ಅಳಿಯದೆ ಉಳಿದ ನಾಗರಿಕತೆ ಭಾರತದ್ದು ಮಾತ್ರ

ರಾಷ್ಟ್ರ ಗೋಪುರಂನಲ್ಲಿ ರೋಹಿತ್‌ ಚಕ್ರತೀರ್ಥ

Team Udayavani, Jun 9, 2019, 6:00 AM IST

c-24

ಉಡುಪಿ: ಜಗತ್ತಿನ ನಾನಾ ನಾಗರಿಕತೆಗಳು ಅಳಿದ ಉದಾಹರಣೆಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ನೋಡುತ್ತೇವೆ. ಪಾಶ್ಚಾತ್ಯರ ದೃಷ್ಟಿಯಲ್ಲಿ ಒಂದಿಷ್ಟು ಕಾಲ ಬಾಳಿ ಅಳಿದು ಹೋದ ಸಂಸ್ಕೃತಿಯನ್ನೇ ನಾಗರಿಕತೆ ಎಂದು ಕರೆದು, ಅದನ್ನು ನಮಗೆ ಕಲಿಸುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಹೂಣರು, ಶಕರು, ಮಂಗೋಲಿಯನ್ನರು, ಇರಾನಿಯರು, ಫ್ರೆಂಚ್‌, ಬ್ರಿಟಿಷರು, ಸ್ವಾತಂತ್ರಾನಂತರ ಚೀನಿಯರು ಆಕ್ರಮಣ ನಡೆಸಿದರೂ ಅಳಿಯದೆ ಉಳಿದ ನಾಗರಿಕತೆ ಭಾರತದ್ದು ಮಾತ್ರ ಎಂದು ಅಂಕಣಕಾರ, ವಾಗ್ಮಿ ರೋಹಿತ್‌ ಚಕ್ರತೀರ್ಥ ವಿಶ್ಲೇಷಿಸಿದರು.

ಶನಿವಾರ ಶ್ರೀಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ನಡೆದ ರಾಷ್ಟ್ರಗೋಪುರಂ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಬುದ್ಧಿಜೀವಿಗಳು ನಮ್ಮದು ಸೋಲಿನ ಇತಿಹಾಸ. ನಾವು ಖಡ್ಗ ಹಿಡಿಯಲಿಲ್ಲ ಎನ್ನುತ್ತಾರೆ. ನಮ್ಮದು ಸಾಮರಸ್ಯದ ಇತಿಹಾಸ, ಸಂಘರ್ಷದ ಇತಿಹಾಸ. ಇತರ ರಾಷ್ಟ್ರಗಳ ಮೇಲೆ ದಂಡೆತ್ತಿ ಹೋಗಿ ಆಕ್ರಮಣ ನಡೆಸಿದರೆ ಮಾತ್ರ ಅಮೆರಿಕನ್ನರು ನಾಗರಿಕತೆ ಎಂದು ಹೇಳುತ್ತಾರೆ. ಭಾರತದವರು ದಂಡೆತ್ತಿ ಹೋಗದೆ ಇದ್ದರೂ, ಚೀನಾ, ಜಪಾನ್‌, ಆಗ್ನೇಯ ಏಷ್ಯಾ, ಇರಾನ್‌ಗೆ ಜ್ಞಾನವನ್ನು ಕೊಟ್ಟರು ಎಂದರು.

ಭೀಮನಕಟ್ಟೆ ಮಠದ ಶ್ರೀರಘುವರೇಂದ್ರತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಸ್ವತ್ಛ ಭಾರತದ ಕಲ್ಪನೆಯನ್ನು ಮನಸ್ಸಿನ ಕೊಳೆ ನಿವಾರಿಸುವ ಮೂಲಕ ಸಾಕಾರಗೊಳಿಸಬೇಕೆಂದರು. ಪ್ರೊ|ಎಂ.ಬಿ.ಪುರಾಣಿಕ್‌ ಪ್ರಸ್ತಾವನೆಗೈದರು. ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

18ನೆಯ ಶತಮಾನದಲ್ಲಿ ಶೇ.23 ಜಿಡಿಪಿ, 1947ರಲ್ಲಿ ಶೇ.2 18ನೆಯ ಶತಮಾನದಲ್ಲಿ ಭಾರತದ ಜಿಡಿಪಿ ಶೇ.23 ಇತ್ತು. ಜಗತ್ತಿನ ಕಾಲಂಶ ಉತ್ಪಾದನೆ ಭಾರತದ್ದಾಗಿತ್ತು. 1947ರಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಶೇ.2ಕ್ಕೆ ಇಳಿಯಿತು. ಇದು ಕೂಡ ಮಹಿಳೆಯರ ಕತ್ತಿನಲ್ಲಿದ್ದ ಮಾಂಗಲ್ಯಗಳಿಂದ.

ಎರಡೇ ರಾಜ್ಯಗಳಲ್ಲಿ ಲಕ್ಷ ಶಾಲೆಗಳಿತ್ತು
1835ರಲ್ಲಿ ಮೆಕಾಲೆ ಬ್ರಿಟಿಷರಂತೆ ಭಾರತೀಯ ರನ್ನು ಬೆಳೆಸುವ ಇಂಗ್ಲಿಷ್‌ ಶಿಕ್ಷಣ ಕ್ರಮವನ್ನು ಆರಂಭಿಸಿದ. ಇದಕ್ಕೂ ಮುನ್ನ ಥಾಮಸ್‌ ಮನ್ರೊ ಬಂಗಾಳ ಮತ್ತು ಬಿಹಾರದಲ್ಲಿ ಅಧ್ಯಯನ ನಡೆಸಿ ಕೊಟ್ಟ ವರದಿಯಲ್ಲಿ ಒಂದು ಲಕ್ಷ ಗುರುಕುಲ ಶಾಲೆಗಳಿದ್ದವು ಎಂದಿದೆ. ರಾಮಾಯಣ, ಮಹಾ ಭಾರತ ಕಾಲದಲ್ಲಿಯೂ ಗುರುಕುಲ ಪದ್ಧತಿ ಇತ್ತು. ಜಾತಿಭೇದ ಇರಲಿಲ್ಲ. ಕೃಷ್ಣ ಮತ್ತು ಕುಚೇಲ ಒಟ್ಟಿಗೆ ಕಲಿತರು.

