ನಾಗರಿಕತೆಯ ಕುರುಹುಗಳಲ್ಲಿ ಮಣ್ಣಿನ ಮಡಕೆಯ ಪಾತ್ರ ಅಗಾಧ


Team Udayavani, May 10, 2017, 11:42 AM IST

madake.jpg

ತೆಕ್ಕಟ್ಟೆ: ಮಾನವನ ಸಂಸ್ಕೃತಿಯ ಹುಟ್ಟಿನೊಂದಿಗೆ ಬೆಳೆದು ಬಂದಿರುವ ಮಣ್ಣಿನಿಂದ ಮಾಡಲ್ಪಟ್ಟ ಭಾರತೀಯ ಎಲ್ಲ ನಾಗರೀಕತೆಯ ಕುರುಹುಗಳಲ್ಲಿ ಮಡಕೆಯ ಪಾತ್ರ ಅಗಾಧವಾದುದು.

ಜಿಲ್ಲೆಯತ್ತ ಆಗಮನ
ಕರಾವಳಿ ಕರ್ನಾಟಕದಲ್ಲಿ ಮಡಕೆ ತಯಾರಿಸುವ ಕಲೆಯು ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿದ್ದು, ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ. ಆದರೆ ಬದಲಾದ ವೇಗದ ಬದುಕಿನಲ್ಲಿ  ಇಂತಹ ಗ್ರಾಮೀಣ ಕಲೆಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ  ಕರಾವಳಿ ಗ್ರಾಮದಲ್ಲಿನ  ಪ್ರತಿ ಮನೆ ಮನೆಗೆ  ಹೊರ ರಾಜ್ಯಗಳಿಂದ ಮಣ್ಣಿನ ಮಡಕೆಯ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಜಿಲ್ಲೆಯತ್ತ ಆಗಮಿಸುತ್ತಿದ್ದು  ಇದೀಗ  ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಾಗ ತೊಡಗಿದೆ.

ಹೆಚ್ಚಿದ ಬೇಡಿಕೆ 
ಕೇರಳದ ತಿರುವನಂತಪುರದಿಂದ  ಕರಾವಳಿ ಜಿಲ್ಲೆಗಳ ಗ್ರಾಮಗಳೆಡೆಗೆ ಈ ಆವಿಮಣ್ಣಿನಿಂದ  ರಚಿಸಿದ ವಿವಿಧ ವಿನ್ಯಾಸದಲ್ಲಿ  ಮಡಕೆಗಳನ್ನು ತಲೆಯ ಮೇಲಿರಿಸಿಕೊಂಡು ಬಂದಾಕ್ಷಣವೇ ಈ ಮಣ್ಣಿನ ಮಡಕೆಯನ್ನು ಕೇಳಿ ಪಡೆಯುವುದು ಒಂದೆಡೆಯಾದರೆ  ಅಪರೂಪವಾಗುತ್ತಿರುವ  ಆಕರ್ಷಕವಾದ ಮಣ್ಣಿನ ಮಡಕೆ ಬೇಡಿಕೆಗೆ ಸರಿಯಾಗಿ ಪೂರೈಸುವುದೆ ಕಷ್ಟ ಸಾಧ್ಯವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ .

