ಫಿನ್ಲ್ಯಾಂಡ್ ಯುವತಿ ಕೈ ಹಿಡಿದ ಪಡುಬಿದ್ರಿ ವರ
Team Udayavani, Sep 2, 2018, 6:50 AM IST
ಪಡುಬಿದ್ರಿ: ಫಿನ್ಲ್ಯಾಂಡ್ ಯುವತಿಯನ್ನು ಪ್ರೀತಿಸಿದ ಗೌಡಸಾರಸ್ವತ ಯುವಕ ಅರ್ಜುನ್ ಕಾಮತ್ ಹಿಂದೂ ಸಂಪ್ರದಾಯ ಹಾಗೂ ಜಿ. ಎಸ್. ಬಿ. ಪದ್ಧತಿಯಂತೆ ಆಕೆಯನ್ನು ಕೈಹಿಡಿದಿದ್ದಾರೆ.
ಆ.29ರಂದು ಮೂಲ್ಕಿ ನರಸಿಂಹ ಕೃಪಾ ಸಭಾಭವನದಲ್ಲಿ ನಡೆದ ವಿವಾಹಕ್ಕೆ ನೂರಾರು ಜನರು ಸಾಕ್ಷಿಯಾದರು. ಅತಿಕಾರಿಬೆಟ್ಟು ಪುಂಡಲೀಕ ಕಾಮತ್ ಅವರ ದ್ವಿತೀಯ ಪುತ್ರ ಅರ್ಜುನ್ ಕಾಮತ್ ಬಾಲ್ಯದಿಂದಲೇ ಗೋವಾದಲ್ಲಿ ಬೆಳೆದು ಉದ್ಯೋಗ ನಿಮಿತ್ತ ಫಿನ್ಲ್ಯಾಂಡ್ಗೆ ತೆರಳಿದ್ದರು. ತಮ್ಮ ಮನೆ ಸನಿಹದ ಫಿಜೋì ದಂಪತಿಗಳ ಮಗಳು ಫೀನಿಷ್ ಯುವತಿ “ಎಲ್ಲಾ’ (ಹೆಸರನ್ನು ವಿದ್ಯಾಲಕ್ಷ್ಮೀ ಎಂದು ಬದಲಾಯಿಸಲಾಗಿದೆ.) ಎಂಬವರನ್ನು ಅವರು ಪ್ರೇಮಿಸಿದ್ದು, ವಿವಾಹವಾಗಲು ಇಬ್ಬರೂ ನಿರ್ಧರಿಸಿದ್ದರು. ಈ ಬಗ್ಗೆ ಹೆತ್ತವರ ಸಲಹೆ ಮೇರೆಗೆ, ಭಾರತದ ಸಂಸ್ಕೃತಿ, ಸಂಸ್ಕಾರವನ್ನು ಮರೆಯದೆ ಎಲ್ಲಾ-ಅರ್ಜುನ್ ವಿವಾಹವಾಗಿದ್ದಾರೆ.
ಅಪ್ಪಟ ಭಾರತೀಯ ಶೈಲಿಯಲ್ಲಿ ಸಪ್ತಪದಿ ತುಳಿದ ಎಲ್ಲಾ ಮರುದಿನ ಅತಿಕಾರಿಬೆಟ್ಟುವಿನ ಕಾಮತರ ಹಿರಿಯರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲೂ ಭಾಗಿಯಾಗಿ ತುಳಸಿ ಪೂಜೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.