ಮಲಿನಗೊಳ್ಳು ತ್ತಿದೆ ಪಂಚಗಂಗಾವಳಿ ನದಿ

ನದಿಯುದ್ದಕ್ಕೂ ಆಸ್ಪತ್ರೆ, ಅಂಗಡಿ, ಹೊಟೇಲ್‌ಗ‌ಳ ತ್ಯಾಜ್ಯ

Team Udayavani, Jan 19, 2020, 7:00 AM IST

meg-25

ಕುಂದಾಪುರ: ಫೆರ್ರಿಪಾರ್ಕ್‌ ಸಮೀಪ ಪಂಚ ಗಂಗಾವಳಿ ನದಿ ಶುದ್ಧೀಕರಣಕ್ಕೆ ಒಂದೆಡೆಯಿಂದ ಯತ್ನ ನಡೆಯುತ್ತಿರುವಂತೆಯೇ ಇನ್ನೊಂದೆಡೆ ನದಿ ಮಲಿನ ಮಾಡುವ ಕೆಲಸವೂ ನಡೆಯುತ್ತಿದೆ. ಕುಂದಾಪುರ ನಗರದ ಸೌಂದರ್ಯಕ್ಕೆ ಕಲಶವಿಟ್ಟಂತೆ ಇರುವ ಪಂಚಗಂಗಾವಳಿ ನದಿ ಇಲ್ಲಿನ ಸೊಬಗನ್ನು ಹೆಚ್ಚಿಸಿದೆ. ಆದರೆ ಅದೇ ನದಿಯಲ್ಲಿ ಮಾಲಿನ್ಯವೂ ಇರುವುದು ನಗರದ ಜನತೆಗೆ ಬೇಸರ ಮೂಡಿಸಿದೆ.

ಕಸ ಸಂಗ್ರಹ
ಪುರಸಭೆ ವ್ಯಾಪ್ತಿಯ ಅಂಗಡಿ, ಮುಂಗಟ್ಟುಗಳ ತ್ಯಾಜ್ಯವನ್ನು ಪುರಸಭೆಯೇ ಮನೆ ಮನೆ ಕಸ ಸಂಗ್ರಹ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡುತ್ತದೆ. ಕಂದಾವರದಲ್ಲಿ ತ್ಯಾಜ್ಯ ವಿಲೇ ಘಟಕದಲ್ಲಿ ಕೊಂಡೊಯ್ದು ಸುರಿದು ಅಲ್ಲಿ “ಕಸದಿಂದ ರಸ’ ಎಂಬಂತೆ ಗೊಬ್ಬರ ತಯಾರಿಸುತ್ತದೆ.

ತ್ಯಾಜ್ಯ
ಪುರಸಭೆ ಇಷ್ಟೆಲ್ಲ ಕೆಲಸಗಳನ್ನು ಸುಂದರ ಕುಂದಾಪುರ ನಿರ್ಮಾಣಕ್ಕಾಗಿ ಮಾಡುತ್ತಿದ್ದರೂ ಪಂಚಗಂಗಾವಳಿ ಪರಿಸರದಲ್ಲಿ ತ್ಯಾಜ್ಯ ತಂದು ರಾಶಿ ಹಾಕುವವರು ಯಾರು ಎಂದು ಗೊತ್ತಾಗಿಲ್ಲ. ಪುರಸಭೆ ಇಲ್ಲೊಂದು ದೊಡ್ಡ ತೊಟ್ಟಿ ಇಟ್ಟಿದೆ. ಏಕೆಂದರೆ ಸಣ್ಣ ಸಣ್ಣ ವಾಹನಗಳಲ್ಲಿ ಮನೆ ಮನೆ ಕಸ ಸಂಗ್ರಹಿಸಿದಾಗ ಆ ಕಸವನ್ನು ಪ್ರತೀ ಬಾರಿ 14 ಕಿ.ಮೀ. ದೂರವಾಗುವ ಕಂದಾವರದಲ್ಲಿ ವಿಲೇ ಮಾಡಲು ಅಸಾಧ್ಯ. ಅದಕ್ಕಾಗಿ ಮನೆ ಮನೆಯಿಂದ ಸಂಗ್ರಹಿಸಿದ ಕಸವನ್ನು ಇಲ್ಲಿನ ದೊಡ್ಡ ತೊಟ್ಟಿಯಲ್ಲಿ ಹಾಕಿ ಅಲ್ಲಿಂದ ದೊಡ್ಡ ಲಾರಿಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಕಸದ ರಾಶಿ ಹೆಚ್ಚಾದಾಗ ಅದು ನದಿಯೊಡಲನ್ನು ಸೇರುತ್ತದೆ.

