ಕಂಚುಗೋಡು: ಪೈಪ್‌ಲೈನ್ ಕಾಮಗಾರಿ ಆರಂಭ
Team Udayavani, May 18, 2019, 6:00 AM IST
ಕಂಚುಗೋಡಿನಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು.
ತ್ರಾಸಿ: ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಕಂಚುಗೋಡು, ಭಗತ್‌ನಗರ, ಖಾರ್ವಿಕೇರಿಯಲ್ಲಿ ಕುಡಿ ಯುವ ನೀರಿನ ಪೂರೈಕೆಗೆ ಈಗ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮೋವಾಡಿ ಕ್ರಾಸ್‌ನಿಂದ ಈ ಬೋರ್‌ವೆಲ್ ನೀರನ್ನು ಈ ಭಾಗಕ್ಕೆ ನಳ್ಳಿ ಮೂಲಕ ನೀರು ಪೂರೈಸುವ ಕುರಿತಂತೆ ಕಾಮಗಾರಿ ಆರಂಭಗೊಂಡಿದೆ.
ಇಲ್ಲಿನ ಹೊಸಾಡು ಗ್ರಾಮ ಪಂಚಾಯತ್ ಆಡಳಿತವು ಶಾಸಕರು, ಜಿ.ಪಂ. ಹಾಗೂ ತಾ.ಪಂ. ಅನುದಾನ ಬಳಸಿ ಕೊಂಡು ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾಗಿದೆ. ಈಗಾಗಲೇ ಸುಮಾರು 8 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಸಲಾಗುತ್ತಿದ್ದು, ಇನ್ನು ಅಗತ್ಯವಿರುವ 3 ಲಕ್ಷ ರೂ. ಕಾಮಗಾರಿಗಾಗಿ ತಾ.ಪಂ.ಗೆ ಟಾಸ್ಕ್ಫೋರ್ಸ್ ಅನುದಾನಕ್ಕೆ ಬೇಡಿಕೆ ಸಲ್ಲಿಸಿದೆ.
ಇಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪಂಚಾಯತ್ ವತಿಯಿಂದ 2 ದಿನಕ್ಕೊಮ್ಮೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಇಲ್ಲಿರುವ ನೂರಾರು ಮನೆಗಳಿಗೆ ಇದು ಸಾಕಾಗುವುದಿಲ್ಲ. ಇಲ್ಲಿರುವ 50-60 ಮನೆಗಳ ಜನ ಕಂಚುಗೋಡಿನ ಶಾಲೆಯ ನೀರನ್ನೇ ಆಶ್ರಯಿಸಿದ್ದಾರೆ.
ಈ ಬಾರಿಯೇ ಮೋವಾಡಿ ಕ್ರಾಸ್‌ನಿಂದ ಪೈಪ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಅಲ್ಲಿನ ಜನರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಈಗಾಗಲೇ ಹೆಚ್ಚುವರಿ ಅನುದಾನಕ್ಕಾಗಿ ತಾ.ಪಂ.ಗೆ ಕೂಡ ಮನವಿ ಸಲ್ಲಿಸಿದ್ದೇವೆ ಎಂದು ಹೊಸಾಡು ಗ್ರಾ.ಪಂ. ಪಿಡಿಒ ಪಾರ್ವತಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪತ್ರಿಕೆ ವರದಿ
ಕಂಚುಗೋಡು,ಭಗತ್‌ನಗರ,ಖಾರ್ವಿಕೇರಿಯ ಜನರ ನೀರಿನ ಬವಣೆ ಕುರಿತು ಅಲ್ಲಿಗೆ ಭೇಟಿ ಕೊಟ್ಟು “ಉದಯವಾಣಿ’ಯು ಎ. 28ರಂದು “ಜೀವಜಲ’ ಅಂಕಣದಲ್ಲಿ ಸಾಕ್ಷಾತ್ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.