ಸಾಗರದಾಳ ಕಾರ್ಯಾಚರಣೆಯ ಹೆಮ್ಮೆ ಐಎನ್‌ಎಸ್ ಸಟ್ಲೆಜ್
Team Udayavani, Feb 12, 2019, 1:00 AM IST
ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನ ಮೀನುಗಾರರು ನಾಪತ್ತೆಯಾಗಿ ತಿಂಗಳು ಕಳೆಯುತ್ತಿದ್ದರೂ ಇಲ್ಲಿಯ ತನಕ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಮೀನುಗಾರರ ಪತ್ತೆಗೆ ಭಾರತೀಯ ನೌಕೆಯ ಐಎನ್‌ಎಸ್ ಸಟ್ಲೆಜ್ (ಜೆ 17) ನೌಕೆ ಸಾಗರದಾಳದ ಕಾರ್ಯಾಚರಣೆಯಲ್ಲಿ ತೊಡಗಿದೆ. ಅದರ ಕಾರ್ಯ ವೈಖರಿ ಹೀಗಿದೆ.
ಐಎನ್‌ಎಸ್ ಸಟ್ಲೆಜ್(ಜೆ 17) ಇದೊಂದು ಹೈಡ್ರೋ ಗ್ರಾಫಿಕ್ ಸರ್ವೇ ನೌಕೆ. ತುರ್ತು ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸೌಲಭ್ಯಗಳು ಇದರಲ್ಲಿವೆ. ಸಮುದ್ರಯಾನ ಹಾಗೂ ಸಾಗರದೊಳಗಿನ ವಸ್ತು ಗಳ ಸಮೀಕ್ಷೆ ನಡೆಸುವಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ.
ಏನೇನಿವೆ?
ಗ್ರೇವಿ ಮೀಟರ್, ಸಾಗರ ವಿಜ್ಞಾನ ಸಂವೇದಕಗಳು, ಸಾಗರ ತಳ ಸ್ಕ್ಯಾನ್ ಮಾಡುವಂತಹ ಸೋನಾರ್ ವ್ಯವಸ್ಥೆ, ಸ್ವಯಂ ಚಾಲಿತ ಡೇಟಾ ಲಾಗಿಂಗ್ ಸೌಲಭ್ಯವನ್ನು ಇದು ಹೊಂದಿದೆ. ಅನಿವಾರ್ಯ ಸಂದರ್ಭಗಳಲ್ಲಿ ಬಂದರು ಪ್ರಾಧಿಕಾರಗಳು ಮತ್ತು ನೌಕೆಗಳು ಈ ಹಡಗಿನ ಸೇವೆಯನ್ನು ಬಳಸಿಕೊಳ್ಳುತ್ತವೆ.
ಮಾಹಿತಿ ಸಿಗುವುದೂ ಕಷ್ಟ
ಸುವರ್ಣ ತ್ರಿಭುಜ ದೋಣಿಯ ಬಗ್ಗೆ ಐಎನ್‌ಎಸ್ ಸಟ್ಲೆಜ್ ಕಲೆ ಹಾಕುತ್ತಿರುವ ಮಾಹಿತಿಯ ಸಂವಹನ ಸುತ್ತು ಬಳಸಿ ನಡೆಯುವುದೂ ಒಂದು ಅಡಚಣೆ. ಉಡುಪಿ ಜಿಲ್ಲೆಯ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರು ಕಾರವಾರದ ಎಸ್‌ಪಿ ವಿನಾಯಕ್ ಪಾಟೀಲ್ ಅವರಿಂದ ಮಾಹಿತಿ ಕೇಳಬೇಕು. ಅನಂತರ ಕಾರವಾರದ ಎಸ್‌ಪಿಯವರು ಕಾರವಾರದ ನೇವಿಯವರನ್ನು ಸಂಪರ್ಕಿಸುತ್ತಾರೆ. ನೇವಿಯವರು ಮುಂಬಯಿಯ ನೇವಿ ಕಚೇರಿಯನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಕಾರ್ಯಾಚರಿಸುತ್ತಿರುವ ಹಡಗನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾಗುತ್ತದೆ. ಅಲ್ಲಿಂದ ಸಿಗುವ ಮಾಹಿತಿಯೂ ಇದೇ ಮಾರ್ಗವಾಗಿ ಹಿಂದಕ್ಕೆ ಬರುತ್ತದೆ.
ಮಾಹಿತಿ ಸಿಗುವುದು ಹೇಗೆ?
ಈ ಕಾರ್ಯಾಚರಣೆಯಲ್ಲಿ ಸಾಗರದಾಳದಲ್ಲಿ ಹುದುಗಿಹೋಗಿದ್ದ ಹಲವಾರು ವಸ್ತುಗಳು ಸಿಗಬಹುದು. ಅದು ಮೃತದೇಹ ಆಗಿರಬಹುದು ಅಥವಾ ಇನ್ನಿತರ ವಸ್ತು ಆಗಿರಬಹುದು. ಹಾಗಾಗಿ ಸಿಕ್ಕಿದ್ದು ಏನು ಎಂಬುದನ್ನು ಖಚಿತಪಡಿಸುವುದಕ್ಕಾಗಿ ಈ ಹಡಗಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಪ್ರಯೋಗಾಲಯ ಇದೆ. ಅದರ ಮೂಲಕ ಲಭಿಸಿದ ವಸ್ತುಗಳ ಮಾಹಿತಿ ಕಲೆ ಹಾಕುವ ಕೆಲಸವೂ ನಡೆಯುತ್ತದೆ.
ಇದು ಸಟ್ಲೆಜ್ ಹೆಮ್ಮೆ
– 2016ರಲ್ಲಿ ತಾಂಜೇನಿಯಾದ ಮೆಕೊನಿ ಬಂದರಿನಲ್ಲಿ ಹೈಡ್ರೋಗ್ರಾಫಿಕ್ ಸರ್ವೆ ನಡೆಸಿತ್ತು.
– 2004ರಲ್ಲಿ ಸಂಭವಿಸಿದ ಸುನಾಮಿಯ ಬಳಿಕ ಶ್ರೀಲಂಕಾದ ನೌಕಾಧಿಕಾರಿಗಳ ಕೋರಿಕೆಯ ಮೇರೆಗೆ ಗಾಲೆ ಮತ್ತು ಕೊಲಂಬೋ ಬಂದರಿನ ಕರಾವಳಿಯಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.