ಹೊರಗಿನಿಂದ ಕಸ
ಪುರಸಭೆ ತೊಟ್ಟಿ ಇಟ್ಟಿದೆಯಲ್ಲ ಎಂದು ಕೆಲವರು ಇಲ್ಲೇ ತಂದು ತ್ಯಾಜ್ಯ ರಾಶಿ ಹಾಕುವವರೂ ಇದ್ದಾರೆ. ಇಷ್ಟಲ್ಲದೆ ಪುರಸಭೆಗೆ ಸಂಬಂಧಪಡದವರೂ ಇಲ್ಲಿ ತ್ಯಾಜ್ಯ ತಂದು ನದಿಗೆ ಸುರಿಯುತ್ತಾರೆ ಎಂಬ ಸಂಶಯ ಇದೆ. ಈ ಅನುಮಾನ ಪುರಸಭೆ ಅಧಿಕಾರಿಗಳಿಗೂ ಇದೆ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಪ್ರವಾಸಿ ಜಾಗ

ಪಂಚಗಂಗಾವಳಿ ತೀರವೇ ಅತ್ಯುತ್ತಮ ಪ್ರವಾಸಿತಾಣ. ಎಲ್ಲಿ ಬೇಕಾದರೂ ಪ್ರಕೃತಿ ಸೌಂದರ್ಯ ಆಸ್ವಾದಿಸಬಹುದಾದ, ನದಿ ದಂಡೆಯಲ್ಲಿ ವಿರಮಿಸಬಹುದಾದ ಪ್ರದೇಶ. ಆದರೆ ನದಿಯುದ್ದಕ್ಕೂ ಆಸ್ಪತ್ರೆ, ಅಂಗಡಿ, ಹೊಟೇಲ್‌ಗ‌ಳ ತ್ಯಾಜ್ಯ , ಹಳೆ ಮನೆ ಸಾಮಗ್ರಿ ಹರಡಿದ ಕಾರಣ ಎಲ್ಲಿಯೂ ಕಾಲು ಹಾಕದಂತಾಗಿದೆ. ಹಂಚಿನ ಕಾರ್ಖಾನೆ ಸಮೀಪದಿಂದ ಸಹಾಯಕ ಕಮಿಷನರ್‌ ಅವರ ಬಂಗ್ಲೆ ತನಕವೂ ಇದೇ ಕೊಳಕು ಪರಿಸ್ಥಿತಿ ಇದೆ.

ಯುವ ಬ್ರಿಗೇಡ್‌ನಿಂದ ಸ್ವಚ್ಛತೆ
ಪಂಚಗಂಗಾವಳಿ ತೀರವನ್ನು ಯುವ ಬ್ರಿಗೇಡ್‌ ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಕಾರ್ಯವನ್ನು ಸ್ವತಃ ಯುವ ಬ್ರಿಗೇಡ್‌ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರೇ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಂಚಗಂಗಾವಳಿ ನದಿ ಪಾತ್ರದಲ್ಲಿ ನದಿಗೆ ಕಸ ಎಸೆದು ಸಂಪೂರ್ಣ ಗಲೀಜಾಗಿತ್ತು. ಇದನ್ನು ಮನಗಂಡ ಯುವಬ್ರಿಗೇಡ್‌ ಕುಂದಾಪುರ ಘಟಕ ಪಂಚಗಂಗಾವಳಿ ನದಿ ಸ್ವಚ್ಛಗೊಳಿಸಬೇಕು ಎಂದು ನಾಲ್ಕೈದು ವಾರ ನದಿ ಸ್ವತ್ಛ ಮಾಡಿತು. ಇದಿಷ್ಟೇ ಕ್ರಮ ಸಾಲದು ಎಂದು ಮನೆ ಮನೆಗೆ ಭೇಟಿ ಕೊಟ್ಟು ನದಿ ಸ್ವತ್ಛವಾಗಿಡುವುದರ ಕುರಿತು, ನದಿಗೆ ಕಸ ಎಸೆಯದಂತೆ ಅರಿವು ಮೂಡಿಸಿತು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕಾರ್ಯಕರ್ತರ ಸ್ವಂತ ಹಣದಿಂದ ಕಸದ ಬುಟ್ಟಿ ಖರೀದಿಸಿ ಇಟ್ಟಿತು. ನದಿ ಪಾತ್ರದಲ್ಲಿ ಕಸ ಎಸೆಯದಂತೆ ನಾಮ ಫಲಕ ತಂದು ನದಿ ಪಾತ್ರದಲ್ಲಿ ಹಾಕಲಾಯಿತು. ಸತತ 10 ವಾರದಿಂದ ಸ್ವಚ್ಛ ಮಾಡಿದ ತೃಪ್ತಿ ಬ್ರಿಗೇಡ್‌ಗಿದೆ. ಇದನ್ನು ಮುಂದುವರಿಸುವ ಇರಾದೆಯೂ ಸಂಘಟನೆಗಿದೆ.

