ಕಂಬಳ ಮಸೂದೆಗೆ ಶೀಘ್ರ ರಾಷ್ಟ್ರಪತಿ ಅಂಕಿತ: ಸದಾನಂದ ಗೌಡ ವಿಶ್ವಾಸ
Team Udayavani, Apr 18, 2017, 12:57 PM IST
ಉಡುಪಿ: ಕರಾವಳಿಯವರ ಬೇಡಿಕೆಯಾದ ಕಂಬಳ ಮಸೂದೆಗೆ ಶೀಘ್ರವೇ ರಾಷ್ಟ್ರಪತಿ ಅಂಕಿತ ಬೀಳಲಿದೆ. ಸಾರ್ವಜನಿಕ ಹಿತಾಸಕ್ತಿಗಳಿಗೆ ಮನ್ನಣೆ ಕೊಡುವ ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕುತ್ತಾರೆ ಎಂಬ ವಿಶ್ವಾಸ ಇದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾಳೆ ದಿಲ್ಲಿಗೆ ತೆರಳುತ್ತಿದ್ದು, ಎಲ್ಲವೂ ಸರಿಧಿಯಾಗಿದ್ದಲ್ಲಿ ಮಸೂದೆಯನ್ನು ಅದೇ ದಿನ ರಾಜಧಿಭವನಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದರು. ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿದ ಕಂಬಳ ಮಸೂದೆ ನಿಯಮಾವಳಿಗಳನ್ನು ಯಾರು ರೂಪಿಸಧಿಬೇಕು ಎಂಬುದು ಸ್ಪಷ್ಟವಾಗಿಲ್ಲ. ತಮಿಳುಧಿನಾಡಿನ ಜಲ್ಲಿಕಟ್ಟು ಸಂಬಂಧಿಸಿ ರಾಜ್ಯವೇ ನಿಯಮಾಧಿವಳಿಗಳನ್ನು ರೂಪಿಸಲಿದೆ ಎಂದು ಹೇಳಿಕೊಂಡಿದೆ. ಈ ಮಾದರಿಯಲ್ಲಿ ಕಂಬಳ ಮಸೂದೆಯಲ್ಲೂ ಕರ್ನಾಟಕ ಸರಕಾರ ಉಲ್ಲೇಖೀಸಬೇಕು ಎಂದು ಹಿಂದೆ ಸಚಿವಾಲಯ ಅಭಿಪ್ರಾಯಪಟ್ಟಿತ್ತು. ನಾನು ಗೃಹ ಸಚಿವರಿಗೆ ಈ ಬಗ್ಗೆ ತಿಳಿಸಿದಾಗ ಕೇಂದ್ರ ಮತ್ತು ರಾಜ್ಯ ಕಾನೂನು ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ನಡೆಸಿ ಇತ್ಯರ್ಥಗೊಳಿಸೋಣ. ಇಲ್ಲವಾದರೆ ಮತ್ತಷ್ಟು ವಿಳಂಬವಾಗುತ್ತದೆ ಎಂದು ಹೇಳಿ ಸಭೆಯನ್ನೂ ನಡೆಸಿದರು ಎಂದರು.
ಎತ್ತಿನಹೊಳೆ: ಮನವರಿಕೆಯಲ್ಲಿ ವಿಫಲ
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ ಉತ್ತರಿಸಬೇಕು. ನಾನು ಉತ್ತರಿಸುವುದಿಲ್ಲ ಎಂದ ಸಚಿವರು ಮತ್ತೆ ಪ್ರಶ್ನಿಸಿದಾಗ ಜನರಿಗೆ ಮನವರಿಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. 1,300 ಟಿಎಂಸಿ ನೀರು ಮಳೆಗಾಲದಲ್ಲಿ ಸಮುದ್ರ ಸೇರುತ್ತಿದೆ. 10-15 ಟಿಎಂಸಿ ನೀರನ್ನು ಬೇರೆಡೆ ಹರಿಸಿದರೆ ತೊಂದರೆಯಾಗದು ಎಂದು ಅಧ್ಯಯನ ನಡೆಸಿ ನಿರ್ಧರಿಸಲಾಗಿತ್ತು. ನೀರು ಕೊಡುವುದು ಸರಕಾರದ ಕರ್ತವ್ಯ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಕಾರಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಆರೇಳು ಸಾವಿರ ಮತ ಗಳಿಸುತ್ತಿದ್ದ ಬಿಜೆಪಿಗೆ ಈಗ 80,000 ಮತ ಬಿದ್ದಿದೆ. ಒಟ್ಟಾರೆ ಪಕ್ಷದ ವರ್ಚಸ್ಸು ಮತ್ತು ನೆಲೆ ಹೆಚ್ಚಿದೆ ಎಂದು ಡಿ.ವಿ. ಸದಾನಂದ ಗೌಡ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.