ಸ್ವತ್ಛತೆಯ ಹಾದಿಯಲ್ಲಿ ಕ್ರಮಿಸಬೇಕಾದ ಪಥ ಬಹಳ ದೂರವಿದೆ
Team Udayavani, May 10, 2017, 11:39 AM IST
ಉಡುಪಿ: ಪೊಡವಿಗೊಡೆಯ ಶ್ರೀ ಕೃಷ್ಣನ ನಾಡು, ಸಾಂಸ್ಕೃತಿಕ ನಗರಿ, ಸುಶಿಕ್ಷಿತರ ಜಿಲ್ಲೆ ಎಂದೆಲ್ಲ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಉಡುಪಿ ನಗರವು ಸ್ವತ್ಛ ನಗರ ಸಮೀಕ್ಷೆಯಲ್ಲಿ ದೇಶಕ್ಕೆ 143ನೇ ಸ್ಥಾನ, ರಾಜ್ಯಕ್ಕೆ 3ನೇ ಸ್ಥಾನ ಹಾಗೂ ನಗರಸಭೆಗಳ ಯಾದಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಇತರೆ ನಗರಗಳಿಗಿಂತ ಸ್ವಲ್ಪಮಟ್ಟಿಗಿನ ಮೇಲ್ಪಂಕ್ತಿಯ ಸ್ಥಾನದಲ್ಲಿದ್ದರೂ ಸ್ವತ್ಛತೆಯ ಹಾದಿಯಲ್ಲಿ ಕ್ರಮಿಸಬೇಕಾದ ಹಾದಿ ಇನ್ನೂ ದೂರವಿದೆ ಎನ್ನುವುದು ಮಾತ್ರ ಸತ್ಯ.
ನಮ್ಮ ಪಾಲು ಎಷ್ಟಿದೆ
ನಗರದ ಚರಂಡಿ ಸಮಸ್ಯೆ, ಬಸ್ ನಿಲ್ದಾಣಗಳಲ್ಲಿ ಗಲೀಜು, ಅಲ್ಲಲ್ಲಿ ಕಂಡುಬರುವ ಕಸದ ರಾಶಿ ಕಂಡಾಗಲೆಲ್ಲ ನಾವು ನಗರಸಭೆಯನ್ನೋ, ಜನಪ್ರತಿನಿಧಿಗಳನ್ನೋ ಅಥವಾ ಅಧಿಕಾರಿಗಳನ್ನೋ ದೂಷಿಸುತ್ತೇವೆ. ಆದರೆ ಈ ಸಮಸ್ಯೆ ಉದ್ಭವವಾಗಲು ನಮ್ಮ ಪಾಲು ಎಷ್ಟಿದೆ ಅನ್ನುವುದನ್ನು ಮಾತ್ರ ಯಾವತ್ತೂ ಯೋಚಿಸುವುದೇ ಇಲ್ಲ. ಸ್ವತ್ಛ ನಗರ, ಸುಂದರ ನಗರಿ ಎನಿಸಿಕೊಳ್ಳಲು ಸ್ಥಳೀಯಾಡಳಿತದ ಪಾಲು ಎಷ್ಟು ಇದೆಯೋ ಅದಕ್ಕಿಂತಲೂ ಹೆಚ್ಚಿನ ಹೊಣೆಗಾರಿಕೆ ನಮ್ಮ ಮೇಲಿದೆ ಅನ್ನುವುದನ್ನು ಮರೆಯಬಾರದು.
