ಕುಂಚದಲ್ಲಿ ಅನಾವರಣಗೊಂಡ ಗ್ರಾಮೀಣ ಬದುಕು
Team Udayavani, Mar 10, 2019, 1:00 AM IST
ಉಡುಪಿ: ಕರಾವಳಿಯ ಗ್ರಾಮೀಣ ಬದುಕು ಕಲೆ ರೂಪದಲ್ಲಿ ಮಣಿಪಾಲದಲ್ಲಿ ಅನಾವರಣಗೊಂಡಿದೆ. ತ್ರಿವರ್ಣ ಸೆಂಟರ್ ವತಿಯಿಂದ ಮಣಿಪಾಲ ಗೀತಾಮಂದಿರದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ “ವಿಲೇಜ್ ಲೈಫ್’ ಚಿತ್ರಕಲಾ ಪ್ರದರ್ಶನ ಶನಿವಾರ ಆರಂಭಗೊಂಡಿತು.
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್ ಅವರು “ಚಿತ್ರಕಲೆಯಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಕೈಬೆರಳುಗಳಿಗೆ ವ್ಯಾಯಾಮ ಸಿಗುವ ಜತೆಗೆ ಮಾನಸಿಕ ಸದೃಢತೆಯೂ
ಉಂಟಾಗುತ್ತದೆ. ಇಂತಹ ಚಟುವಟಿಕೆಗಳಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲೂ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್.ಶಾಂತಾರಾಮ್ ಅವರು ಮಾತನಾಡಿ, “ಗ್ರಾಮೀಣ ಬದುಕು ಇಂದು ಬದಲಾಗುತ್ತಿದೆ. ಚಿತ್ರಪ್ರದರ್ಶನವನ್ನು ವೀಕ್ಷಿಸಿದರೆ ಗ್ರಾಮೀಣ ಬದುಕಿನ ಸೊಬಗಿನ ಪರಿಚಯ ಸಾಧ್ಯವಾಗಲಿದೆ’ ಎಂದು ಹೇಳಿದರು.
ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ (ಆ್ಯಕ್ಟ್) ಅಧ್ಯಕ್ಷ ಮನೋಹರ ಶೆಟ್ಟಿ, ಸೋನಿಯಾ ಕ್ಲಿನಿಕ್‌ನ ಮಕ್ಕಳ ತಜ್ಞೆ ಡಾ| ಗೌರಿ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ, ತ್ರಿವರ್ಣ ಸೆಂಟರ್‌ನ ನಿರ್ದೇಶಕ ಹರೀಶ್ ಸಾಗ ಉಪಸ್ಥಿತರಿದ್ದರು.
ಸುನಿಧಿ ಶೆಟ್ಟಿ ಸ್ವಾಗತಿಸಿದರು. ಅನುಷಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಾಧ್ಯಾಪಕ ಡಿ.ವಿ.ಶೆಟ್ಟಿಗಾರ್ ವಂದಿಸಿದರು.
ಕಲೆ ಪ್ರವಾಸೋದ್ಯಮದ ಭಾಗ
ಉಡುಪಿ ಉತ್ತಮ ಪ್ರವಾಸಿ ತಾಣ. ಚಿತ್ರಕಲೆ ಸೇರಿದಂತೆ ವಿವಿಧ ರೀತಿಯ ಕಲೆ ಕೂಡ ಪ್ರವಾಸೋದ್ಯಮದ ಭಾಗವಾಗಿದೆ. ಇಲ್ಲಿನ ವೈಶಿಷ್ಟéಗಳನ್ನು ಚಿತ್ರಗಳ ಮೂಲಕ ಪ್ರವಾಸಿಗರಿಗೆ ತೋರಿಸಿಕೊಡುವ ಪ್ರಯತ್ನಗಳು
ನಡೆಯಬೇಕಿದೆ. ಇಂತಹ ಕಲೆಗಳ ಪ್ರದರ್ಶನಕ್ಕೆ ಸುವ್ಯವಸ್ಥಿತ ಕೇಂದ್ರವೂ ನಿರ್ಮಾಣವಾಗಬೇಕು.
– ಮನೋಹರ್ ಶೆಟ್ಟಿ , ಅಧ್ಯಕ್ಷರು ಆ್ಯಕ್ಟ್
24 ಕಲಾವಿದರು ಭಾಗಿ
ಅಕ್ರಾಲಿಕ್ ಕ್ಯಾನ್ವಾಸ್‌ನ 18 ಹಾಗೂ ಚಾರ್ಕೋಲ್ ಪೇಪರ್ ಮಾಧ್ಯಮದ 6 ಕಲಾಕೃತಿಗಳು ಹಳ್ಳಿಸೊಗಡನ್ನು ಕಟ್ಟಿಕೊಡುತ್ತವೆ. ಕಲಾಕೃತಿಗಳನ್ನು ಬೈಹುಲ್ಲಿನ ಚಪ್ಪರ, ಮಾವಿನ ಎಲೆಯ ತೋರಣದ ನಡುವೆ ಪ್ರದರ್ಶಿಸಲಾಗಿದೆ. ಅಕ್ಕಿಮುಡಿ ಕಟ್ಟುವುದು, ದನ-ಕರುಗಳೊಂದಿಗೆ ಸಾಗುವ ಮಹಿಳೆ, ಬೆಂಕಿ ಮಾಡುತ್ತಿರುವ ತಾಯಿ, ಲಗೋರಿ ಆಡುತ್ತಿರುವ ಹುಡುಗ, ಐಸ್‌ಕ್ಯಾಂಡಿ ಮಾರಾಟ, ಮಗುವಿಗೆ ಎಣ್ಣೆ ಸ್ನಾನ, ಬುಗುರಿ ತಿರುಗಿಸುತ್ತಿರುವ ಬಾಲಕ, ತೋರಣ ಕಟ್ಟುವುದು, ಓದುವ ಬಾಲಕಿ, ಮಡಲು ನೇಯುತ್ತಿರುವ ಚಿತ್ರಣಗಳಿವೆ. 19ರಿಂದ 75 ವರ್ಷ ವಯಸ್ಸಿನ 24 ಮಂದಿ ಕಲಾವಿದರ ಕೃತಿಗಳು ಈ ಪ್ರದರ್ಶನದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.