ಮೀನುಗಾರಿಕೆಗೆ ಸಂಕಷ್ಟ
ಸಾಂಪ್ರದಾಯಿಕ ಮೀನುಗಾರರು ಇಲ್ಲಿ ದೋಣಿಗಳ ಮೂಲಕ ಮೀನುಗಾರಿಕೆಗೆ ತೆರಳುತ್ತಾರೆ. ಸಂಗ್ರಹವಾದ ತ್ಯಾಜ್ಯದಿಂದ ನದಿ ನೀರೆಲ್ಲ ಕಲ್ಮಶವಾಗಿದ್ದು ನೀರಿನ ಬಣ್ಣವೇ ಬದಲಾಗಿದೆ. ಈ ಕೊಳಚೆ ನೀರಿನಲ್ಲಿ ದೋಣಿ ಇಟ್ಟು ಮೀನುಗಾರಿಕೆಗೆ ತೆರಳಬೇಕಾದ ಅನಿವಾರ್ಯ ಇದೆ. ಸಾಂಕ್ರಾಮಿಕ ರೋಗ ಭೀತಿಯೂ ಇದೆ. ಮದ್ಯದ ಬಾಟಲಿಗಳ ರಾಶಿಯೂ ಆಗಾಗ ಕಂಡು ಬರುತ್ತದೆ. ಮದ್ಯದ ಬಾಟಲಿಗಳ ಸಂಖ್ಯೆ ಹೆಚ್ಚಾದಾಗ ಒಮ್ಮೆ ಮದ್ಯದ ಬಾಟಲಿಗಳ ಕೋಟೆಯನ್ನೇ ಇಲ್ಲಿ ಕಟ್ಟಲಾಗಿದ್ದುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ತ್ಯಾಜ್ಯದ ವಾಸನೆ, ಬಾಟಲಿಗಳು ಕಾಲಿಗೆ ತಾಗಿದರೆ ಉಂಟಾಗಬಹುದಾದ ಅಪಾಯ, ಕಲ್ಮಶ ನೀರಿನಿಂದ ಮೀನುಗಳ ಮೇಲೆ ಉಂಟಾಗಬಹುದಾದ ಅಪಾಯದ ಕುರಿತು ಮೀನುಗಾರರು ಚಿಂತಿತರಾಗಿದ್ದಾರೆ.

ಶುಚಿಯಾಗಲಿದೆ
ಆ ಪರಿಸರದಲ್ಲಿ ತ್ಯಾಜ್ಯ ತಂದು ರಾಶಿ ಹಾಕಿ ಅಲ್ಲಿಂದ ಕಂದಾವರ ತ್ಯಾಜ್ಯ ವಿಲೇ ಘಟಕಕ್ಕೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ನಾವಿಟ್ಟ ಕಂಟೈನರನ್ನು ಕೆಲವರು ತಪ್ಪಾಗಿ ಭಾವಿಸಿ ನಮಗೆ ಅರಿವಿಲ್ಲದಂತೆ ಪುರಸಭೆ ವ್ಯಾಪ್ತಿಯಲ್ಲದವರೂ ತಂದು ಸುರಿಯುತ್ತಿರುವ ದೂರು ನಮಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಬಸ್‌ ಪಾರ್ಕಿಂಗ್‌ಗೆ ವ್ಯವಸ್ಥೆಯಾಗಲಿದ್ದು ಆಗ ಸಮಸ್ಯೆ ನಿವಾರಣೆಯಾಗಲಿದೆ. ನದಿ ಬದಿ ತ್ಯಾಜ್ಯ ಎಸೆಯುವುದು ಕಡ್ಡಾಯ ನಿರ್ಬಂಧವಿದೆ. ಈ ಪರಿಸರ ಶುಚಿಯಾಗಲಿದೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3

Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗ‌ಳಿಂದ ಮಾಲಿನ್ಯ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.