ಬೇಕಾದ ಸೌಲಭ್ಯಗಳಿವೆ, ಆದರೆ ತಜ್ಞ ವೈದ್ಯರಿಲ್ಲ..!
Team Udayavani, Mar 11, 2018, 6:00 AM IST
ಶಿರ್ವ: ವೇಗವಾಗಿ ಬೆಳೆಯು ತ್ತಿರುವ ಶಿರ್ವ ಪೇಟೆಯಲ್ಲಿ ಮೇಲ್ದರ್ಜೆಗೇರಿದ ಸಮುದಾಯ ಆರೋಗ್ಯ ಕೇಂದ್ರವೇನೋ ಇದೆ. ಆದರೆ ಇಲ್ಲಿ ತಜ್ಞ ವೈದ್ಯರಿಲ್ಲದೇ ವೈದ್ಯಕೀಯ ಸೌಲಭ್ಯಗಳು ನಾಮ್‌ಕೆವಾಸ್ತೆ ಎಂಬಂತಾಗಿದೆ.
ಉಡುಪಿ ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಿರ್ವವೂ ಒಂದು. ಇದು ಮೇಲ್ದರ್ಜೆಗೇರಿ 17 ವರ್ಷಗಳೇ ಕಳೆದಿವೆ. ಆದರೆ ತಜ್ಞ ವೈದ್ಯರಿಲ್ಲದ್ದರಿಂದ ರೋಗಿಗಳು ಉಡುಪಿ ಅಥವಾ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ.
ತಜ್ಞ ವೈದ್ಯರ 4 ಹುದ್ದೆ ಖಾಲಿ
ಸೀನಿಯರ್ ಮೆಡಿಕಲ್ ಆಫೀಸರ್ ಸೇರಿದಂತೆ ಹೆರಿಗೆ ತಜ್ಞರು,ಮಕ್ಕಳ ತಜ್ಞರು ಹಾಗೂ ಅರಿವಳಿಕೆ ತಜ್ಞರ ಕೊರತೆ ಇಲ್ಲಿದೆ. ಒಟ್ಟು 52 ಹುದ್ದೆಗಳಲ್ಲಿ 13 ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ದಂತ ವೈದ್ಯಾಧಿಕಾರಿ, ಎನ್‌ಸಿಡಿ ವೈದ್ಯಾಧಿಕಾರಿ, ಓರ್ವ ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನವೊಂದಕ್ಕೆ ಸುಮಾರು 70-80 ರೋಗಿಗಳನ್ನು ಪರೀಕ್ಷಿಸುವ ವೈದ್ಯಾಧಿಕಾರಿಗಳು ಇತರ ತರಬೇತಿ, ಪೋಸ್ಟ್‌ಮಾರ್ಟಂ, ಅಂಗನವಾಡಿ ಚೆಕ್‌ಆಪ್ ಕ್ಯಾಂಪ್ ಅಲ್ಲದೆ ಪಕ್ಕದ ಆಸ್ಪತ್ರೆ ಗಳಿಗೆ ನಿಯೋಜನೆಗೊಂಡಲ್ಲಿ ಇಲ್ಲಿನ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡಬೇಕಿದೆ.
ರಾತ್ರಿ ವೈದ್ಯರಿಲ್ಲ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಚಿಕಿತ್ಸೆ ಸಿಗಬೇಕು. ಆದರೆ ವೈದ್ಯರ ಕೊರತೆಯಿಂದ ಇಲ್ಲಿ ಇದು ಸಾಧ್ಯವಾಗುವುದಿಲ್ಲ. ವಿವಿಧ ಸೌಕರ್ಯಗಳಿದ್ದರೂ 3 ಜನ ವೈದ್ಯರಿದ್ದರೆ ಹೊಂದಾಣಿಕೆ ಮಾಡಿಕೊಂಡು ರಾತ್ರಿಯೂ ಚಿಕಿತ್ಸೆ ನೀಡಬಹುದಾಗಿದೆ. ಶೀತಲೀಕೃತ ಶವಾಗಾರ ಬೇಕಿದೆ ಶಿರ್ವ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದೇಶದಲ್ಲಿರುವವರೇ ಹೆಚ್ಚಿದ್ದಾರೆ. ತುರ್ತು ಸಂದರ್ಭ ಇಲ್ಲಿ ಶೀತಲೀಕೃತ ಶವಾಗಾರಕ್ಕಾಗಿ ದೂರದ ಮಣಿಪಾಲ, ಉಡುಪಿ, ಕಾರ್ಕಳದ ಶವಾಗಾರ ಆಶ್ರಯಿಸಬೇಕಾಗಿದೆ. ಈ ಕೊರತೆ ನೀಗಿಸಲು ಸರಕಾರ ಮನಸ್ಸು ಮಾಡಬೇಕಿದೆ.