ಮುಂಚೂಣಿಯಲ್ಲಿ
ಮನೆಯಲ್ಲಿ ಕಸವನ್ನೆಲ್ಲ ಕಸದ ಬುಟ್ಟಿಗೆ ಹಾಕಬೇಕು ಎನ್ನುವ ಕಲ್ಪನೆ ನಮ್ಮಲ್ಲಿದೆ. ಆದರೆ ಎಲ್ಲೋ ರಸ್ತೆ ಬದಿಯಲ್ಲೋ, ಅಂಗಡಿಯಲ್ಲೋ ಏನಾದರೂ ತಿಂದು ಬಿಸಾಡುವ ಕಸವನ್ನು ಬೀದಿಯಲ್ಲಿ ಎಸೆಯಬಾರದು. ಕಸದ ಬುಟ್ಟಿಗೆ ಮಾತ್ರ ಹಾಕಬೇಕು ಎನ್ನುವ ಸಾಮಾಜಿಕ ಕಳಕಳಿ, ಹೊಣೆಗಾರಿಕೆ ನಮಗಿದ್ದರೆ ಇಂದು ಉಡುಪಿ ಕೂಡ ಇಂದೋರ್, ಭೋಪಾಲ್, ವಿಶಾಖಪಟ್ಟಣದಂತಹ ನಗರಗಳಿಗಿಂತ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬಹುದಿತ್ತು.
ಮೋದಿಯ ಮಹತ್ವಾಕಾಂಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವತ್ಛ ಭಾರತ ಅಭಿಯಾನ ಆರಂಭಿಸಿದ ಆನಂತರ ಎಲ್ಲರೂ ಅಲ್ಲದಿದ್ದರೂ ಕೆಲವರಿಗಾರದರೂ ಸ್ವತ್ಛತೆಯ ಬಗೆಗಿನ ಅರಿವು ಹೆಚ್ಚಾಗಿದೆ. ಈಗ ಅಲ್ಲಲ್ಲಿ ಕೆಲವು ಸಂಘ, ಸಂಸ್ಥೆಗಳಿಂದ ಸ್ವತ್ಛತಾ ಅಭಿಯಾನ ನಡೆಯುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ.
ಅರಿವಿನ ಅಗತ್ಯ
ಎಲ್ಲೆಂದರಲ್ಲಿ ಕಸ ಬಿಸಾಡುವುದರ ಬಗ್ಗೆ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪರಿಸರಾಸ್ತಕರು ಮಾಡುವ ಹೋರಾಟದಿಂದಾಗಲಿ ಈ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಸ್ವತ್ಛತೆ ಕುರಿತು ಒಂದಿಷ್ಟು ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಶಿಕ್ಷಣ, ಅಭಿಯಾನವನ್ನೆಲ್ಲ ನಡೆಸುವ ಮೂಲಕ ಜನರನ್ನು ಜಾಗೃತಿಗೊಳಿಸುವ ಕೆಲಸ ಇನ್ನಷ್ಟು ಹೆಚ್ಚಾಗಬೇಕಿದೆ.
ಯಾಕೆ ಮಾಡಬಾರದು?
ಕಸ, ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಕಂಡ ಕಂಡಲ್ಲಿ ನೀರಿಗೆ ಎಸೆಯೋ ಬದಲು ಅದನ್ನು ಕಸದ ಬುಟ್ಟಿಗೆ ಹಾಕುವ ಕೆಲಸ ಯಾಕೆ ಮಾಡಬಾರದು ?
ಪ್ಲಾಸ್ಟಿಕ್ ನಿಷೇಧವನ್ನು ಸರಕಾರವೇ ಮಾಡಬೇಕಂತಿಲ್ಲ.
ನಮ್ಮ ಪರಿಸರಕ್ಕೆ ಹಾನಿಕರವಾದ ಪ್ಲಾಸ್ಟಿಕ್‌ನ್ನು ದೂರವಿಡಲು ನಾವು ಯಾಕೆ ಪಣ ತೊಡಬಾರದು? ಸಂತೆಗೋ, ಅಂಗಡಿಗೋ ದಿನಸಿ ಖರೀದಿಸಲು ಮನೆಯಿಂದ ಹೊರಡುವಾಗಲೇ ಬಟ್ಟೆಯ ಬ್ಯಾಗ್ ಅಥವಾ ಗೋಣಿಚೀಲವನ್ನು ಯಾಕೆ ಕೊಂಡು ಹೋಗಬಾರದು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳ ಬೇಕಾದವರು ಕೂಡ ನಾವೇ ಎನ್ನುವುದನ್ನು ಮರೆಯಬಾರದು.