ವಿದ್ಯಾರ್ಥಿ- ಶಿಕ್ಷಕರ ಅನುಪಾತ ಅಂದು ಇಂದು…
ನಲಂದ ವಿ.ವಿ.ಯಲ್ಲಿ 10,000 ವಿದ್ಯಾರ್ಥಿಗಳಿಗೆ 2,000 ಶಿಕ್ಷಕರಿದ್ದರು. ಇದು 5:1 ಅನುಪಾತದಲ್ಲಿದ್ದರೆ ಈಗ 30:1 ಅನುಪಾತವನ್ನೂ ಪಾಲಿಸಲಾಗುತ್ತಿಲ್ಲ. ತಕ್ಷಶಿಲೆಯಲ್ಲಿ ಪಾಣಿನಿ, ಚರಕ, ಚಾಣಕ್ಯ ಶಿಕ್ಷಕರಾಗಿದ್ದರು. ಇಂಗ್ಲಿಷರು ವಿಜ್ಞಾನ, ಭಾಷೆ, ಗಣಿತ, ಸಮಾಜ, ಭೂಗೋಲ ಹೀಗೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಕಲಿಸಿಕೊಡುವ, ಪರಿಪೂರ್ಣತೆ ಸಾಧಿಸದ ಶಿಕ್ಷಣವನ್ನು ನಮಗೆ ನೀಡಿದರು. ಇದು ಬ್ರಿಟಿಷರಿಗೆ ಅನುಕೂಲವಾಗುವಂತೆ ರೂಪಿಸಿದ ಶಿಕ್ಷಣ ಕ್ರಮ. ಆಗ 12 ವರ್ಷ ಕಲಿತ ಅನಂತರ ಗುರು ದಕ್ಷಿಣೆ ನೀಡುವ ಕ್ರಮವಿದ್ದರೆ ಈಗ ಮೊದಲೇ ದಕ್ಷಿಣೆ ನೀಡಬೇಕು, ಇಲ್ಲವಾದರೆ ಶಿಕ್ಷಣ ನಿರಾಕರಣೆಯ ಕ್ರಮವಿದೆ.

ಮಾರ್ಕ್ಸ್- ಭಾರತೀಯರ ಚಿಂತನೆ
ಇತರಲ್ಲಿರುವ ಸಂಪತ್ತನ್ನು ದೋಚಿಕೊಂಡು ಬದುಕಬೇಕು ಎಂದು ಕಾರ್ಲ್ ಮಾರ್ಕ್ಸ್ ಹೇಳಿದರೆ ಭಾರತೀಯ ಶತ ಕೈಗಳಿಂದ ಸಂಪಾದಿಸಿ ಸಾವಿರ ಕೈಗಳಲ್ಲಿ ಕೊಡಬೇಕು ಎಂದು ಹೇಳಿದರು. ಕೊಡುವಾಗಲೂ ಶ್ರದ್ಧೆಯಿಂದ ಕೊಡಬೇಕು ಎಂದರು.

ಪ್ಲಾಸ್ಟಿಕ್‌ ಸರ್ಜರಿ ಹೇಳಿಕೆಗೆ ಅಳುಕೇಕೆ?
ಪ್ರಧಾನಿಯವರು ಭಾರತದವರು ಮೊದಲು ಪ್ಲಾಸ್ಟಿಕ್‌ ಸರ್ಜರಿ ಮಾಡಿದರು ಎಂದಾಗ ಬುದ್ಧಿಜೀವಿಗಳಿಂದ ಆಕ್ಷೇಪ ವ್ಯಕ್ತವಾಯಿತು. ಅಮೆರಿಕದ ವಿ.ವಿ.ಗಳು, ವೈದ್ಯಕೀಯ ಕಾಲೇಜುಗಳಲ್ಲಿ ಶುಶ್ರುತನನ್ನು ಫಾದರ್‌ ಆಫ್ ಸರ್ಜರಿ ಎಂದು ಚಿತ್ರ ಹಾಕಿದ್ದಾರೆ. ಮೊದಲ ಕೆಟರ್ಯಾಕ್ಟ್ ಸರ್ಜರಿ ನಡೆಸಿದವ ಶುಶ್ರುತ.

ಇದಕ್ಕೇಕೆ ವೈಜ್ಞಾನಿಕತೆ ಬೇಡ?
ಮೌಡ್ಯ ಮತ್ತು ವೈಜ್ಞಾನಿಕತೆ ಬಗ್ಗೆ ಆಗಾಗ ಚರ್ಚೆ ನಡೆಯುತ್ತದೆ. ಇಂತಹ ಸೆಕೆಯಲ್ಲಿಯೂ ಕೋಟು, ಟೈ ಕಟ್ಟಿಕೊಳ್ಳುವ ಹಿಂದಿರುವ ವೈಜ್ಞಾನಿಕತೆ ಏನು?

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.