Udupi: ಬಾಂಗ್ಲಾದಿಂದ ಭಾರತಕ್ಕೆ ವಲಸೆಯ ಉದ್ದೇಶ?
Team Udayavani, Oct 14, 2024, 7:20 AM IST
ಉಡುಪಿ: ಮಲ್ಪೆಯಲ್ಲಿ ಸುಮಾರು 5 ವರ್ಷಗಳಿಂದಲೂ ವಾಸ ಮಾಡಿಕೊಂಡಿದ್ದ ಬಾಂಗ್ಲಾದೇಶದ ವಲಸಿಗರನ್ನು ಬಂಧಿಸಲ್ಪಟ್ಟಿದ್ದು, ಮತ್ತಷ್ಟು ಮಂದಿ ಇರುವ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾರತಕ್ಕೆ ಬರುವ ಅವರ ಉದ್ದೇಶದ ಕಥೆಯೂ ಅಷ್ಟೇ ಭಯಾನಕವಾಗಿದೆ.
ಸಣ್ಣ ವಯೋಮಾನದಲ್ಲಿ ಊರು ಬಿಡುವ ಕೆಲವು ಮಂದಿಯ ತಂಡಕ್ಕೆ ಏಜೆಂಟರೇ ಆಸರೆ. ನಕಲಿ ಪಾರ್ಸ್ ಪೋರ್ಟ್, ಆಧಾರ್ ಕಾರ್ಡ್ ಹೀಗೆ ಎಲ್ಲ ದಾಖಲೆಗಳನ್ನು ನೀಡಿ ಅವರಿಂದ ನಿರ್ದಿಷ್ಟ ಮೊತ್ತ ಪಡೆದು ಭಾರತಕ್ಕೆ ಕರೆಸಲಾಗುತ್ತದೆ. ಸೂಕ್ತ ವಿದ್ಯಾ ಭ್ಯಾಸವೂ ಅವರಿಗೆ ಇರದು. ಹಿಂದಿ ಭಾಷೆಯೊಂದೇ ಅವರಿಗೆ ಆಸರೆ.
ಭಾರತಕ್ಕೆ ಆಗಮಿಸಿ ವಿಂಗಡನೆ
ಮುಖ್ಯವಾಗಿ ಗಡಿಭಾಗದಿಂದ, ಜಲಮಾರ್ಗದ ಮೂಲಕ ಸುಲಭದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸುವ ಇವರು, ಬಳಿಕ ವಿವಿಧ ರಾಜ್ಯಗಳಿಗೆ ತೆರಳಿ ಸಣ್ಣಪುಟ್ಟ ನೌಕರಿ ಹುಡುಕಿಕೊಳ್ಳುತ್ತಾರೆ. ಒಂದೆರಡು ವರ್ಷ ಕೆಲಸ ಮಾಡಿ ಸ್ಥಳೀಯರ ವಿಶ್ವಾಸ ಗಿಟ್ಟಿಸಿಕೊಳ್ಳುವ ಅವರು, ಹಂತಹಂತವಾಗಿ ಹೆಚ್ಚಿನ ವೇತನದೊಂದಿಗೆ ಇತರ ಉದ್ಯೋಗ ವನ್ನೂ ಕಲಿಯ ತೊಡಗುತ್ತಾರೆ. ಬಳಿಕ ಭಾರತೀಯ ಪ್ರಜೆಗಳಂತೆಯೇ ಬಿಂಬಿಸಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ನಕಲಿ ವೋಟರ್ ಐಡಿಗಳನ್ನು ತಮ್ಮ ಏಜೆಂಟರಿಂದ ಮಾಡಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತದೆ ಎನ್ನಲಾಗಿದೆ.
ಮೊದಲ ಹಂತದಲ್ಲಿ ಅವರಿಗೆ ವೇತನಕ್ಕಿಂತಲೂ ಇಲ್ಲಿ ಭದ್ರ ನೆಲೆಯೂರಲು ಅವಕಾಶ ಬೇಕಷ್ಟೇ. ಅನಂತರ ಅವರ ಗುರಿ ಪ್ರತಿಷ್ಠಿತ ರಾಷ್ಟ್ರಗಳು. ಈ ಮಧ್ಯೆ ಅಲ್ಲಿಗೆ ತೆರಳಲು ಬೇಕಾದ ಎಲ್ಲ ದಾಖಲೆಗಳನ್ನು ತಾವಿರುವ ವಿಳಾಸದಡಿ ಸೃಷ್ಟಿಸಿಕೊಳ್ಳುವ ಪ್ರಕ್ರಿಯೆಯೂ ಚಾಲ್ತಿಯಲ್ಲಿರುತ್ತದೆ.
