90 ವರ್ಷದ ಇಟ್ಟಮೇರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ
Team Udayavani, Jun 15, 2018, 6:20 AM IST
ಬೆಳ್ಮಣ್: 90 ವರ್ಷಗಳ ಇತಿಹಾಸವುಳ್ಳ ಬೆಳ್ಮಣ್ ಇಟ್ಟಮೇರಿ ಲಿಟ್ಲ ಫವರ್ ಹಿರಿಯ ಪ್ರಾಥಮಿಕ ಶಾಲೆಗೆ ಈ ಶೈಕ್ಷಣಿಕ ವರ್ಷದಿಂದ ಬೀಗ ಹಾಕಲಾಗಿದೆ.
22 ವಿದ್ಯಾರ್ಥಿಗಳಿದ್ದರು
ಈ ಶಾಲೆಯಲ್ಲಿ ಕಳೆದ ಸಾಲಿನಲ್ಲಿ 32 ವಿದ್ಯಾರ್ಥಿಗಳಿದ್ದು 10 ಮಂದಿ 7ನೇ ತರಗತಿಯಿಂದ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಈ ಬಾರಿ 22 ವಿದ್ಯಾರ್ಥಿಗಳು ಇಲ್ಲಿಯೇ ಶಾಲೆ ಮುಂದುವರಿಸುವ ಯೋಚನೆಯಲ್ಲಿದ್ದರು. ಆದರೆ ಶಾಲೆಯಲ್ಲಿನ ಶಿಕ್ಷಕರ ಕೊರತೆಯಿಂದಾಗಿ ಶಾಲೆಗೆ ಬೀಗ ಬಿದ್ದಿದೆ. 2012ರಿಂದ ಈ ಶಾಲೆಯ ಏಕೋಪಾಧ್ಯಾಯರಾಗಿ ಮೆಟಿಲ್ಡಾ ಮಿನೇಜಸ್ ಇದ್ದರು. ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೀಡದೇ ಇರುವುದರಿಂದ ಈ ಶಾಲೆಗೆ ದುರ್ಗತಿ ಬಂದಿತ್ತು. ಆದರೂ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು, ದಾನಿಗಳ ನೆರವಿನಿಂದ ಗೌರವ ಶಿಕ್ಷಕರ ನೇಮಕವಾಗಿ ಪಾಠ ನಡೆದಿತ್ತು.
ಸ್ಥಾಪನೆ
1929ರಲ್ಲಿ ಮಂಗಳೂರಿನ ಕೆಥೋಲಿಕ್ ಬೋರ್ಡ್‌ನ ಅಂದಿನ ಸಂಚಾಲಕರಾಗಿದ್ದ ರೆ|ಫಾ| ಡೆನ್ನಿಸ್ ಲೂವಿಸ್‌ರಿಂದ ಪ್ರಾರಂಭಗೊಂಡ ಈ ಶಾಲೆ ಬೆಳ್ಮಣ್‌ನ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿತ್ತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ, ವೈದ್ಯರಾಗಿ, ಎಂಜಿನಿಯರ್‌ರಾಗಿ, ವರ್ತಕರಾಗಿ, ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದಾರೆ
ಅಮೃತ ಮಹೋತ್ಸವ ಆಚರಿಸಿದ ಶಾಲೆ
2007ರಲ್ಲಿ ಈ ಶಾಲೆ ತನ್ನ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತ್ತು. ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳು, ಆಡಳಿತ ಮಂಡಳಿ ಅಮೃತ ಮಹೋತ್ಸವ ಕಾರ್ಯಕ್ರಮದ ಹಿಂದೆ ಶ್ರಮಿಸಿತ್ತು. ಇನ್ನು ಕೇವಲ 10 ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಬೇಕಿದ್ದ ಈ ಶಾಲೆ ಮುಚ್ಚಿದ್ದು ಶಿಕ್ಷಣ ಪ್ರೇಮಿಗಳಿಗೆ ಬೇಸರ ತಂದಿದೆ.
ಕೀಳರಿಮೆಯೇ ಕಾರಣ
ಶಾಲೆ ಉಳಿಸಲು ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು, ಊರ ದಾನಿಗಳು ಭಾರೀ ಪ್ರಯತ್ನ ನಡೆಸಿದ್ದಾರೆ. ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ, ಆಂಗ್ಲ ಮಾಧ್ಯಮದತ್ತ ಹೆತ್ತವರ ಒಲವು ಹಳೆಯ ಶಾಲೆಗಳ ಅವನತಿಗೆ ಕಾರಣವಾಗುತ್ತಿದೆ.
– ಮೆಟಿಲ್ಡಾ ಮಿನೇಜಸ್, ಮುಖ್ಯ ಶಿಕ್ಷಕಿ
ಮೌಖೀಕ ಸೂಚನೆಯಷ್ಟೇ
ಶಾಲೆ ಮುಚ್ಚಿದ ಬಗ್ಗೆ ಆಡಳಿತ ಮಂಡಳಿಯ ಪತ್ರ ಇಲಾಖೆಗೆ ಬಂದಿಲ್ಲ, ಮೌಖೀಕ ಸೂಚನೆಯಷ್ಟೇ ಲಭಿಸಿದೆ.
– ಭಾಸ್ಕರ್ ಎಸ್., ಕಾರ್ಕಳ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಮೃದು ಧೋರಣೆ ಸಲ್ಲದು
ಭಾವನಾತ್ಮ ಸಂಬಂಧವುಳ್ಳ ನಮ್ಮೂರ ಹೆಮ್ಮೆಯ ಶಾಲೆ ಮುಚ್ಚುವ ಬಗ್ಗೆ ಬೇಸರ ಇದೆ. ಇಲಾಖೆಯ ಕೆಲವು ನಿಲುವುಗಳಿಂದಾಗಿ ಇಂತಹ ಶಾಲೆಗಳು ಮುಚ್ಚುತ್ತಿವೆ. ಸರಕಾರ ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ತೋರುತ್ತಿರುವ ಮೃದು ಧೋರಣೆ, ಅವುಗಳಿಗೆ ಅನುಮತಿ ನೀಡುವ ಬಗ್ಗೆ ಯೋಚಿಸಬೇಕಾಗಿದೆ.
– ಶಿವ, ಹಳೆವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.