ಪಾಕ್ ಅಲ್ಪಸಂಖ್ಯಾಕರ ದಯನೀಯ ಸ್ಥಿತಿ
Team Udayavani, Jul 22, 2019, 5:46 AM IST
ಅಮೆರಿಕ ಕಾಂಗ್ರೆಸ್‌ನ 10 ಮಂದಿ ಸದಸ್ಯರ ವರದಿ ಟ್ರಂಪ್‌ಗೆ ಸಲ್ಲಿಕೆಮಣಿಪಾಲ: ಭಾರತ ಮತ್ತು ಪಾಕಿಸ್ಥಾನದ ಗಡಿ ಸಮಸ್ಯೆಯಷ್ಟೇ ಭೀಕರ ಪರಿಸ್ಥಿತಿ ಅಲ್ಲಿನ ಅಲ್ಪಸಂಖ್ಯಾಕರದ್ದು. ಅಲ್ಲಿ ಅಲ್ಪಸಂಖ್ಯಾಕರಾಗಿ ವಾಸಿಸುತ್ತಿರುವ ಹಿಂದೂಗಳು ಮತ್ತು ಕ್ರಿಶ್ಚಿಯನ್ ಸಮುದಾಯದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಒಂದಲ್ಲ ಒಂದು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಈ ವಿಷಯವನ್ನು ಅಮೆರಿಕ ಕಾಂಗ್ರೆಸ್‌ನ ಸದಸ್ಯರ ವರದಿ ಬಹಿರಂಗಪಡಿಸಿದೆ.
ಟ್ರಂಪ್‌ಗೆ ಸಲ್ಲಿಕೆಯಾದ ವರದಿ
10 ಮಂದಿಯನ್ನು ಒಳಗೊಂಡ ಸಮಿತಿ ಸದಸ್ಯರು ಪಾಕಿಸ್ಥಾನದಲ್ಲಿ ವಾಸಿಸುತ್ತಿರುವ ಮುಸ್ಲಿಂಮೇತರ ಸಮುದಾಯದ ಜನರ ಪರಿಸ್ಥಿತಿ ಯನ್ನು ಅಧ್ಯಯನ ಮಾಡಿದ್ದಾರೆ. ಇದೀಗ ತಮ್ಮ ಅಧ್ಯಯನದ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ್ದು, ಕ್ರಮಕ್ಕಾಗಿ ನಿವೇದಿಸಿ ಕೊಂಡಿದ್ದಾರೆ.
ಇಂದು ಟ್ರಂಪ್-ಖಾನ್ ಭೇಟಿ
ಪಾಕ್ ಪ್ರಧಾನಿ ಜುಲೈ 22ರಂದು ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭ ಅಮೆರಿಕ ಮತ್ತು ಪಾಕಿಸ್ಥಾನ ಅಭಿವೃದ್ಧಿ ವಿಷಯಗಳು ಚರ್ಚೆಗೆ ಬರಲಿವೆ. ಮಾನವ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಮೊದಲಾದ ವಿಷಯಗಳು ಪ್ರಸ್ತಾವನೆಗೊಳ್ಳುವ ಸಾಧ್ಯತೆ ಇದೆ.
30 ಬಿಲಿಯನ್ ಡಾಲರ್ ನೆರವು !
2001ರಿಂದ ಅಮೆರಿಕ ಸುಮಾರು 30 ಬಿಲಯನ್ ಡಾಲರ್ ನೆರವನ್ನು ವಿವಿಧ ಕಾರ್ಯಕ್ರಮಗಳಿಗಾಗಿ ಪಾಕಿಸ್ಥಾನಕ್ಕೆ ನೀಡಲಾಗಿತ್ತು. ಇದರಲ್ಲಿ ಅಲ್ಲಿನ ಸಾಮಾಜಿಕ ಜನಜೀವನವನ್ನು ಸುಧಾರಿಸುವ ಉದ್ದೇಶ ಸೇರಿತ್ತು. ಅವುಗಳು ಸರಿಯಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಟ್ರಂಪ್ ಸರಕಾರ ಪಾಕಿಸ್ಥಾನವನ್ನು ಪ್ರಶ್ನಿಸಲಿದೆ ಎಂದು ಅಮೆರಿಕ ಮಾಧ್ಯಮಗಳು ವಿಶ್ಲೇಷಿಸಿವೆ. ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಹೇಳಿದೆ.
ಮಾನವ ಹಕ್ಕುಗಳ ಉಲ್ಲಂಘನೆ!
ಸಮಿತಿಯ ವರದಿ ಪ್ರಕಾರ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 70 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಪ್ರತಿದಿನ ಭಯದ ಕರಿ ನೆರಳಿ ನಲ್ಲೇ ವಾಸಿಸುವಂತಾಗಿದೆ. ಅಲ್ಲಿನ ಬಹುಸಂಖ್ಯಾಕ ಮುಸ್ಲಿಂ ಸಮು ದಾಯದ ಜನರು ಹಿಂದೂಗಳ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಯೋಗ್ಯವಾದ ಆರೋಗ್ಯ
ಅಮೆರಿಕ ಇದುವರೆಗೆ 283 ಮಿಲಿಯನ್ ಡಾಲರ್ ಅನ್ನು ಆರೋಗ್ಯ ರಕ್ಷಣೆಗಾಗಿ ಪಾಕ್‌ಗೆ ನೀಡಿತ್ತು. ಆದರೆ ಅದುಸರಿಯಾಗಿ ಬಳಕೆಯಾಗಿಲ್ಲ ಎಂಬುದು ಅಮೆರಿಕದ ವಾದ. ಸಿಂಧ್ ಪ್ರಾಂತ್ಯದ ಒಂದು ನಗರದಲ್ಲಿ 681 ಎಚ್ಐವಿ ಸೋಂಕಿತರು ವರ್ಷದ ಹಿಂದೆ ಪತ್ತೆಯಾಗಿದ್ದಾರೆ. ಅವರಲ್ಲಿ 537 ಮಕ್ಕಳು.
ಮತಾಂತರದ ಕರಿ ನೆರಳು
ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳನ್ನು ಇಸ್ಲಾಂ ಸಮುದಾಯಕ್ಕೆ ಪರಿವರ್ತಿ ಸಲಾಗುತ್ತದೆ. ಪ್ರತಿ ದಿನ 3 ಹೆಣ್ಣು ಮಕ್ಕಳು ಸಿಂಧ್ ಪ್ರಾಂತ್ಯದಿಂದ ಕಿಡ್ನ್ಯಾಪ್ ಆಗುತ್ತಿದ್ದಾರೆ. ಈ ರೀತಿ ಅಪಹರಣಕ್ಕೆ ಒಳಗಾದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂಬ ಆತಂಕ ಕಾರಿ ವಿಷಯವನ್ನು ಅಮೆರಿಕ ಬಹಿರಂಗಪಡಿಸಿದೆ.
ವರದಿ ಆಶಯ ಏನು ?
ಅಮೆರಿಕ ನೀಡಿದ ಅನುದಾನ ಯಾವ ರೀತಿ ಬಳಕೆಯಾಗಿದೆ ಎಂಬು ದನ್ನು ಪರಿಶೀಲಿಸುವ ಸಲುವಾಗಿ 10 ಜನರ ತಂಡ ಭೇಟಿ ಕೊಟ್ಟಿತ್ತು. ಆದರೆ ಪಾಕ್ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ತಮ್ಮನ್ನು ಭೇಟಿಯಾಗುವ ಪಾಕ್ ಅಧ್ಯಕ್ಷರ ಬಳಿ ಚರ್ಚೆ ನಡೆಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.