ಮಡಕೆಯ ಉಪಯೋಗ  
ಹಲವು ದಶಕಗಳ ಹಿಂದೆ ನಮ್ಮ  ಗ್ರಾಮೀಣ ಬದುಕು ಮತ್ತು ಭಾವನೆಗಳಿಗೆ ಪೂರಕವಾಗಿ ಇಂತಹ ಮಣ್ಣಿನ ಮಡಕೆಗಳ ಬಳಕೆಯಾಗುತ್ತಿದ್ದು  ದವಸ ಧಾನ್ಯಗಳ  ಶೇಖರಣೆಯಿಂದ  ಹಿಡಿದು ಆಹಾರ ಪದಾರ್ಥಗಳನ್ನು ಬೇಯಿಸಲು ಬಳಸುವ ಕಾಲವೊಂದಿತ್ತು.  ಆದರೆ ಬದಲಾದ ವೇಗದ ಬದುಕಿನಲ್ಲಿ ಪಾಶ್ಚಿಮಾತ್ಯ ಫಾಸ್ಟ್‌ ಫುಡ್‌ ಸಂಸ್ಕೃತಿಗಳ ಪ್ರಭಾವದಿಂದಾಗಿ ಇಂತಹ ಪರಿಸರ ಸ್ನೇಹಿ ಮಡಕೆಗಳ ಬಳಕೆಯ ಬಗ್ಗೆ ಆಸಕ್ತ ಹೀನವಾಗುತ್ತಿರುವ ಯುವ ಸಮುದಾಯಕ್ಕೆ ಮಡಕೆಯ ಉಪಯೋಗದ ಬಗೆಗಿನ ಅರಿವು ಮೂಡಿಸುವ ಮಹತ್ವ ಕಾರ್ಯವಾಗಬೇಕಾಗಿದೆ.

ಗ್ರಾಮೀಣ ಭಾಗದ ಗ್ರಾಹಕರಿಗೆ ಕೈಗೆಟಕುವ ದರದಲ್ಲಿಯೇ ಕೇರಳದ ಈ ಮಣ್ಣಿನ ಮಡಕೆಯನ್ನು  ನೀಡುತ್ತಿದ್ದು  ಬೇಡಿಕೆಗೆ ಸರಿಯಾಗಿ ಪೂರೈಸಲು ಕಷ್ಟಸಾಧ್ಯವಾಗಿದೆ . ಈಗಾಗಲೇ ಉಡುಪಿ ಜಿಲ್ಲೆಯ ಒಂದೆಡೆಯಲ್ಲಿ ಅಪಾರ ಪ್ರಮಾಣದ  ವಿವಿಧ ವಿನ್ಯಾಸದ ಆವಿ ಮಣ್ಣಿನಿಂದ ರಚಿಸಿರುವ ಮಡಕೆಗಳನ್ನು  ಶೇಖರಣೆ ಮಾಡಲಾಗಿದ್ದು,  ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಳೆದ  ಮೂವತ್ತು ದಿನಗಳಿಂದ ಹತ್ತು ಮಂದಿಯ ತಂಡ ಗ್ರಾಮದೆಲ್ಲೆಡೆ ವ್ಯಾಪಾರಕ್ಕಾಗಿ ಸಂಚರಿಸುತ್ತಿದೆ.
– ಪೌಲ್‌ ರಾಜ್‌  ತಿರುವನಂತಪುರಂ, ಮಡಕೆ ವ್ಯಾಪಾರಸ್ಥ ರು.

ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ವಾಗಿ  ಗುಡಿಕೈಗಾರಿಕೆಯನ್ನೇ  ನಂಬಿ ಜೀವನ ನಿರ್ವಹಿಸುತ್ತಿದ್ದ ಅದೆಷ್ಟೋ ಗ್ರಾಮೀಣ ಕುಂಬಾರ ಸಮುದಾಯದವರ ಕಲೆ ಆಧುನಿಕತೆಯ ಭರಾಟೆಗೆ ಸಿಲುಕಿ ನಲುಗಿ ಹೋಗಿದೆ . ನಶಿಸುತ್ತಿರುವ ಗುಡಿಕೈಗಾರಿಕೆಯ ಉಳಿವಿಗಾಗಿ ಸರಕಾರ ಕೆಲವು ಮಹತ್ವಾಕಾಂಕ್ಷಿ ಯೋಜನೆ ಗಳನ್ನು ರೂಪಿಸಿದ್ದು, ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಕಾರ್ಯವಾಗಬೇಕು.
– ಹರೀಶ್‌ ಕುಲಾಲ್‌ ಕೆದೂರು.
 ಅಧ್ಯಕ್ಷರು ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ.

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

1-swami-sm-bg

Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.