ಸಕ್ರಿಯ ನಕಲಿ ತಯಾರಿ ಜಾಲ
ನಕಲಿ ಪಾಸ್‌ಪೋರ್ಟ್, ಅಂಕಪಟ್ಟಿ, ಆಧಾರ್‌ಕಾರ್ಡ್ ಹೀಗೆ ವಿವಿಧ ರೀತಿಯ ದಾಖಲೆಗಳನ್ನು ತಯಾರಿಸಿ ಕೊಡುವ ಜಾಲವೂ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಬಗ್ಗೆ ಸಂಶಯವನ್ನು ಈ ಪ್ರಕ ರಣ ಬಿತ್ತಿದೆ. ಮಂಗಳೂರಿನಲ್ಲಿ ಸಿಕ್ಕ ಓರ್ವ ಆರೋಪಿ ಈ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರ ವಿಚಾರಣೆಯಿಂದ ಮಾಹಿತಿ ಸಿಗಬೇಕಿದೆ.
ಜಿಲ್ಲೆಯಲ್ಲಿ ಇದುವರೆಗೆ ಇಂತಹ ಪ್ರಕರಣಗಳು ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಈ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಸಾಮತ್ಯೆ ಇದೆಯೇ ಎಂಬ ನಿಟ್ಟಿನಲ್ಲೂ ತನಿಖೆ ಮುಂದು ವರಿಯುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದುಬಾೖಗೆ ಹೋಗಲು ಯತ್ನ
ದುಬಾೖಯಲ್ಲಿ ಭಾರತೀಯರು ಎಂದರೆ ಸ್ವಲ್ಪ ಗೌರವ ಹೆಚ್ಚು. ಬಾಂಗ್ಲಾ ದೇಶದವರು ಎಂದರೆ ಅಷ್ಟಕಷ್ಟೇ. ಹೀಗೆ ಅಲ್ಲಿ ಹೆಚ್ಚಿನ ವೇತನಕ್ಕೆಂದು ತೆರಳು ತ್ತಾರೆ. ಒಂದು ವೇಳೆ ಅಲ್ಲಿ ಸಿಕ್ಕಿಹಾಕಿಕೊಂಡಲ್ಲಿ ಕಳಂಕ ಮಾತ್ರ ಭಾರತಕ್ಕೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಮೂಲ ಸ್ಥಳೀಯ ಪ್ರಾಂತ್ಯದ್ದಾಗಿರುತ್ತದೆ. ಆದರೆ ಅಲ್ಲಿನ ಸ್ಥಳೀಯರಿಗೆ ಆತ ಯಾರೆಂಬುದೇ ತಿಳಿದಿರದು. ಜಿಲ್ಲೆಯಲ್ಲೂ ಈ ಹಿಂದೆ ಇಂತಹ ಕೆಲವು ಪ್ರಕರಣಗಳು ನಡೆದಿವೆ. ಇದಕ್ಕೆ ನಕಲಿ ದಾಖಲೆಗಳು ಕಾರಣ. ಬಂಧಿತರೂ ಇದೇ ಉದ್ದೇಶದಿಂದ ದುಬಾೖಗೆ ತೆರಳಲು ಉದ್ದೇಶಿಸಿದ್ದರು ಎಂಬ ಅಂಶ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.
ಇಂದು ಪೊಲೀಸ್ ಕಸ್ಟಡಿಗೆ
ಆರೋಪಿಗಳನ್ನು ಈಗಾಗಲೇ ನ್ಯಾಯಾಂಗಬಂಧನಕ್ಕೆ ಒಳಪಡಿಸಿದ್ದು, ಸೋಮವಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವರು. ಆರೋಪಿ ಗಳು ಆಧಾರ್‌ಕಾರ್ಡ್‌ಗಳನ್ನು ಫೋರ್ಜರಿ ಮಾಡಿದ್ದಾರೆಯೇ ಅಥವಾ ನಕಲಿ ಕಾರ್ಡ್ ಸೃಷ್ಟಿ ಆಗಿದೆಯೇ ಎಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಿದೆ.
-ಡಾ| ಕೆ.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.