂದೂರು ಹೊಸ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುವುದನ್ನು ತಪ್ಪಿಸಲು ಹಾಗೂ ಬಸ್ಸು ನಿಲ್ದಾಣದ ಒಳಗೆ ಹೋಗಬೇಕೆಂದು ಆಗ್ರಹಿಸಿ ಸ್ವಂತ ಹಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಸೂಚನಾ ಫಲಕ ಅಳವಡಿಸಿದ್ದಾರೆ.ಇದಲ್ಲದೆ ಆರಕ್ಷಕ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಾರ್ವಜನಿಕರಿಗಾಗುವ ತೊಂದರೆ ಕುರಿತು ಮನವರಿಕೆ ಮಾಡಿಕೊಡುವ ಹವ್ಯಾಸ ಬೆಳಸಿಕೊಂಡಿದ್ದಾರೆ.ಅದೇನೆಯಿದ್ದರು ಸಹ ಇಳಿವಯಸ್ಸಿನಲ್ಲಿ ವಿಶ್ರಾಂತಿ ಪಡೆದರೆ ಸಾಕು ಎನ್ನುವ ಮನಸ್ಥಿತಿ ಇರುವಾಗ ಸಮಾಜ ,ಸಾರ್ವಜನಿಕರು ಎನ್ನುವ ಕಾಳಜಿ ವಹಿಸಿ ತಮ್ಮಿಂದಾದ ಜನಜಾಗೃತಿ ಕುರಿತು ಹೋರಾಡುವ ಅಬ್ಟಾಸ್‌ರವರಿಗೊಂದು ಅಭಿನಂದನೆ ಹೇಳಲೇಬೇಕು.
– ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.