ಅಕ್ರಮ ಗೂಡಂಗಡಿ ತೆರವಿಗೆ ಮುಂದಾದ ಪಂಚಾಯತ್
Team Udayavani, Mar 4, 2019, 1:00 AM IST
ಬೆಳ್ಮಣ್: ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದ್ದ 5 ಕುಟುಂಬಗಳ ಮನೆ ತೆರವು ಬಳಿಕ ಸುದ್ದಿಯಲ್ಲಿದ್ದ ಬೆಳ್ಮಣ್ ಗ್ರಾಮ ಪಂಚಾಯತ್ ಇದೀಗ ರಸ್ತೆ ಬದಿಯ ಗೂಡಂಗಡಿ ತೆರವಿಗೆ ನೋಟೀಸು ಜಾರಿ ಮಾಡಿದೆ.
ಬಸ್ಸು ನಿಲ್ದಾಣದ ಸಮೀಪದಲ್ಲೇ ರಾಜ್ಯ ಹೆದ್ದಾರಿ 1 ಕ್ಕೆ ತಾಗಿಕೊಂಡಿರುವ ಕೆಶಿಪ್ ಸ್ವಾಧೀನದ ಖಾಲಿ ಜಾಗದಲ್ಲಿ ಬೀದಿ ಬದಿಯ 4 ಗೂಡಂಗಡಿ ವ್ಯಾಪಾರಿಗಳಿಗೆ ಅಂಗಡಿ ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ವ್ಯಾಪರಸ್ಥರು ಕಂಗಾಲು
ಹೊಟ್ಟೆ ಪಾಡಿಗಾಗಿ ಗೂಡಂಗಡಿ ಇಟ್ಟಿದ್ದು ಕಟ್ಟಡ ನಿರ್ಮಾಣ ಸಂದರ್ಭ ನಾವು ಬಿಟ್ಟು ಹೋಗಲು ಸಿದ್ಧರಿದ್ದೇವೆ. ಆದರೆ ಈಗ ಏಕಾಏಕಿ ತೆರವಿಗೆ ನೋಟಿಸ್ ನೀಡಲಾಗಿದೆ. ನಿತ್ಯ 30 ರೂ. ಹಾಗೂ ಸೋಮವಾರದಂದು 100 ರೂ.ಗಳಂತೆ 1120 ರೂ. ಸುಂಕ ನೀಡುತ್ತಿದ್ದೇವೆ. ಹಣ ವಸೂಲಿ ಮಾಡುವವರು ಯಾವುದೇ ರಶೀದಿ ನೀಡುವುದಿಲ್ಲ. ಅಂಗಡಿ ತೆರವು ಮಾಡಿದರೆ ಬೀದಿ ಪಾಲಾಗುತ್ತೇವೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಗೂಡಂಗಡಿಗಳಿರುವ ಖಾಲಿ ಜಾಗದಲ್ಲಿ ಪಂಚಾಯತ್ ವತಿಯಿಂದ ತಗಡು ಶೀಟುಗಳನ್ನು ಅಳವಡಿಸಿ ಅಂಗಡಿಯನ್ನು ನಿರ್ಮಿಸಿ ಕೊಡುತ್ತೇವೆ ಆ ಬಳಿಕ ಅಲ್ಲಿ ಏಲಂ ಪಡೆದು ವ್ಯಾಪರ ನಡೆಸಲಿ ಎಂದು ಪಿಡಿಒ ಹಿಂದ ಹೇಳಿದ್ದರು. ಆದರೆ ಇಲ್ಲಿ ಇಂತಹ ನಿರ್ಮಾಣ ಅಸಾಧ್ಯ. ಖಾಲಿ ಜಾಗವನ್ನು ಹೆದ್ದಾರಿ ನಿರ್ಮಾಣದ ವೇಳೆ ಕೆಶಿಪ್ ಸ್ವಾಧೀನ ಪಡಿಸಿಕೊಂಡಿದ್ದು, ಗ್ರಾ.ಪಂ. ಪರಿಹಾರವನ್ನೂ ಪಡೆದುಕೊಂಡಿದೆ. ಈ ಕಾರಣ ಪಂಚಾಯತ್ ಕಟ್ಟಡ ನಿರ್ಮಾಣ ಮಾಡುವುದು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಪರವಾನಿಗೆ ಇಲ್ಲ
ಖಾಲಿ ಜಾಗದಲ್ಲಿ ಗೂಡಂಗಡಿಗಳು ಹೆಚ್ಚಾಗುತ್ತಿದ್ದು ಅವುಗಳ ತೆರವಿಗೆ ನೋಟಿಸ್ ನೀಡಿದ್ದೇವೆ. ಇದೇ ಜಾಗದಲ್ಲಿ ಶೀಟ್ಗಳನ್ನು ಅಳವಡಿಸಿ ಅಂಗಡಿ ನಿರ್ಮಿಸಿ ಕೊಡುತ್ತೇವೆ. ಬಳಿಕ ಏಲಂನಲ್ಲಿ ಪಡೆದು ವ್ಯಾಪಾರ ನಡೆಸಲಿ. ಗೂಡಂಗಡಿಗಳಿಗೆ ಪಂಚಾಯತ್ ವತಿಯಿಂದ ಯಾವುದೇ ಪರವಾನಿಗೆ ಇಲ್ಲ.
-ಪ್ರಕಾಶ್, ಬೆಳ್ಮಣ್ ಗ್ರಾ.ಪಂ. ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.