ಸಮಸ್ಯೆಗಳ ಆಗರ ಬೆಳ್ಮಣ್ ಇಟ್ಟಮೇರಿ ಅಂಗನವಾಡಿ
Team Udayavani, Jun 25, 2019, 5:44 AM IST
ಬೆಳ್ಮಣ್: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಟ್ಟಮೇರಿ ಅಂಗನವಾಡಿಯ ಶೌಚಾಲಯದ ಪೈಪ್‌ಲೈನ್ ಸಂಪರ್ಕ 2 ವರ್ಷಗಳಿಂದ ತೆರೆದ ಸ್ಥಿತಿಯಲ್ಲಿದ್ದು ಪುಟಾಣಿಗಳ ಜತೆ ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಈ ಆಂಗನವಾಡಿಯ ತ್ಯಾಜ್ಯ ಗುಂಡಿಯ ಪೈಪ್‌ಲೈನ್ ಸಂಪರ್ಕ ತೆರೆದ ಸ್ಥಿತಿಯಲ್ಲಿದ್ದ ಬಗ್ಗೆ ಬೆಳ್ಮಣ್ ಗ್ರಾಮ ಪಂಚಾಯತ್‌ಗೆ ಮನವಿ ನೀಡಿದ್ದರೂ ಈ ವರೆಗೂ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಇತ್ತ ಸುಳಿದಿಲ್ಲ. ಸ್ವಚ್ಛ ಭಾರತದ ಕೂಗು ದೇಶಾದ್ಯಂತ ಬಲವಾಗಿದ್ದರೂ ಇಲ್ಲಿ ಮಾತ್ರ ಕ್ಷೀಣಿಸಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಯುವ ಸಂಘಟನೆ ದುರಸ್ತಿ ಮಾಡಿತ್ತು
ಕಳೆದ 6 ತಿಂಗಳ ಹಿಂದೆ ಇಲ್ಲಿನ ಯುವಕ ಮಂಡಲ ಈ ಶೌಚದಾಲಯದ ತ್ಯಾಜ್ಯ ಗುಂಡಿಯ ತೆರೆದ ಪೈಪ್‌ಲೈನನನ್ನು ಮುಚ್ಚಿ ಒಂದಿಷ್ಟು ಮುಕ್ತಿ ನೀಡಿದ್ದರೂ ಮತ್ತೆ ಗುಂಡಿ ತೆರೆದುಕೊಂಡು ದುರ್ನಾತ ಬೀರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪುಟಾಣಿಗಳು ಸಂಕಷ್ಟ ಪಡುವಂತಾಗಿದೆ. ಸ್ಥಳೀಯಾಡಳಿತ ನಿದ್ರಾವಸ್ಥೆಯಲ್ಲಿದ್ದು ಶೀಘ್ರ ದುರಸ್ಥಿಗೆ ಮುಂದಾಗ ಬೇಕೆಂಬುದು ಹೆತ್ತವರ ಆಗ್ರಹ.
ಬೆಂಕಿ ಉಗುಳುವ ಪರಿವರ್ತಕ
ಅಂಗನವಾಡಿ ಪಕ್ಕದಲ್ಲೇ ಇರುವ ವಿದ್ಯುತ್ ಪರಿವರ್ತಕ (ಟಿ.ಸಿ) ಸದಾ ಬೆಂಕಿ ಉಗುಳುತ್ತಿದ್ದು ಇನ್ನಷ್ಟು ಅಪಾಯಕ್ಕೆ ಎಡೆ ಮಾಡಿದೆ. ಇಲ್ಲಿ ಬೇಸಗೆಯಲ್ಲಿ ಹಲವು ಬಾರಿ ಬೆಂಕಿ ಆವರಿಸಿದ್ದೂ ಇದೆ. ಬೆಳ್ಮಣ್ ಮೆಸ್ಕಾಂ ಸಿಬಂದಿ ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಟ್ಟಡದ ಮೇಲೆ ಮರದ ಗೆಲ್ಲು
ಅಂಗನವಾಡಿ ಕಟ್ಟಡದ ಮೇಲೆ ಬಾಗಿರುವ ಮರದ ಗೆಲ್ಲುಗಳು ಬೀಳುವ ಸ್ಥಿತಿಯಲ್ಲಿವೆ. ಗಾಳಿ ಮಳೆಗೆ ಇವು ಮುರಿದು ಬೀಳಬಹುದು ಎಂಬ ಆತಂಕ ಹೆತ್ತವರು ಮತ್ತು ಅಂಗನವಾಡಿ ಕಾರ್ಯಕರ್ತೆ ಯರನ್ನು ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.