ಡಂಪಿಂಗ್ ಯಾರ್ಡ್ ಆದ ಮಲ್ಪೆ ಕೊಳದ ರಸ್ತೆ
Team Udayavani, Jul 23, 2018, 6:00 AM IST
ಮಲ್ಪೆ: ತ್ಯಾಜ್ಯ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದ್ದು, ಮಲ್ಪೆ ಕೊಳ ಮಾರ್ಗದ ಕೊರೆನೆಟ್ ಕ್ಯಾನಿಂಗ್ ಕಂಪೆನಿಯ ಸಮೀಪದ ರಸ್ತೆಯ ಬದಿ ಯಲ್ಲೂ ತ್ಯಾಜ್ಯದ ಗುಡ್ಡವೇ ಇದ್ದು ಆತಂಕಕ್ಕೆ ಕಾರಣವಾಗಿದೆ.
ಕೋಳಿತ್ಯಾಜ್ಯ, ತರಕಾರಿ ಮೊಟ್ಟಿಗಳ ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ನಾನಾ ರೀತಿಯ ಕಸಗಳನ್ನು ಪೇಟೆಯಲ್ಲಿರುವ ಅಂಗಡಿ ಹೊಟೇಲಿನವರು ಇಲ್ಲಿ ತಂದು ಎಸೆಯುವುದರಿಂದ ತ್ಯಾಜ್ಯರಾಶಿ ಬೃಹದಾಕಾರವಾಗಿ ಬೆಳೆಯುತ್ತ ಹೋಗುತ್ತಿದೆ. ತ್ಯಾಜ್ಯ ರಾಶಿಯಲ್ಲಿರುವ ಕರಗದ ಪ್ಲಾಸ್ಟಿಕ್‌ಗಳು ದನಕರುಗಳ ಆಹಾರವಾಗುತ್ತಿದೆ. ಈಗ ಮಳೆ ಸಂದರ್ಭ ಸೊಳ್ಳೆಗಳು ಉತ್ಪತ್ತಿ ಯಾಗುವುದರಿಂದ ಪರಿಸರದ ಜನರಿಗೆ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಬೀದಿ ನಾಯಿಗಳ ಕಾಟ..
ತ್ಯಾಜ್ಯದಿಂದಾಗಿ ಸಾಕಷ್ಟು ದುರ್ಗಂಧ ಸುತ್ತಮುತ್ತಲಿನ ಪರಿಸರದಲ್ಲಿ ಹರಡಿದ್ದು ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕೊಳೆತ ತ್ಯಾಜ್ಯಗಳನ್ನು ಕಾಗೆಗಳು ತಿನ್ನಲು ಎಳೆದಾಡಿ ಪರಿಸ್ಥಿತಿ ಉಲ್ಬಣಿಸಲು ಕಾರಣವಾಗಿದೆ. ನಾಯಿಗಳು ಆಹಾರ ಹುಡುಕುತ್ತಾ ತ್ಯಾಜ್ಯಗಳನ್ನು ಎಳೆದಾಡುತ್ತಿದ್ದು ಒಂದಕ್ಕೊಂದು ಜಗಳವಾಗುತ್ತಿರುವುದು ಈ ದಾರಿಯಲ್ಲಿ ಸಾಗಲು ಭೀತಿ ಉಂಟಾಗಿದೆ.
ಎರಡು ಮೂರು ದಿನಕ್ಕೆ ಕಸವನ್ನು ತೆರವುಗೊಳಿಸಿದರೂ ತೆರವುಗೊಂಡ ಮಾರನೇ ದಿನವೇ ಅಷ್ಟೆ ಎತ್ತರದಲ್ಲಿ ಕಸದ ರಾಶಿ ಪ್ರತ್ಯಕ್ಷವಾಗುವುದು ಆಡಳಿತಕ್ಕೆ ತಲೆನೋವಾಗಿದೆ. ಇಲ್ಲಿನ ಕೇವಲ ಸ್ಥಳೀಯ ಅಂಗಡಿ, ಹೋಟೇಲಿನವರು ಮಾತ್ರ ಅಲ್ಲ. ಹೊರಗಿನವರೂ ರಾತ್ರಿ ಹೊತ್ತಲ್ಲಿ ಬಂದು ಕಸವನ್ನು ಬಿಸಾಡಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರಸಭೆ ಕಠಿನ ಕ್ರಮ ಕೈಗೊಳ್ಳಲಿ
ಹೊರವಲಯದ ಜನರು ಬಂದು ಇಲ್ಲಿ ಗೋಣಿ ಚೀಲದಲ್ಲಿ ತಂದು ಎಸೆಯುತ್ತಾರೆ. ಇಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ದ ನಗರಸಭೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಭಾಗದಲ್ಲಿ ಕಸ ಎಸೆಯದಂತೆ ಆ ಜಾಗವನ್ನು ಸ್ವಚ್ಚಗೊಳಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿದೆ.
– ಮಂಜು ಕೊಳ ,ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.