ಮನಸ್ಸು ಮಾಡಬೇಕಷ್ಟೇ
ಹೇಳಲು ಇದೆಲ್ಲ ಸಣ್ಣ ಸಣ್ಣ ವಿಷಯವಾದರೂ ಇದನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ದೊಡ್ಡ ಮನಸ್ಸು ಮಾಡಬೇಕಷ್ಟೇ. ದೇವರು ನಮಗೆಲ್ಲ ಈ ಸುಂದರ ಪ್ರಕೃತಿಯನ್ನು ಕರುಣಿಸಿದ್ದಾನೆ. ಅದನ್ನು ಅಷ್ಟೇ ಸ್ವತ್ಛ, ಸುಂದರವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ.
ವಾರ್ಡ್ ವಾರು ಅಭಿಯಾನ
ಉಡುಪಿಯು ಈ ಪಟ್ಟಿಯಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳಲು ಇನ್ನು ಸಾಕಷ್ಟು ಕೆಲಸಗಳಾಗಬೇಕಿದೆ. ಸ್ವತ್ಛತೆಯ ಬಗೆಗೆ ಅರಿವು ಜನರಲ್ಲಿ ಇನ್ನೂ ಹೆಚ್ಚಾಗಬೇಕಿದೆ. ಘನತ್ಯಾಜ್ಯ ವಿಂಗಡಣೆಗೆ ಕ್ರಮ, ಅದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ. ಒಟ್ಟಾರೆ ನಗರವನ್ನು ಸ್ವತ್ಛ ಮಾಡುವ ನಿಟ್ಟಿನಲ್ಲಿ ಸುಮಾರು ಹಂತಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಒಂದೊಂದೇ ವಾರ್ಡ್‌ವಾರು ಈ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನಗರಸಭೆ ಪರಿಸರ ಅಭಿಯಂತರ ಬಿ. ರಾಘವೇಂದ್ರ ಹೇಳಿದರು.
ಮಾನದಂಡವೇನು?
ಸ್ವತ್ಛ ಸವೇಕ್ಷಣೆ- 2017 ಎನ್ನುವ ಕಾರ್ಯಕ್ರಮದಡಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳನ್ನು ಆಯ್ಕೆ ಮಾಡಿ ಅವುಗಳಿಗೆ 2000 ಅಂಕಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಲ್ಲ ನಗರಗಳಿಗೂ ಶೌಚಮುಕ್ತ ನಗರ, ಘನತ್ಯಾಜ್ಯ ನಿರ್ವಹಣೆ, ತಪಾಸಣೆ, ಜನರ ಸ್ಪಂದನೆಯನ್ನೆಲ್ಲ ಆಧಾರವಾಗಿಟ್ಟುಕೊಂಡು ಅಂಕಗಳನ್ನು ನೀಡಲಾಗಿದೆ. ಈ ಯಾದಿಯಲ್ಲಿ ಮೈಸೂರು 1743.36 ಅಂಕ, ಮಂಗಳೂರು 1349.99 ಅಂಕ ಹಾಗೂ ಉಡುಪಿ 1122.61 ಅಂಕಗಳನ್ನು ಪಡೆದಿದೆ.
ರಾಜ್ಯದಲ್ಲಿ 3ನೇ ಸ್ಥಾನ
ಸ್ವತ್ಛ ಸರ್ವೇಕ್ಷಣ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ದೇಶದ 434 ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಕಳೆದ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯದ 27 ನಗರಗಳು ಹಾಗೂ ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಆ ಪೈಕಿ ಮೈಸೂರು ದೇಶಕ್ಕೆ 5ನೇ, ರಾಜ್ಯದ ಅಗ್ರಸ್ಥಾನಿ, ಮಂಗಳೂರು ದೇಶಕ್ಕೆ 63, ರಾಜ್ಯಕ್ಕೆ 2ನೇ ಸ್ಥಾನಿಯಾದರೆ ಉಡುಪಿ ದೇಶಕ್ಕೆ 143 ಹಾಗೂ ರಾಜ್ಯದಲ್ಲಿ 3ನೇ ಸ್ಥಾನ ಪಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.