ದಿಕ್ಕು ತಪ್ಪಿ ಬಂದ ವೃದ್ಧೆಗೆ ರಕ್ಷಣೆ ನೀಡಿದ ಸಾರ್ವಜನಿಕರು
Team Udayavani, Mar 24, 2018, 6:50 AM IST
ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಅಂಗಡಿಯ ಜಗುಲಿಯಲ್ಲಿ ಅಪರಿಚಿತ ವಯೋವೃದ್ಧೆ ಒಂಟಿಯಾಗಿರುವುದನ್ನು ಕಂಡು ಅನುಮಾನಗೊಂಡ ಸಾರ್ವಜನಿಕರು ಬೇಳೂರು ಸ್ಫೂರ್ತಿಧಾಮದಲ್ಲಿ ದಾಖಲಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಮಾ. 22ರಂದು ರಾತ್ರಿ ಗಂಟೆ 7ಕ್ಕೆ ಸಂಭವಿಸಿದೆ.
ಕಳೆದೆರಡು ದಿನಗಳಿಂದಲೂ ಅಂಗಡಿಯ ಜಗುಲಿಯಲ್ಲಿ ಒಂಟಿಯಾಗಿದ್ದ ಗಂಗವ್ವ (70) ಹೆಸರಿನ ವಯೋವೃದ್ಧೆಯೋರ್ವರು ಗೋಕಾಕ್ ಮೂಲದವಳು ಎಂದು ಹೇಳಲಾಗುತ್ತಿದ್ದು ಹಿಂದಿ, ತೆಲುಗು ಹಾಗೂ ಕನ್ನಡವನ್ನು ಮಾತನಾಡಬಲ್ಲ ಇವರು ತನ್ನವರಿಗಾಗಿ ತನ್ನವರ ಬರುವಿಕೆ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿರುವುದನ್ನು ಕಂಡ ಸ್ಥಳೀಯರು ತತ್‌ಕ್ಷಣವೇ ಕೋಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು.ತೆಕ್ಕಟ್ಟೆ ಫ್ರೆಂಡ್ಸ್‌ನ ಆ್ಯಂಬುಲೆನ್ಸ್ ಮೂಲಕ ಬೇಳೂರು ಸ್ಫೂರ್ತಿಧಾಮದೆಡೆಗೆ ಕೊಂಡೊಯ್ಯುವ ಜತೆಗೆ ವಯೋವೃದ್ಧೆಗೆ ರಕ್ಷಣೆ ನೀಡಿದರು.
ಗಣಪತಿ ಟಿ.ಶ್ರೀಯಾನ್, ಕಿರಣ್ ತೆಕ್ಕಟ್ಟೆ, ಮಹಮದ್ ಆಸಿಫ್, ಮಧುಕರ, ಭಾಸ್ಕರ, ರಾಜು, ರಾಜೀವ ಶೆಟ್ಟಿ, ರಾಜೀವ ಪೂಜಾರಿ, ಸುರೇಶ್, ಭರತ್, ಅರ್ಜುನ್, ಗಣೇಶ್ ಪ್ರಭು, ಬೇಳೂರು ಸ್ಫೂರ್ತಿಧಾಮದ ಜಿಜಿ ಮೊದಲಾದವರು ಸಹಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.