ವಿದ್ಯುತ್ ಕಂಬಗಳ ಸ್ಥಳಾಂತರವಾಗಿಲ್ಲ
ಸಮುದಾಯ ಕೇಂದ್ರದ ಗೇಟಿನ ಬಳಿಯೇ ಇರುವ ವಿದ್ಯುತ್ ಕಂಬ ಸಮಸ್ಯೆ ಸೃಷ್ಟಿಸಿದೆ. ಇದರಿಂದ ಆ್ಯಂಬುಲೆನ್ಸ್ ತಿರುಗಲು ಕಷ್ಟವಾಗುತ್ತಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ದೂರು ನೀಡಿದ್ದರೂ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರೊಂದಿಗೆ ಪಕ್ಕದಲ್ಲೇ ಇರುವ ಅನಧಿಕೃತ ಗೂಡಂಗಡಿಗಳನ್ನೂ ತೆರವುಗೊಳಿಸಬೇಕಿದೆ.
ಸೌಲಭ್ಯಗಳು
ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಗಳ ಆಸ್ಪತ್ರೆಯಾಗಿದ್ದು ಹೊರ ರೋಗಿಗಳ ಮತ್ತು ಒಳರೋಗಿಗಳ ವಿಭಾಗವನ್ನು ಹೊಂದಿದೆ. 6.5 ಲಕ್ಷ ರೂ. ದಾನಿಗಳಿಂದ ಪಡೆದು, ಸರಕಾರದ ಅನುದಾನದಿಂದ ನಿರ್ಮಿಸಿದ 3 ಟೆಕ್ನಿಶಿಯನ್‌ಗಳು ಇರುವ ಸುಸಜ್ಜಿತ ಪ್ರಯೋಗಾಲಯ, 2 ಟೆಕ್ನಿಶಿಯನ್‌ಗಳ ಎಕ್ಸ್‌ರೇ ವಿಭಾಗ, ದಂತ ಚಿಕಿತ್ಸಾ ವಿಭಾಗ, ಕ್ಯಾನ್ಸರ್‌ಮತ್ತು ಹಿರಿಯ ನಾಗರಿಕರಿಗೆ ಬೇಕಾದ ಬಿ.ಪಿ., ಸಕ್ಕರೆ ಕಾಯಿಲೆ ರೋಗಿಗಳಿಗೆ ಬೇಕಾದ ಚಿಕಿತ್ಸೆಗೆ ಎನ್‌ಸಿಡಿ ವಿಭಾಗದ ವೈದ್ಯರ ತಂಡ ಸೇವೆ ನೀಡುತ್ತಿದೆ. ದಾನಿಗಳ ಸಹಕಾರದಿಂದ 25 ಕೆವಿಎ ಜನರೇಟರ್ ಸೌಲಭ್ಯ ಕಲ್ಪಿಸಲಾಗಿದೆ. ಆ್ಯಂಬುಲೆನ್ಸ್ ಸೇವೆಯೂ ಇದ್ದು, ಚಾಲಕರಿದ್ದಾರೆ.
ಗುಣಮಟ್ಟದ ಚಿಕಿತ್ಸೆಗೆ ಹಿನ್ನಡೆ
ಗ್ರಾಮೀಣ ಪ್ರದೇಶದ ಸರ್ವ ಸುಸಜ್ಜಿತ ಆಸ್ಪತ್ರೆಯಾಗಿದ್ದು ಜನರು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞ ವೈದ್ಯರ ಕೊರತೆಯಿಂದ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಸ್ವಲ್ಪ ಹಿನ್ನಡೆಯಾಗಿದೆ.
– ಡಾ|ಸಂತೋಷ್ ಕುಮಾರ್ ಬೈಲೂರು , ಆಡಳಿತ ವೈದ್ಯಾಧಿಕಾರಿ
– ಸತೀಶ್ಚಂದ್ರ ಶೆಟ್ಟಿ , ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.